ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ, ರಾಷ್ಟç ಧ್ವಜಾರೋಹಣ ನೆರೆವೇರಿಸಿ ಗೌರವ ಸ್ವೀಕರ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ; ಸಚಿವ ಮುರುಗೇಶ ಆರ್. ನಿರಾಣಿ
ಅವರು ಸಂದೇಶ ಇಂತಿದೆ.
• ಆತ್ಮೀಯ ಸಂಸದರೇ, ಜಿಲ್ಲೆಯ ವಿಧಾನಸಭಾ ಮತ್ತು ವಿಧಾನ ಪರಿಷತ್ತಿನ ಶಾಸಕ ಮೀತ್ರರೇ, ಸರ್ಕಾರದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರುಗಳೇ, ಜಿಲ್ಲಾ ಪಂಚಾಯತ್ ಅಧ್ಯಕ್ಷರೇ, ಉಪಾಧ್ಯಕ್ಷರೇ ಮತ್ತು ಸದಸ್ಯರುಗಳೇ, ಜಿಲ್ಲಾಧಿಕಾರಿಯವರೇ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ, ಇತರೆ ಅಧಿಕಾರಿ ಮಿತ್ರರೇ, ನೌಕರ ಬಾಂಧವರೇ, ಶಿಕ್ಷಕ- ಶಿಕ್ಷಕಿಯರೇ, ಸುದ್ದಿ ಮಾಧ್ಯಮದ ಬಂಧುಗಳೇ ಹಾಗೂ ನೆರೆದಿರುವ ಎಲ್ಲ ದೇಶಾಭಿಮಾನಿಗಳೇ ತಮ್ಮೆಲ್ಲರಿಗೂ 72ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
• ಬಂಧುಗಳೇ, ಬಹು ಭಾಷೆ, ಸಂಸ್ಕೃತಿಯ ಸಮ್ಮಿಲನದ ಯಾದಗಿರಿಯ ಜನ ಭಾವೈಕ್ಯತೆಯ ಪ್ರತೀಕವಾಗಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಮುಖ ಅಂಗವಾದ ಯಾದಗಿರಿ ಕರ್ನಾಟಕದ ಅಸ್ಮಿತೆಯ ಸಂಕೇತವಾಗಿದೆ.
• ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟç. ನಮ್ಮ ಸಂವಿಧಾನದ ಆಶಯವು ಇಡೀ ಜಗತ್ತಿಗೆ ಮಾದರಿಯಾಗಿದೆ. ಆ ಕಾರಣದಿಂದಾಗಿಯೇ ವಿಭಿನ್ನ ವೇಷಭೂಷಣ, ಭಾಷೆ, ಜೀವನ ಶೈಲಿಯನ್ನು ಹೊಂದಿರುವ ಅಸಂಖ್ಯಾತ ಸಮುದಾಯಗಳಿದ್ದರೂ ಏಕತೆಯನ್ನು ಸಾಧಿಸಲು ಸಾಧ್ಯವಾಗಿದೆ. ನಮ್ಮ ದೇಶದ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗ ವ್ಯವಸ್ಥೆಯೂ ದೇಶದ ಪ್ರತಿಯೊಬ್ಬರಿಗೂ ಭದ್ರತೆ ಹಾಗೂ ಸಮಾನ ಅವಕಾಶಗಳನ್ನು ನೀಡಿವೆ. ಅದ್ದರಿಂದ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಲ್ಲ ದೇಶವಾಸಿಗಳು ಋಣಿಯಾಗಿರಬೇಕು.
• ಸ್ವಾತಂತ್ರö್ಯ ದೊರೆತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ರೂಪಿಸಿಕೊಂಡು 7 ದಶಕಗಳು ಕಳೆದಿವೆ. ಈ ನಿಟ್ಟಿನಲ್ಲಿ ನಡೆದು ಬಂದ ದಾರಿ ಸಾಧಿಸಿದ ಪ್ರಗತಿಯಲ್ಲಿ ಹಲವಾರು ಏರಿಳಿತಗಳನ್ನು ಕಂಡಿದ್ದೇವೆ.
