ಗುರುವಾರ, ಡಿಸೆಂಬರ್ 26, 2019

ಸರಕಾರ ಹಾಗೂ ಆಯೋಗದ ಲಾಂಛನ, ಹೆಸರು ಬಳಸಿದರೆ ಕ್ರಮ
ಯಾದಗಿರಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಂಸ್ಥೆಗಳು, ಅರೆ ನ್ಯಾಯಿಕ ಸಂಸ್ಥೆಗಳಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೋಲುವಂತಹ ಲಾಂಛನ ಹಾಗೂ ಹೆಸರುಗಳನ್ನು ಖಾಸಗಿ ಸಂಘಟನೆ, ಸಂಘ-ಸಂಸ್ಥೆ, ಕಂಪನಿ, ವ್ಯಕ್ತಿಗಳು ಉಪಯೋಗಿಸಿದರೆ ಕಲಂ 3, 4, ಮತ್ತು 6 ರ Emblems and Names (prevention of improper use) Act  1950 ಪ್ರಕಾರ ಅಪರಾಧವಾಗುತ್ತದೆ. ಒಂದು ವೇಳೆ ಲಾಂಛನ ಮತ್ತು ಹೆಸರುಗಳನ್ನು ಉಪಯೋಗಿಸಿದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾರಿಶಕ್ತಿ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ಭಾರತ ಸರ್ಕಾರವು 2019-20ನೇ ಸಾಲಿನಲ್ಲಿ “ನಾರಿಶಕ್ತಿ ಪುರಸ್ಕಾರ” ಪ್ರಶಸ್ತಿಗಳನ್ನು ನೀಡಲು ಅರ್ಹ ಮಹಿಳೆ, ಸಂಘ- ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ವೆಬ್‍ಸೈಟ್: www.narishaktipuraskar.wcd.gov.in ನಲ್ಲಿ ಜನವರಿ 7ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 7ರಂದು ಯುವಜನ ಮೇಳ: ನೋಂದಣಿಗೆ ಸೂಚನೆ
ಯಾದಗಿರಿ, ಡಿಸೆಂಬರ್ 26 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಜನವರಿ 7ರಂದು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, 15ರಿಂದ 35 ವರ್ಷದೊಳಗಿನ ಯುವಕ- ಯುವತಿಯರು ಭಾಗವಹಿಸಬಹುದು.
ಸ್ಪರ್ಧೆಗಳ ವಿವರ: ಕೋಲಾಟ (12 ಜನ ಗುಂಪು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ), ಡೊಳ್ಳು ಕುಣಿತ (10 ಜನರಿಗೆ) ದೊಡ್ಡಾಟ (10 ಜನರ ಗುಂಪು), ಜಾನಪದ ನೃತ್ಯ (12 ಜನರ ಗುಂಪು), ಜನಪದ ಗೀತೆ (ವೈಯಕ್ತಿಕ ಮತ್ತು ಗುಂಪು), ಭಜನೆ ಪದ (12 ಜನ), ಭಾವಗೀತೆ (2), ತಬಲಾ ವಾದ್ಯ (ವೈಯಕ್ತಿಕ), ಹಾರ್ಮೋನಿಯಂ (ವೈಯಕ್ತಿಕ), ಸಣ್ಣಾಟ (12 ಜನ), ವೀರಗಾಸೆ (12 ಜನ), ಗೀಗೀಪದ (10 ಜನ) ಜೋಳ ಬೀಸುವ/ಕುಟ್ಟುವ ಪದ (5 ಜನ), ಸೋಬಾನ ಪದ (12 ಜನ), ಶಾಸ್ತ್ರೀಯ ಸಂಗೀತ (6 ಜನ), ಚರ್ಮವಾದ್ಯ ಮೇಳ, ಏಕ ಪಾತ್ರಾಭಿನಯ.
ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಕಲಾ ತಂಡಗಳು, ಯುವಕ ಸಂಘಗಳ ಸದಸ್ಯರುಗಳು ಕೂಡ ಭಾಗವಹಿಸಬಹುದು. ವಯಸ್ಸಿನ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ತರತಕ್ಕದ್ದು. ಯುವಜನ ಮೇಳದಲ್ಲಿ ಭಾಗವಹಿಸುವ ಕಲಾವಿದರಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯವಿದ್ದು, ಬ್ಯಾಂಕ್ ಪಾಸ್‍ಬುಕ್ ಮತ್ತು ಆಧಾರ್ ಕಾರ್ಡ್ ಜಿರಾಕ್ಸ್ ಪ್ರತಿ ಕಡ್ಡಾಯವಾಗಿ ತರತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಯುವಜನ ಮೇಳದಲ್ಲಿ ವೈಯಕ್ತಿಕ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದವರಿಗೆ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ:9945626104, 9886675263 ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚನಬಸಪ್ಪ ಕುಳಗೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...