ಶುಕ್ರವಾರ, ಡಿಸೆಂಬರ್ 20, 2019

ನಾಳೆ ವಿದ್ಯುತ್ ವ್ಯತ್ಯಯ
ಯಾದಗಿರಿ, ಡಿಸೆಂಬರ್ ೨೦ (ಕರ್ನಾಟಕ ವಾರ್ತೆ): ೧೧ ಕೆವಿ ವಿದ್ಯುತ್ ಮಾರ್ಗಗಳ ಐ.ಪಿ.ಡಿ.ಎಸ್ ಕಾಮಗಾರಿ ಕೆಲಸ ಕೈಗೊಳ್ಳುತ್ತಿರುವುದರಿಂದ ಯಾದಗಿರಿ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ಡಿಸೆಂಬರ್ ೨೨ರಂದು ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಇAಡಸ್ಟಿçÃಯಲ್ ಏರಿಯಾ (ಎಫ್-೪) ವ್ಯಾಪ್ತಿಯ ಮುಂಡರಗಿ ಇಂಡಸ್ಟಿçÃಯಲ್ ಏರಿಯಾ ಮತ್ತು ವರ್ಕನಹಳ್ಳಿ ಇಂಡಸ್ಟಿçÃಯಲ್ ಏರಿಯಾ ಹಾಗೂ ಮಾತಾ ಮಾಣಿಕೇಶ್ವರಿ ನಗರ (ಎಫ್-೧) ವ್ಯಾಪ್ತಿಯ ಶಹಜೀವನ್ ಶಾ ದರ್ಗಾ, ಅನಪೂರ ಮೌಲಾಲಿ ಲೇಔಟ್, ಆದರ್ಶ ನಗರ, ಹೊಸಳ್ಳಿ ಕ್ರಾಸ್ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗ್ರಾಹಕರು ಜೆಸ್ಕಾಂನೊAದಿಗೆ ಸಹಕರಿಸಬೇಕಾಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಡಿ.೨೩ರಂದು ವಿದ್ಯುತ್ ಗ್ರಾಹಕರ ಸಭೆ
ಯಾದಗಿರಿ, ಡಿಸೆಂಬರ್ ೨೦ (ಕರ್ನಾಟಕ ವಾರ್ತೆ): ಯಾದಗಿರಿ ಉಪ ವಿಭಾಗದ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ೨೩ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜೆಸ್ಕಾಂ ಯಾದಗಿರಿ ಉಪ ವಿಭಾಗ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ಡಿ.೨೭ರಂದು ಸ್ಥಾಯಿ ಸಮಿತಿ ಸಭೆ
ಯಾದಗಿರಿ, ಡಿಸೆಂಬರ್ ೨೦ (ಕರ್ನಾಟಕ ವಾರ್ತೆ): ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸಭೆಯನ್ನು ಸಮಿತಿಯ ಅಧ್ಯಕ್ಷರಾದ ಭೀಮರೆಡ್ಡಿ ಗೌಡ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ ೨೭ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯುವಜನ ಮೇಳದಲ್ಲಿ ಭಾಗವಹಿಸಲು ಸೂಚನೆ
ಯಾದಗಿರಿ, ಡಿಸೆಂಬರ್ ೨೦ (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಜನವರಿ ೪ರಂದು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ೧೫ರಿಂದ ೩೫ ವರ್ಷದೊಳಗಿನ ಯುವಕ- ಯುವತಿಯರು ಭಾಗವಹಿಸಬಹುದು.
ಸ್ಪರ್ಧೆಗಳ ವಿವರ: ಕೋಲಾಟ (೧೨ ಜನ ಗುಂಪು ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ), ಡೊಳ್ಳು ಕುಣಿತ (೧೦ ಜನರಿಗೆ) ದೊಡ್ಡಾಟ (೧೦ ಜನರ ಗುಂಪು), ಜಾನಪದ ನೃತ್ಯ (೧೨ ಜನ ಗುಂಪು), ಜನಪದ ಗೀತೆ (ವೈಯಕ್ತಿಕ ಮತ್ತು ಗುಂಪು), ಭಜನೆ ಪದ (೧೨ ಜನ), ಭಾವಗೀತೆ (೨), ತಬಲಾ ವಾದ್ಯ (ವೈಯಕ್ತಿಕ), ಹಾರ್ಮೋನಿಯಂ (ವೈಯಕ್ತಿಕ), ಸಣ್ಣಾಟ (೧೨ ಜನ), ವೀರಗಾಸೆ (೧೨ ಜನ), ಗೀಗೀಪದ (೧೦ ಜನ) ಜೋಳ ಬೀಸುವ/ಕುಟ್ಟುವ ಪದ (೫ ಜನ), ಸೋಬಾನ ಪದ (೧೨ ಜನ), ಶಾಸ್ತಿçÃಯ ಸಂಗೀತ (೬ ಜನ), ಚರ್ಮವಾದ್ಯ ಮೇಳ, ಏಕ ಪಾತ್ರಾಭಿನಯ.
ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಕಲಾ ತಂಡಗಳು, ಯುವಕ ಸಂಘಗಳ ಸದಸ್ಯರುಗಳು ಕೂಡ ಭಾಗವಹಿಸಬಹುದು. ವಯಸ್ಸಿನ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ತರತಕ್ಕದ್ದು. ಯುವಜನ ಮೇಳದಲ್ಲಿ ಭಾಗವಹಿಸುವ ಕಲಾವಿದರಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ಸೌಲಭ್ಯವಿದ್ದು, ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್ ಜಿರಾಕ್ಸ್ ಪ್ರತಿ ಕಡ್ಡಾಯವಾಗಿ ತರತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಯುವಜನ ಮೇಳದಲ್ಲಿ ವೈಯಕ್ತಿಕ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಂದವರಿಗೆ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ:೯೯೪೫೬೨೬೧೦೪, ೯೮೮೬೬೭೫೨೬೩ ಸಂಪರ್ಕಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಚನಬಸಪ್ಪ ಕುಳಗೇರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...