• ನಮ್ಮ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಇಡೀ ದೇಶವೇ ಆತ್ಮನಿರ್ಭರ ಭಾರತದತ್ತ ಹೆಜ್ಜೆ ಇಟ್ಟಿದೆ. ಸ್ವಾವಲಂಬನೆಯ ಬದುಕನ್ನು ಸಾಕಾರಗೊಳಿಸುವ ನಿಟ್ಟನಿಲ್ಲಿ ಆತ್ಮ ನಿರ್ಭರ ಭಾರತ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬ ದೇಶವಾಸಿಯದ್ದು ಪಾಲಿದೆ.
• ಆತ್ಮನಿರ್ಭರ ಭಾರತ ಕಟ್ಟುವ ಕಾಯಕ ನಮ್ಮ ಮನೆಯಿಂದ ಪ್ರಾರಂಭವಾಗಿ ನಮ್ಮ ಊರು, ನಮ್ಮ ತಾಲೂಕು, ಜಿಲ್ಲೆ ರಾಜ್ಯ ಹಾಗೂ ಕೊನೆಗೆ ರಾಷ್ಟç ಮಟ್ಟದಲ್ಲಿ ಕೊನೆಗೊಳ್ಳಬೇಕು. ಜಗತ್ತಿನ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಮಗೆ ಜನಸಂಖ್ಯೆ ಶಾಪವಲ್ಲ. ಒಟ್ಟು ಜನಸಂಖ್ಯೆಯನ್ನು ಶ್ರೇಷ್ಟ ಮಾನವ ಸಂಪನ್ಮೂಲವಾಗಿ ಪರಿವರ್ತಿಸಿಕೊಳ್ಳುವ ವಿಫುಲ ಅವಕಾಶಗಳಿವೆ. ಅತಿಹೆಚ್ಚು ಇಂಜಿನಿಯರ್‌ಗಳು, ತಂತ್ರಜ್ಞರು, ವೈದ್ಯರು, ಪದವಿಧರರನ್ನು ಹೊಂದಿರುವ ರಾಷ್ಟç ನಮ್ಮದು.
• ದೇಶದ ಶೇ.70 ರಷ್ಟು ಜನಸಂಖ್ಯೆ 40 ವರ್ಷದ ಕೆಳಗಿನವರಾಗಿದ್ದು, ಯುವ ಭಾರತವನ್ನು ಕಟ್ಟಲು ಇದು ಸಕಾಲವಾಗಿದೆ. ಭಾರತೀಯರ ಜ್ಞಾನ ಹಾಗೂ ಬುದ್ದಿಶಕ್ತಿಗೆ ಅಂತರಾಷ್ಟಿçÃಯ ಮಾನ್ಯತೆಯಿದೆ. ಪ್ರತಿಭಾ ಪಲಾಯನವನ್ನು ತಪ್ಪಿಸಿ ಭಾರತದಲ್ಲಿಯೇ ನಮ್ಮ ಯುವಕ-ಯುವತಿಯರಿಗೆ ಅವಕಾಶಗಳನ್ನು ಸೃಷ್ಟಿಸಿಕೊಡುವುದು ಆ ಮೂಲಕ ಆತ್ಮನಿರ್ಭರ ಭಾರತ ನಿರ್ಮಿಸುವುದು ಮೋದಿಜಿಯವರ ಮಹತ್ವಾಕಾಂಕ್ಷೆಯಾಗಿದೆ.
• ಕರ್ನಾಟಕದ ಗಣಿ ಸಂಪತ್ತನ್ನು ವ್ಯವಸ್ಥಿತವಾಗಿ, ಕಾನೂನುಬದ್ದವಾಗಿ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗೆ ಸಂಪತ್ತನ್ನು ಸುರಕ್ಷಿತವಾಗಿ ಕಾಪಾಡಿಕೊಡುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಡುವುದಿಲ್ಲ. ಗಣಿಗಾರಿಕೆಯಲ್ಲಿ ತೊಡಗಿಕೊಂಡ ಕಾರ್ಮಿಕರ ಹಿತ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಯಾವುದೇ ಅಹಿತಕರ ಘಟನೆಗೆ ನಡೆಯಲು ಅವಕಾಶ ನೀಡದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆಯ ಮೂಲಕ ನಿರ್ದೇಶನ ನೀಡಲಾಗಿದೆ.
