ಗುರುವಾರ, ಡಿಸೆಂಬರ್ 5, 2019

ಲಿಂಗತ್ವ ತರಬೇತಿ ಕಾರ್ಯಾಗಾರ
ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ದೊರೆಯಲಿ
-:ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್
ಯಾದಗಿರಿ, ಡಿಸೆಂಬರ್ ೦೫ (ಕರ್ನಾಟಕ ವಾರ್ತೆ): ಸಾಮಾಜಿಕ ವ್ಯವಸ್ಥೆಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಸಿಗಬೇಕು. ಈ ನಿಟ್ಟಿನಲ್ಲಿ ಅವರಿಗೆ ಕಾನೂನಿನಲ್ಲಿ ಕಲ್ಪಿಸಿರುವ ಅವಕಾಶಗಳನ್ನು ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಹೇಳಿದರು.
ನಗರದ ಜಿಲ್ಲಾ ಬಾಲ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕ
ಳ ಅಭಿವೃದ್ಧಿ ಇಲಾಖೆ ಹಾಗೂ ಮಹಿಳಾ ಸಮಾಖ್ಯಾ ಕರ್ನಾಟಕ ಯಾದಗಿರಿ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಮಹಿಳೆಯರ ಬಗ್ಗೆ ಸಕರಾತ್ಮಕ ಮನೋಭಾವ ಮೂಡಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸಲು “ಲಿಂಗತ್ವ ತರಬೇತಿ” ಕಾರ್ಯಾಗಾರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಪುರುಷ ಮತ್ತು ಸ್ತಿçÃಯರ ಮಧ್ಯೆ ಸಾಮಾಜಿಕವಾಗಿ ಬಂದ ವ್ಯತ್ಯಾಸವನ್ನು ಲಿಂಗತ್ವ ಎಂದು ಗುರುತಿಸಲಾಗುತ್ತದೆ. ಜಿಲ್ಲೆಯಲ್ಲಿ ಮಹಿಳೆಯರ ಬಗ್ಗೆ ಸಕಾರಾತ್ಮಕ ಮನೋಭಾವ ಮೂಡಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸಲು ಲಿಂಗತ್ವ ತರಬೇತಿ ಹಮ್ಮಿಕೊಂಡಿರುವುದು ವಿನೂತನ ಹಾಗೂ ವಿಶೇಷ ಕಾರ್ಯಕ್ರಮವಾಗಿದೆ. ಮಹಿಳಾ ಸಮಖ್ಯಾ ಸಂಸ್ಥೆಯವರು ಜಿಲ್ಲೆಯ ೧೮೦ ಹಳ್ಳಿಗಳಲ್ಲಿ ಸಂಘಟನೆ ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳ ಯಶಸ್ವಿಗೆ ಸರಕಾರಿ ಇಲಾಖೆಗಳ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ಎಂದು ಅವರು ಸಲಹೆ ನೀಡಿದರು.
ಜಿಲ್ಲಾ ಮಹಿಳಾ ಸಮಖ್ಯಾ ಘಟಕದ ಜಿಲ್ಲಾ ಪ್ರಭಾರ ಸಂಯೋಜಕರಾದ ವಿಮಲಾಕ್ಷಿ ಆರ್.ಹಿರೇಮಠ ಅವರು ಮಾತನಾಡಿ, ಕುಟುಂಬ ಮತ್ತು ಸಮಾಜದಲ್ಲಿ ಸ್ತಿçÃಯರಿಗೆ ರಕ್ಷಣೆ ನೀಡುವಲ್ಲಿ, ಅವಕಾಶಗಳು ಕೊಡುವಲ್ಲಿ ಪುರುಷ ಪ್ರಧಾನ ಸಮಾಜ ಏಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಸಾಮಾಜಿಕ ಅನಿಷ್ಠ ಪದ್ಧತಿ, ರೂಢಿ, ಸಂಪ್ರದಾಯಗಳು ಸ್ತಿçÃಯರ ಘನತೆಗೆ ಧಕ್ಕೆ ತರುತ್ತವೆ. ಕುಟುಂಬದಲ್ಲಿ ಪ್ರತಿ ಆಗು-ಹೋಗುಗಳ ಕುರಿತು ತೀರ್ಮಾನ ತೆಗೆದುಕೊಳ್ಳುವಲ್ಲಿ ಸ್ತಿçÃಯರ ಅಭಿಪ್ರಾಯ ಮತ್ತು ನಿರ್ಧಾರಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಹಬ್ಬದ ಸಂದರ್ಭ ಕುಟುಂಬದಲ್ಲಿ ಮಹಿಳೆಯರು ನಿರ್ವಹಿಸುವ ಜವಾಬ್ದಾರಿ ಹಾಗೂ ಮಹಿಳೆ ಕುಟುಂಬಕ್ಕೆ ಸೀಮಿತ; ಹೊರ ಪ್ರಪಂಚದ ವ್ಯವಹಾರ ಜ್ಞಾನ ಅವರಿಗೆ ಬೇಡ ಎನ್ನುವ ಕುರಿತು ಕಿರು ನಾಟಕವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. 
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಮಹಿಳಾ ಸಮಖ್ಯಾ ಘಟಕದ ಪ್ರಭಾರ ಸಂಯೋಜಕರಾದ ನಾಗರತ್ನ ಎಸ್.ಗೂಳಿ, ವಿವಿಧ ಇಲಾಖೆಗಳ ೧೨೦ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜ್ಯೋತಿ ಕೆ.ಆರ್ ಸ್ವಾಗತಿಸಿದರು. ಕರುಣಾ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...