ಗುರುವಾರ, ಡಿಸೆಂಬರ್ 12, 2019

ವ್ಯಕ್ತಿತ್ವ ವಿಕಸನ ಉಚಿತ ತರಬೇತಿಗೆ ಅರ್ಜಿ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವ್ಯಕ್ತಿತ್ವ ವಿಕಸನ ಉಚಿತ ತರಬೇತಿಯನ್ನು ೫೦ ಗಂಟೆಗಳ ಕಾಲ (೧೦ ದಿನ) ಆಯೋಜಿಸಲಾಗುತ್ತಿದ್ದು, ಪದವಿಯ ಕೊನೆಯ ವರ್ಷ(೬ನೇ ಸೆಮಿಸ್ಟರ್)ದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸುವ ಆಭ್ಯಥಿಗಳು ಮುಂಚಿತವಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.೧೭ರಂದು ಜಿಲ್ಲಾಡಳಿತ ಭವನದಲ್ಲಿ ಉದ್ಯೋಗ ಮೇಳ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ವಿವಿಧ ಕಂಪನಿಗಳಿAದ ಉದ್ಯೋಗವನ್ನು ಕಲ್ಪಿಸಲು ಒಂದು ದಿನದ ಉದ್ಯೋಗ ಮೇಳವನ್ನು ಡಿಸೆಂಬರ್ ೧೭ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲಾಡಳಿತ ಭವನದ ೨ನೇ ಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಫುಲ್ಲರ್ಟನ್ ಇಂಡಿಯಾ ಪ್ರೆöÊ.ಲಿ. ಕಂಪನಿಯಲ್ಲಿ ಕರ್ನಾಟಕದಾದ್ಯಂತ ಖಾಲಿ ಇರುವ ಲೋನ್ ಅಪ್ರೂವಲ್ ಆಫೀಸರ್ ೩೦ ಹುದ್ದೆಗಳಿಗೆ ೧೨ನೇ ತರಗತಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಪಾಸ್ ಅಥವಾ ಫೇಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಜ್ಞಾನ ಶಾರದೆ ಅಕಾಡೆಮಿಯ ಟೀಚಿಂಗ್ ಟ್ರೇನರ್ ೨೫ ಹುದ್ದೆಗಳಿಗೆ ಪಿಯುಸಿ, ಯಾವುದೇ ಪದವಿ ಪಡೆದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಇದೇ ಅಕಾಡೆಮಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಅಫೀಸರ್ ೫ ಹುದ್ದೆಗಳಿಗೆ ಎಂಬಿಎ, ಎಂಎಸ್‌ಡಬ್ಲುö್ಯ ವಿದ್ಯಾರ್ಹತೆಯಿರುವ ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಯಾದಗಿರಿ ಮತ್ತು ರಾಯಾಚೂರು ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ.
ಸನ್‌ಬಿಜ್ ಸಲ್ಯುಷನ್ಸ್ ಬೆಂಗಳೂರು ೮೦ ಕಲೆಕ್ಷನ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ೧೦ನೇ ಪಾಸ್ ಮತ್ತು ಮೇಲ್ಪಟ್ಟು ವಿದ್ಯಾರ್ಹತೆಯಿರುವ ಪುರುಷರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯಾ ಫಿನಸರ್ವ್ ಪ್ರೆöÊ.ಲಿ.ನ ೨೫ ಸಂಘಮಿತ್ರ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ೧೦ನೇ, ಪಿಯುಸಿ, ಯಾವುದೇ ಪದವಿ ಹೊಂದಿದ ಪುರುಷರು ಅರ್ಜಿ ಸಲ್ಲಿಸಬಹುದು. ಯಾದಗಿರಿ ಮತ್ತು ಕಲಬುರಗಿ ಕೆಲಸ ನಿರ್ವಹಿಸುವ ಸ್ಥಳಗಳಾಗಿವೆ.
ನಡ್ಜ್ ಫೌಂಡೇಶನ್ ಬೆಂಗಳೂರು ವತಿಯಿಂದ ತರಬೇತಿ ನಂತರ ಹುದ್ದೆ ದೊರಕಿಸಿಕೊಡಲಾಗುವುದು. ೮ನೇ ತರಗತಿಯಿಂದ ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆಯಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಆರ್ಚ್ ವೇಲ್ಸ್ ಜಿಐಎಸ್ ಸಲ್ಯುಷನ್ಸ್ ವತಿಯಿಂದ ಯಾದಗಿರಿಯಲ್ಲಿ ಫೀಲ್ಡ್ ಸರ್ವೇಯರ್ ೩೦ ಹುದ್ದೆಗಳಿಗೆ ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ಹೊಂದಿದ ಪುರುಷರು ಅರ್ಜಿ ಸಲ್ಲಿಸಬಹುದು.
ಐಕಾನ್ ಸೆಕ್ಯೂರಿಟಿ ಸರ್ವೀಸ್ ಪ್ರೆöÊ.ಲಿ. ಬಳ್ಳಾರಿ (ಜೆಎಸ್‌ಡಬ್ಲುö್ಯ ಸ್ಟೀಲ್ ಲಿ.) ಸೆಕ್ಯೂರಿಟಿ ಗಾರ್ಡ್ ೧೦೦ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ವಯೋಮಿತಿ ೧೮ರಿಂದ ೩೫ ಇದ್ದು, ಎತ್ತರ ೧೬೬ ಸೆ.ಮೀ., ತೂಕ ೫೫-೭೫ ಕೆ.ಜಿ ಇರಬೇಕು. ಚೆಸ್ಟ್ ೭೦-೭೫ ಹೊಂದಿರಬೇಕು. ಪಿಎಫ್, ಇಎಸ್‌ಐ ಮತ್ತು ವಸತಿ ಸೌಲಭ್ಯ ನೀಡಲಾಗುವುದು.