• ಭಾರತ ವಿಶ್ವದ ಅತಿದೊಡ್ಡ ಫಲವತ್ತಾದ ಭೂಮಿಯನ್ನು ಹೊಂದಿದೆ. ನಮ್ಮ ಮಣ್ಣು ಮತ್ತು ನೀರಿಗೆ ಜಗತ್ತಿಗೆ ಅನ್ನವನ್ನು ನೀಡುವ ದಿವ್ಯ ಶಕ್ತಿ ಇದೆ. ತಾಯಿ ಭಾರತೀ ನಮ್ಮನ್ನು ಸೇರಿದಂತೆ ವಿಶ್ವವನ್ನು ಸಲಹುವ ಅನ್ನಪೂರ್ಣೆಶ್ವರಿ. ಈ ನಿಟ್ಟಿನಲ್ಲಿ ಯುವಕರು ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳಬೇಕು. ಕೃಷಿ ಒಂದು ಪಾರಂಪರಿಕೆ ಉದ್ಯೋಗವಾಗದೇ ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತನೆಗೊಳ್ಳಬೇಕು. ಕೃಷಿಯನ್ನು ಒಂದು ಪ್ರೋಫೇಶನ್ ಎನ್ನುವ ನಿಟ್ಟಿನಲ್ಲಿ ಕೃಷಿಯನ್ನು ಅಭಿವೃದ್ದಿಗೊಳಿಸಬೇಕು. ಕೃಷಿಗೆ ಸ್ಥಳೀಯ ಮಟ್ಟದಲ್ಲಿಯೆ ಮಾರುಕಟ್ಟೆ ಕಲ್ಪಿಸುವುದು. ಕೃಷಿ ಉತ್ಪನಗಳ ಮೌಲ್ಯವರ್ಧನೆ ಮಾಡುವುದು ಆತ್ಮನಿರ್ಭರ ಭಾರತದ ಮೊದಲ ಹೆಜ್ಜೆಯಾಗಿದೆ.
• ರೈತರ ಆದಾಯವನ್ನು ದ್ವಿಗುಣಗೊಳಿಸುವುದು ನಮ್ಮ ಕೇಂದ್ರ ಸರ್ಕಾರದ ಬಹುಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗಿದೆ. ರೈತರ ಬೆವರಿಗೆ ಪೂರ್ಣಫಲವನ್ನು ನೀಡುವುದು. ಅವನು ಬೆಳೆದ ಫಸಲಿನ ಪೂರ್ಣ ಲಾಭವನ್ನು ರೈತರಿಗೆ ದೊರೆಯುವಂತೆ ಮಾಡುವುದು ಕೇಂದ್ರ ಸರ್ಕಾರದ ಮುಖ್ಯ ಗುರಿಯಾಗಿದೆ.
• ಕೊವಿಡ್-19 ಸಂಕ್ರಮಣ ಕಾಲದಲ್ಲಿ ಭಾರತ ಅನುಸರಿಸಿದ ನೀತಿಗಳು, ತೆಗೆದುಕೊಂಡ ನಿರ್ಧಾರಗಳು, ಜಗತ್ತಿನಲ್ಲಿ ಭಾರತದ ವರ್ಚಸ್ಸನ್ನು ಹೆಚ್ಚಿಸಿವೆ. ನಮ್ಮ ಪ್ರತಿಭಾವಂತ ವಿಜ್ಞಾನಿಗಳ ಸಂಶೋಧನೆಗೆ ಸಲಾಂ. ಇಡೀ ದೇಶವೇ ಕೊರೊನಾದಿಂದ ತತ್ತರಿಸಿದ ಸಮಯದಲ್ಲಿ ದೃತಿಗೆಡದೇ, ಸತತ ಪರಿಶ್ರಮ ಪಟ್ಟು ಲಸಿಕೆಯನ್ನು ಸಿದ್ದಪಡಿಸಿದ್ದು, ಕೊವ್ಯಕ್ಸಿನ್ ಮತ್ತು ಕೊವಿಶಿಲ್ಡ್ ಲಸಿಕೆಗಳಿಗೆ ಅಂತರಾಷ್ಟಿçÃಯ ಮಾನ್ಯತೆ ಹಾಗೂ ಬೇಡಿಕೆ ದೊರಕಿದ್ದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಎಲ್ಲ ದೇಶವಾಸಿಗಳ ಪರವಾಗಿ ಅವಿರತವಾಗಿ ಶ್ರಮ ಪಟ್ಟ ಎಲ್ಲರಿಗೂ ವಂದನೆ ಅಭಿನಂದನೆಗಳು.
• ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪರವರ ನೇತೃತ್ವದ ರಾಜ್ಯ ಸರ್ಕಾರ ಕೃಷಿ, ಉದ್ಯೋಗ, ನೀರಾವರಿ, ಶಿಕ್ಷಣ, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಲು ಅಗತ್ಯ ಕ್ರಮ ಕೈಗೊಂಡಿದೆ. ಕನ್ನಡ ನಾಡಿನ ಕುರಿತು ಯಡಿಯೂರಪ್ಪರವರ ಕಾಳಜಿ ಅನನ್ಯವಾಗಿದೆ. ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ರಾಜ್ಯ ಬಿಜೆಪಿ ಸರ್ಕಾರ ಬದ್ದವಾಗಿದೆ. ಜಿಲ್ಲೆಯಲ್ಲಿ ನೀರಾವರಿ ಹಾಗೂ ಕೈಗಾರಿಕೆಗಳ ನಿರ್ಮಾಣ ಮೂಲಕ ಉದ್ಯೋಗ ಸೃಷ್ಟಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ.
ಯಾದಗಿರಿ ಜಿಲ್ಲೆ ಅಭಿವೃದ್ದಿಯ ಪಕ್ಷಿನೋಟ.
ಒಕ್ಕೂಟ ವ್ಯವಸ್ಥೆಯ ಆಶಯದಂತೆ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಇದರ ಪ್ರತಿಫಲವು ಯಾದಗಿರಿ ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ದೊರೆಯುತ್ತಿದೆ. ನಮ್ಮ ರಾಜ್ಯ ಸರ್ಕಾರವೂ ಈ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹಲವಾರು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ.
• ಮಹತ್ವಾಕಾಂಕ್ಷಿ ಜಿಲ್ಲೆ:
ಯಾದಗಿರಿ ಜಿಲ್ಲೆಯು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಆಯ್ಕೆಯಾಗಿದ್ದು, ನವೆಂಬರ್ 2020ರಲ್ಲಿ ನೀತಿ ಆಯೋಗ ನಿಗದಿಪಡಿಸಿರುವ ಎಲ್ಲಾ ಸೂಚ್ಯಂಕಗಳ ಪ್ರಗತಿಯಲ್ಲಿ ಯಾದಗಿರಿ ಜಿಲ್ಲೆಯು ದೇಶದಲ್ಲಿಯೇ 2 ನೇ ಸ್ಥಾನ ಪಡೆದುಕೊಂಡಿರುವುದರಿAದ, ನೀತಿ ಆಯೋಗವು ಜಿಲ್ಲೆಗೆ 2 ಕೋಟಿ ಅನುದಾನವನ್ನು ಹಂಚಿಕೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ.
• ಪ್ರವಾಹ ಹಾಗೂ ಪರಿಹಾರ:
2020 ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹ ದಿಂದಾಗಿ ಬೆಳೆಹಾನಿ ಅನುಭವಿಸಿದ್ದ 39,355 ಫಲಾನುಭವಿಗಳಿಗೆ 23.62 ಕೋಟಿ ರೂಪಾಯಿ ಪರಿಹಾರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ, ಇನ್ನುಳಿದ 31,175 ಫಲಾನುಭವಿಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಮಳೆಯಿಂದ ಮನೆ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡಲು ರಾಜೀವ್ ಗಾಂಧಿ ವಸತಿ ನಿಗಮಕ್ಕೆ 4.97 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಹಾನಿಯಾಗಿರುವ ’ಬಿ’ ಮತ್ತು ‘ಸಿ’ ವರ್ಗದ ಮನೆಗಳಿಗೆ ನೇರವಾಗಿ ನೆರೆ ಸಂತ್ರಸ್ತರ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ.
