ಶುಕ್ರವಾರ, ಡಿಸೆಂಬರ್ 6, 2019

ಡಿ.೨೧ರಂದು ಬೀದಿಬದಿ ವ್ಯಾಪಾರಿಗಳ ಚುನಾವಣೆ
ಯಾದಗಿರಿ, ಡಿಸೆಂಬರ್ ೦೬ (ಕರ್ನಾಟಕ ವಾರ್ತೆ): ಕೆಂಭಾವಿ ಮತ್ತು ಕಕ್ಕೇರಾ ಪುರಸಭೆಗಳ ಬೀದಿಬದಿ ವ್ಯಾಪಾರಿಗಳ ಪಟ್ಟಣ ವ್ಯಾಪಾರ ಸಮಿತಿಗಳ ಸಾಮಾನ್ಯ ಚುನಾವಣೆಯು ಡಿಸೆಂಬರ್ ೨೧ರಂದು ಬೆಳಿಗ್ಗೆ ೯ರಿಂದ ಸಾಯಂಕಾಲ ೪ ಗಂಟೆಯವರೆಗೆ ನಡೆಯಲಿದೆ ಎಂದು ಚುನಾವಣೆ ರಿಟರ್ನಿಂಗ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಂಭಾವಿ ಪುರಸಭೆಗೆ ಸಾಮನ್ಯ ಕ್ಷೇತ್ರ-೨, ಹಿಂದುಳಿದ ವರ್ಗ ೧, ಮಹಿಳೆ ೩, ಪರಿಶಿಷ್ಟ ಜಾತಿ ೧, ಪರಿಶಿಷ್ಟ ಪಂಗಡ ೧, ಅಲ್ಪಸಂಖ್ಯಾತರ ೧, ವಿಕಲಚೇತನರಿಗೆ ೧ ಸ್ಥಾನ ಸೇರಿದಂತೆ ಒಟ್ಟು ೧೦ ಸ್ಥಾನಗಳನ್ನು ಆಯ್ಕೆ ಮಾಡಬೇಕಿದೆ. ಅದರಂತೆ ಕಕ್ಕೇರಾ ಪುರಸಭೆಗೆ ಸಾಮನ್ಯ ಕ್ಷೇತ್ರ-೨, ಹಿಂದುಳಿದ ವರ್ಗ ೧, ಮಹಿಳೆ ೩, ಪರಿಶಿಷ್ಟ ಜಾತಿ ೧, ಪರಿಶಿಷ್ಟ ಪಂಗಡ ೧, ಅಲ್ಪಸಂಖ್ಯಾತರ ೧, ವಿಕಲಚೇತನರಿಗೆ ೧ ಸ್ಥಾನ ಸೇರಿದಂತೆ ಒಟ್ಟು ೧೦ ಸ್ಥಾನಗಳನ್ನು ಆಯ್ಕೆ ಮಾಡಬೇಕಿದೆ.
ಡಿಸೆಂಬರ್ ೯ರಿಂದ ಡಿ.೧೩ರವರೆಗೆ ಬೆಳಿಗ್ಗೆ ೧೧ರಿಂದ ವ್ಮಧ್ಯಾಹ್ನ ೩ ಗಂಟೆಯವರೆಗೆ ಆಯಾ ಪುರಸಭೆಗಳ ಕಾರ್ಯಾಲಯದಲ್ಲಿ ಅಭ್ಯರ್ಥಿಗಳು ನಾಮಪತ್ರö ಸಲ್ಲಿಸಬಹುದು. ಡಿಸೆಂಬರ್ ೧೪ರಂದು ಬೆಳಿಗ್ಗೆ ೧೧ ಗಂಟೆಯಿAದ ನಾಮಪತ್ರಗಳ ಪರಿಶೀಲನೆ ನಡೆಸಿ, ಕ್ರಮಬದ್ಧ ನಾಮಪತ್ರಗಳ ಪಟ್ಟಿಯ ಪ್ರಕಟಣೆ ಮಾಡಲಾಗುವುದು. ಡಿಸೆಂಬರ್ ೧೫ರಂದು ಸಂಜೆ ೫ ಗಂಟೆಯವರೆಗೆ ನಾಮಪತ್ರಗಳ ಹಿಂತೆಗೆದುಕೊಳ್ಳಬಹುದು. ನಂತರ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಪ್ರಕಟಿಸಲಾಗುವುದು. ಡಿಸೆಂಬರ್ ೧೬ರಂದು ಅಭ್ಯರ್ಥಿಗಳು ಅಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ ನಡೆಯಲಿದೆ. ಡಿಸೆಂಬರ್ ೨೧ರಂದು ಮತದಾನ ನಡೆಯಲಿದ್ದು, ಮತದಾನದ ನಂತರ ರಿಟರ್ನಿಂಗ್ ಅಧಿಕಾರಿಗಳಿಂದ ಫಲಿತಾಂಶ ಘೋಷಣೆ ಮಾಡಲಾಗುವುದು.