ಉದ್ಯೋಗ ಮೇಳಕ್ಕೆ ಬರುವ ಅಭ್ಯರ್ಥಿಗಳು ತಮ್ಮ ವ್ಯಕ್ತಿ ಪರಿಚಯ (ರಿಸ್ಯೂಮ್/ಬಯೋಡಾಟಾ) ಪತ್ರದ ಪ್ರತಿಗಳನ್ನು ಹಾಗೂ ವಿದ್ಯಾರ್ಹತೆ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರದ ಪ್ರತಿಗಳು ಹಾಗೂ ೨ ಭಾವಚಿತ್ರ, ಆಧಾರ್ ಕಾರ್ಡ ಕಡ್ಡಾಯವಾಗಿ ತರಬೇಕು. ನೇರ ಸಂದರ್ಶನಕ್ಕೆ ಬರುವ ಮೊದಲು ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂ:೦೮೪೭೩-೨೫೩೭೧೮, ಮೊ:೯೪೪೮೨ ೫೦೮೬೮ ಸಂಪರ್ಕಿಸಲು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವ್ಯಾಪ್ತಿಯ ಟೆಕ್ನಿಕಲ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವಿವಿಧ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್ ತರಬೇತಿಗಾಗಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಶಿಶಿಕ್ಷÄ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಲೆಕ್ಟಿçÃಷನ್, ವೆಲ್ಡರ್, ಪಾಸಾ/ಕೊಪಾ, ಫೌಂಡ್ರಿಮನ್, ಶೀಟ್ ಮೆಟಲ್ ವರ್ಕ್ ಟ್ರೇಡ್‌ಗಳಲ್ಲಿ ಅಪ್ರೆಂಟಿಸ್ ತರಬೇತಿ ನೀಡಲಾಗುವುದು. ಅರ್ಹ ಆಸಕ್ತಿಯುಳ್ಳ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ವೈಬ್‌ಸೈಟ್ ಪೋರ್ಟಲ್:www.apprenticeship.gov.in ನಲ್ಲಿ ನೋಂದಾಯಿಸಬೇಕು, ವೆಬ್ ಪೋರ್ಟಲ್ ಸಂಖ್ಯೆಯೊAದಿಗೆ ಭರ್ತಿ ಮಾಡಿರುವ ಅರ್ಜಿಯನ್ನು ಎಸ್‌ಎಸ್‌ಎಲ್‌ಸಿ, ಐ.ಟಿ.ಐ ಪಾಸಾದ ಅಂಕಪಟ್ಟಿ, ಆಧಾರ್ ಕಾರ್ಡ್, ಮೀಸಲಾತಿ  ಬಯಸಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಓಬಿಸಿ, ಅಂಗವಿಕಲ ಪ್ರಮಾಣಪತ್ರ ಹಾಗೂ ಭಾವಚಿತ್ರವನ್ನು ಲಗತ್ತಿಸಿ ಜನವರಿ ೪ರೊಳಗೆ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯಾದಗಿರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಪೋರ್ಟಲ್ ಹಾಗೂ ದೂ:೦೮೪೭೩-೨೫೩೭೧೮ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋಳಿ ಸಾಕಾಣಿಕೆ, ಹೈನುಗಾರಿಕೆ ಉಚಿತ ತರಬೇತಿ
ಯಾದಗಿರಿ, ಡಿಸೆಂಬರ್ ೧೨ (ಕರ್ನಾಟಕ ವಾರ್ತೆ): ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರದಿAದ ಉಚಿತ ಕೋಳಿ ಸಾಕಾಣಿಕೆ ಮತ್ತು ಹೈನುಗಾರಿಕೆ ತರಬೇತಿ ಶಿಬಿರವನ್ನು ಬರುವ ಜನವರಿಯಲ್ಲಿ ಏರ್ಪಡಿಸಲಾಗಿದೆ ಎಂದು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಶ ಬಿ. ತಿಳಿಸಿದ್ದಾರೆ.
ಶಿಬಿರದಲ್ಲಿ ಅಧಿಕ ಆದಾಯಕ್ಕಾಗಿ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಆಸಕ್ತಿಯುಳ್ಳ ೧೮ ರಿಂದ ೫೫ ವರ್ಷದೊಳಗಿನ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಮಹಿಳೆಯರು ಕಚೇರಿ ಮೊ:೯೪೮೨೬೩೦೭೯೦ ಗೆ ಕರೆ ಮಾಡಿ ಡಿಸೆಂಬರ್ ೩೧ರೊಳಗೆ ಹೆಸರು ನೋಂದಾಯಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟ-೫೮೭೧೦೩ ಹಾಗೂ ದೂ:೦೮೩೫೪-೨೪೪೦೨೮, ೨೪೪೦೪೮ ಸಂಪರ್ಕಿಸಲು ಕೋರಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...