ಜಿಲ್ಲೆಯಲ್ಲಿ ಮಳೆ & ಪ್ರವಾಹದಿಂದ ಹಾನಿಯಾದ ಮೂಲಭೂತ ಸೌಕರ್ಯಗಳ ದುರಸ್ತಿಗಾಗಿ 10.07 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯಗಳು ಪ್ರಗತಿಯಲ್ಲಿವೆ.
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಕೋವಿಡ್-19 ಸೋಂಕು ಇಡೀ ವಿಶ್ವವನ್ನು ತಲ್ಲಣಗೊಳಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಜನಸಾಮಾನ್ಯರ ನೆರವಿಗೆ ಈ ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನದ ಫಲಶೃತಿಯಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿರುವುದು ಸಂತೋಷದ ಸಂಗತಿಯಾಗಿದೆ.
ಇದೇ ಜನವರಿ 6ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಿ.ಎಸ್. ಯಡಿಯೂರಪ್ಪ ಅವರು ಯಾದಗಿರಿಗೆ ಆಗಮಿಸಿ, ಮುದ್ನಾಳ್ ಗ್ರಾಮದಲ್ಲಿ ಅಂದಾಜು ಮೊತ್ತ 438.75 ಕೋಟಿ ರೂ.ಗಳ ನೂತನ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಇದು ಈ ಭಾಗದ ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ಹೊಸ ಚೈತನ್ಯ ದೊರಕಿದಂತಾಗಿದೆ. ಅದರೊಡನೆ ಕೋವಿಡ್-19 ಎದುರಿಸಲು ಜಿಲ್ಲೆಯಲ್ಲಿ ಸುಸಜ್ಜಿತವಾದ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಯನ್ನು ಅಂದು ಲೋಕಾರ್ಪಣೆ ಮಾಡಿದರು. ಇದರಿಂದಾಗಿ ಬಡ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಲಭಿಸುತ್ತಿದೆ.
ಕೊವಿಡ್ ಲಸಿಕೆಯು ಸಾಕಷ್ಟು ಪ್ರಮಾಣದಲ್ಲಿ ದೊರೆಯುವಂತೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಗೆ ಈಗಾಗಲೇ 3 ಸಾವಿರ ಡೋಸ್ ಲಸಿಕೆ ಬಂದಿದ್ದು, ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಈ ಲಸಿಕೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ ವೈದ್ಯರು, ಸ್ಟಾಫ್‌ನರ್ಸ್ಗಳು, ಗ್ರೂಪ್-ಡಿ ಸಿಬ್ಬಂದಿ ಸೇರಿದಂತೆ 5,300 ಆರೋಗ್ಯ ಕಾರ್ಯಕರ್ತರನ್ನು ಲಸಿಕೆಗಾಗಿ ಗುರುತಿಸಲಾಗಿದೆ. ಅವರೆಲ್ಲರಿಗೂ ಹಂತಹAತವಾಗಿ ಲಸಿಕೆ ನೀಡಲಾಗುತ್ತಿದೆ.
ಗುಣಮುಖರಾದವರ ಸಂಖ್ಯೆ ಅಧಿಕ
ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್-19ನ ಸೋಂಕು ಹಿನ್ನೆಲೆಯಲ್ಲಿ 2,14,147 ಮಂದಿಯ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಅವುಗಳಲ್ಲಿ 10,649 ಪಾಸಿಟಿವ್ ವರದಿಯಾಗಿದೆ, 10,568 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆರೋಗ್ಯವಂತರಾಗಿದ್ದಾರೆ.
• ಕಂದಾಯ ಇಲಾಖೆ:
ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ
ಜಿಲ್ಲೆಯಲ್ಲಿ ಒಟ್ಟು 1,43,843 ಫಲಾನುಭವಿಗಳಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತಿದೆ.
• ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ:
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿAದ ಜಿಲ್ಲೆಗೆ 2013-14 ಸಾಲಿನಿಂದ 2019-20 ಸಾಲಿನವರಗೆ ಒಟ್ಟು 707.52 ಕೋಟಿ ರೂ.ಗಳು ಅನುದಾನ ದೊರೆತಿದ್ದು, ಅದರಲ್ಲಿ 2,506 ಕಾಮಗಾರಿಗಳು ಮಂಜೂರಾಗಿದ್ದು, 2,130 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ, ಅದಕ್ಕಾಗಿ ಒಟ್ಟು 513.42 ಕೋಟಿ ರೂ.ಗಳ ಅನುದಾನ ಭರಿಸಲಾಗಿದೆ.