ಈಗಾಗಲೇ ಕಳೆದ ಸೆಪ್ಟೆಂಬರ್ ೨೪ರವರೆಗೆ ನೋಂದಾಯಿತ ಮತ್ತು ಬೀದಿ ವ್ಯಾಪಾರಸ್ಥರ ಗುರುತಿನ ಚೀಟಿ ಹೊಂದಿದ ಸದಸ್ಯರು ಮಾತ್ರ ಈ ಚುನಾವಣೆಗೆ ಸ್ಪರ್ಧಿಸಲು ಹಾಗೂ ಮತ ಚಲಾಯಿಸುವುದಕ್ಕೆ ಅರ್ಹತೆ ಹೊಂದಿರುತ್ತಾರೆ. ನಾಮಪತ್ರ ಸಲ್ಲಿಸುವಾಗ ಚುನಾವಣಾ ಠೇವಣಿ ಬಾಬ್ತು ೨೦೦೦ ರೂ.ಗಳನ್ನು ನಗದು ಅಥವಾ ಪೇ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಪ್ಟ್ ಮೂಲಕ ಮುಖ್ಯಾಧಿಕಾರಿಗಳು, ಪುರಸಭೆ ಕೆಂಭಾವಿ/ ಕಕ್ಕೇರಾ ಇವರ ಹೆಸರಲ್ಲಿ ಸಲ್ಲಿಸತಕ್ಕದ್ದು. ನಾಮಪತ್ರ ಹಾಗೂ ಇನ್ನಿತರ ಮಾಹಿತಿಗಾಗಿ ರಿಟರ್ನಿಂಗ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಸಿಆರ್‌ಪಿ, ಬಿಆರ್‌ಪಿ, ಶಿಕ್ಷಣ ಸಂಯೋಜಕ ಹುದ್ದೆಗಳಿಗೆ ಅರ್ಜಿ
ಯಾದಗಿರಿ, ಡಿಸೆಂಬರ್ ೦೬ (ಕರ್ನಾಟಕ ವಾರ್ತೆ): ೨೦೧೯ರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ ವೃಂದದ ಸಿಆರ್‌ಪಿ, ಬಿಆರ್‌ಪಿ, ಶಿಕ್ಷಣ ಸಂಯೋಜಕ ಈ ನಿರ್ದಿಷ್ಟ ಹುದ್ದೆಗಳನ್ನು ಲಿಖಿತ ಪರೀಕ್ಷೆ ಮೂಲಕ ಭರ್ತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಾರ್ಗಸೂಚಿ ಮತ್ತು ವೇಳಾ ಪಟ್ಟಿಯನ್ನು ನೀಡಿದ್ದು, ಅರ್ಹ ಶಿಕ್ಷಕರು ಡಿಸೆಂಬರ್ ೨೪ರೊಳಗಾಗಿ ಇಲಾಖೆಯ ವೈಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಬಾಲವೇದಿಕೆ, ವಾರಾಂತ್ಯ ಕಾರ್ಯಾಗಾರ ಉದ್ಘಾಟನೆ
ಯಾದಗಿರಿ, ಡಿಸೆಂಬರ್ ೦೬ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲವೇದಿಕೆ ಹಾಗೂ ವಾರಾಂತ್ಯ ಕಾರ್ಯಾಗಾರ ಉದ್ಘಾಟನಾ ಸಮಾರಂಭವನ್ನು ಡಿಸೆಂಬರ್ ೮ರಂದು ಸಂಜೆ ೬ ಗಂಟೆಗೆ ಯಾದಗಿರಿ ನಗರದ ಲುಂಬಿನಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ಅಧ್ಯಕ್ಷತೆ ವಹಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶರಾದ ಪ್ರಭಾಕರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ದೊಡ್ಡಪ್ಪ ಹೊಸಮನಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಡಾ.ಹಣಮಂತ್ರಾಯ ಕರಡಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ರಜಿನಿಕಾಂತ್, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮೀನು ಪಾಶುವಾರು ಟೆಂಡರ್ ಹರಾಜು
ಯಾದಗಿರಿ, ಡಿಸೆಂಬರ್ ೦೬ (ಕರ್ನಾಟಕ ವಾರ್ತೆ): ಸುರಪುರ ತಾಲ್ಲೂಕಿನ ಗೋಡಿಹಾಳ ಕೆರೆ ಮತ್ತು ದೇವರಗೋನಾಳ ಭಾವಗಿ ಕೆರೆಗಳ ಮೀನು ಪಾಶುವಾರು ಹಕ್ಕನ್ನು ೨೦೧೯-೨೦ನೇ ಮೀನುಗಾರಿಕೆ ಫಸಲಿ ವರ್ಷದಿಂದ ೨೦೨೩-೨೪ನೇ ಮೀನುಗಾರಿಕೆ ಫಸಲಿ ವರ್ಷದವರೆಗೆ (ಅಂದರೆ ದಿನಾಂಕ ೦೧-೦೭-೨೦೧೯ ರಿಂದ ೩೦-೦೬-೨೦೨೪ ರವರೆಗೆ) ಗರಿಷ್ಠ ೫ ವರ್ಷಗಳ ಅವಧಿಗೆ ಸರ್ಕಾರದ ನಿಯಮಗಳ ಮೇರೆಗೆ ಟೆಂಡರ್ ಮತ್ತು ಹರಾಜಿನ ಮೂಲಕ ವಿಲೇವಾರಿ ಮಾಡಲಾಗುವುದು.
ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಸುರಪುರ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಡೆಸೆಂಬರ್ ೧೬ರೊಳಗಾಗಿ ಸಲ್ಲಿಸಬೇಕು. ಟೆಂಡರ್ ಅರ್ಜಿಗಳನ್ನು ಡಿ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ಸುರಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತೆರೆಯಲಾಗುವುದು. ಷರತ್ತು ಮತ್ತು ನಿಬಂಧನೆಗಳು ಮತ್ತು ಬರೆದು ಕೊಡಬೇಕಾದ ಮುಚ್ಚಳಿಕೆ ಪತ್ರ ಹಾಗೂ ಇನ್ನಿತರ ಮಾಹಿತಿಗಾಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...