• ಲೋಕೋಪಯೋಗಿ ಇಲಾಖೆ:
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ 424 ಕಿ.ಮೀ ರಾಜ್ಯ ಹೆದ್ದಾರಿ ಮತ್ತು 1,217 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, ಸೇತುವೆ ಹಾಗೂ ಕಟ್ಟಡಗಳ ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ. SಇP & ಖಿSP ಯೋಜನೆಯಡಿ ಒಟ್ಟು 40 ಕೋಟಿ ರೂ.ಗಳ ಅನುದಾನದಲ್ಲಿ 143 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, 27 ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದದ್ದು ಪ್ರಗತಿಯಲ್ಲಿವೆ.
ನೆರೆ ಹಾವಳಿಯಿಂದ ಹಾನಿಯಾದ ಜಿಲ್ಲೆಯ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ರಸ್ತೆ, ಸೇತುವೆ ಮತ್ತು ಕಟ್ಟಡಗಳ ತುರ್ತು ದುರಸ್ತಿಗಾಗಿ ಒಟ್ಟು 99 ಕಾಮಗಾರಿಗಳನ್ನು 18 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ವಹಿಸಲಾಗುತ್ತಿದೆ. ಅವುಗಳಲ್ಲಿ 15 ಕಾಮಗಾರಿಗಳು ಪೂರ್ಣಗೊಂಡಿವೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿ ಒಟ್ಟು 513 ಕಾಮಗಾರಿಗಳನ್ನು 264 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೊಂಡಿದ್ದು, 456 ಕಾಮಗಾರಿಗಳು ಪೂರ್ಣಗೊಂಡಿವೆ. ಅವುಗಳಿಗೆ ಒಟ್ಟು 178 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
2020-21ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿ 58.16 ಕೋಟಿ ರೂಪಾಯಿಗಳಲ್ಲಿ ಒಟ್ಟು 98 ಕಾಮಗಾರಿಗಳಿಗಾಗಿ ರೂಪಿಸಿದ ಕ್ರಿಯಾ ಯೋಜನೆ ಅನುಮೋದನೆಯಾಗಿದೆ.
• ನಗರಾಭಿವೃದ್ಧಿ ಇಲಾಖೆ
2020-21ನೇ ಸಾಲಿನ 15ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿಯಲ್ಲಿ ರೂ. 19.53 ಕೋಟಿಗಳು ಹಂಚಿಕೆಯಾಗಿದ್ದು, ಅದರಲ್ಲಿ ರೂ. 9.76 ಕೋಟಿಗಳು ಬಿಡುಗಡೆಯಾಗಿದೆ. ಸದರಿ ಯೋಜನೆಯಡಿ 307 ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ.
2020-21ನೇ ಸಾಲಿನ Sಈಅ ಮುಕ್ತ ನಿಧಿ ಯೋಜನೆಯಡಿಯಲ್ಲಿ ರೂ. 3.91 ಕೋಟಿ ಹಂಚಿಕೆ ಆಗಿದ್ದು, ಇದರಲ್ಲಿ ರೂ. 2.24 ಕೋಟಿಗಳು ಬಿಡುಗಡಯಾಗಿದೆ. ಸದರಿ ಯೋಜನೆಯಡಿ 90 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ವಚ್ಛ ಭಾರತ್ ಮಿಷನ್ (Sಃಒ) ಯೋಜನೆಯಡಿ ರೂ. 4.28 ಕೋಟಿ ಬಿಡುಗಡೆಯಾಗಿದ್ದು, ರೂ. 1.82 ಕೋಟಿ ಖರ್ಚು ಮಾಡಲಾಗಿದೆ.
• ಮಹತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 32 ಲಕ್ಷ ಮಾನವ ದಿನಗಳ ಗುರಿಗಳನ್ನು ನಿಗಧಿಪಡಿಸಲಾಗಿದೆ. 2021 ರ ಜನವರಿ ಅಂತ್ಯದವರೆಗೆ 28.85 ಲಕ್ಷ ಮಾನವ ದಿನಗಳನ್ನು ಸೃಜಿಸಿ, 11,083 ಕೋಟಿ ರೂ.ಗಳ ಅನುದಾನ ಭರಿಸಲಾಗಿದೆ.
ವೈಯಕ್ತಿಕ ಕಾಮಗಾರಿಗಳ ಪೈಕಿ 4,571 ಇಂಗು ಗುಂಡಿಗಳು, 136 ಪೌಷ್ಠಿಕ ತೋಟಗಳು, 2,334 ಬದು ನಿರ್ಮಾಣ, 730 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ, 36 ಅಂಗನವಾಡಿ ಕೇಂದ್ರಗಳು, 20 ಶಾಲಾ ಕಾಂಪೌAಡ್, 16 ಸಂತೆಕಟ್ಟೆ ಹಾಗೂ ಆಟದ ಮೈದಾನಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
• ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ:
2020-21ನೇ ಸಾಲಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 155 ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಪ್ರತಿ ಮನೆಗಳಿಗೆ ನಳ ನೀರು ಸಂಪರ್ಕಕ್ಕಾಗಿ ಪ್ರಸಕ್ತ ಸಾಲಿನಲ್ಲಿ 237 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, 155 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. 2020-21ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯ ಒಟ್ಟು 65,578 ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.
• ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ:
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಮತ್ತು ಬಸ್ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಸೇವಾ ಸಿಂಧು ವ್ಯಾಪ್ತಿಯಡಿ 5,231 ಅರ್ಜಿ ಸ್ವೀಕರಿಸಿ, 1,363 ಪಾಸುಗಳನ್ನು ವಿತರಿಸಲಾಗಿದೆ, 19 ವಿಕಲಚೇತರಿಗೆ ಪಾಸುಗಳನ್ನು ವಿತರಿಸಲಾಗಿದ್ದು, ಇನ್ನುಳಿದ ಪಾಸುಗಳ ವಿತರಣಾ ಕಾರ್ಯ ಪ್ರಗತಿಯಲ್ಲಿದೆ.
• ಪದವಿ ಪೂರ್ವ ಶಿಕ್ಷಣ ಇಲಾಖೆ:
2020-21ನೇ ಸಾಲಿಗೆ ಎರಡು ಹೊಸ ಪದವಿ ಪೂರ್ವ ಕಾಲೇಜುಗಳಿಗೆ ಮಂಜೂರಾತಿ ನೀಡಲಾಗಿದೆ. 51 ಉಪನ್ಯಾಸಕರನ್ನು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ನೇಮಕ ಮಾಡಿಕೊಳ್ಳಲಾಗಿದೆ. ಅತಿ ಹೆಚ್ಚು ಅಂಕ ಪಡೆದ 9 Sಅ/Sಖಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗಿದೆ.
• ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ:
ಭಾಗ್ಯಲಕ್ಷ್ಮೀ ಯೋಜನೆಯಡಿ ಇದುವರೆಗೆ 62,984 ಫಲಾನುಭವಿಗಳಿಗೆ ಬಾಂಡ್‌ಗಳನ್ನು ವಿತರಿಸಲಾಗಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ 2020-21ನೇ ಸಾಲಿನಲ್ಲಿ ಜಿಲ್ಲೆಯ 40,913 ಫಲಾನುಭವಿಗಳ ಖಾತೆಗೆ ಒಟ್ಟು 16.18 ಕೋಟಿ ರೂಪಾಯಿ ಹಣ ಜಮಾ ಮಾಡಲಾಗಿದೆ. ಸಮಗ್ರ ಶಿಶು ಅಭಿವೃದ್ದಿ ಯೋಜನೆಯಡಿ 2020-21ನೇ ಸಾಲಿನಲ್ಲಿ 1,76,096 ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸಲಾಗಿದೆ, ಅದಕ್ಕಾಗಿ 4,068 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.
ಮಾತೃ ಪೂರ್ಣ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 16,320 ಗರ್ಬಿಣಿಯರಿಗೆ ಹಾಗೂ 17,619 ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗಿದೆ. ಕ್ಷೀರಭಾಗ್ಯ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 1,386 ಅಂಗನವಾಡಿ ಕೇಂದ್ರಗಳಲ್ಲಿ 1,37,478 ಮಕ್ಕಳಿಗೆ ಕೆನೆ ಸಹಿತ ಹಾಲು ವಿತರಿಸಲಾಗಿದೆ.
• ಸ್ಪಚ್ಛ ಭಾರತ್ ಮಿಷನ್:
ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು 11,019 ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಅದಕ್ಕಾಗಿ ಒಟ್ಟು 23.85 ಕೋಟಿ ರೂಪಾಯಿಗಳನ್ನು ಭರಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣಾ ಘಟಕಗಳ ನಿರ್ವಹಣೆಗಾಗಿ 122 ಗ್ರಾಮ ಪಂಚಾಯತ್‌ಗಳ ಪೈಕಿ 78 ಗ್ರಾಮ ಪಂಚಾಯತ್‌ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಪ್ರಾರಂಭಕ್ಕೆ ಅನುಮೋದನೆ ನೀಡಲಾಗಿದೆ.
• ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ:
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಉದ್ಯಮಶೀಲತಾ ಅಭಿವೃದ್ದಿ ಯೋಜನೆಯಡಿ ನಿರುದ್ಯೋಗಿ ಪರಿಶಿಷ್ಟ ಜಾತಿ ಯುವಕ ಯುವತಿಯರಿಗೆ 1 ಲಕ್ಷ ರೂಪಾಯಿ ಸಹಾಯಧನವನ್ನು ನೀಡಲಾಗುತ್ತಿದೆ. 2019-20 ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಯಡಿ 50 ಅರ್ಹ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಕೃಷಿ ಯೋಗ್ಯ ಭೂಮಿ ಮಂಜೂರು ಮಾಡಲಾಗಿದೆ.
2018-19 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ 266 ಖುಷ್ಕಿ ಜಮೀನಿನ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು 3 ಲಕ್ಷ ರೂಪಾಯಿ ಸಹಾಯಧನ ನೀಡಿ, ಕೊಳವೆಬಾವಿ, ಪಂಪ್‌ಸೆಟ್ ಮೋಟಾರ್ ಅಳವಡಿಸಿ, ವಿದ್ಯುದ್ದೀಕರಣ ಮಾಡಿ ಕೊಡಲಾಗುತ್ತಿದೆ.
• ಮಹನೀಯರೇ, ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಬದ್ಧವಾಗಿದೆ. ಸರ್ಕಾರದ ಉತ್ತಮ ಕಾರ್ಯಗಳಿಗೆ ಸಾರ್ವಜನಿಕರು ಒತ್ತಾಸೆಯಾಗಿ ನಿಲ್ಲಬೇಕು ಮತ್ತು ಅವುಗಳ ಸಂಪೂರ್ಣ ಲಾಭವನ್ನು ಅರ್ಹತೆಗೆ ಅನುಗುಣವಾಗಿ ಮತ್ತು ಸಮಷ್ಠಿಯಾಗಿ ಪಡೆಯಬೇಕು ಎಂದು ವಿನಂತಿಸುತ್ತೇನೆ.
• ದೇಶ ಇಂದು ಎದುರಿಸುತ್ತಿರುವ ಕೆಲವು ಗಂಭೀರ ಸಮಸ್ಯೆಗಳ ನಿವಾರಣೆಗೆ ಯುವಜನತೆ ಬೆಂಬಲವಾಗಿ ನಿಲ್ಲಬೇಕು. ಭಾರತ ಇಂದು ಜಗತ್ತಿನಲ್ಲಿ ಪ್ರಬುದ್ಧ ರಾಷ್ಟçವಾಗಿ ಹೊರಹೊಮ್ಮಿದ್ದು, ವಿದ್ಯಾವಂತರಾದ ಯುವಜನರು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ನೆರವಾಗಬೇಕು ಎಂಬುದು ನನ್ನ ಹಂಬಲವಾಗಿದೆ.
ಎಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯಗಳು.
~ಜೈ ಹಿಂದ್, ಜೈ ಕರ್ನಾಟಕ.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಸ್ತಬ್ದ ಚಿತ್ರಗಳ ಪ್ರದರ್ಶನ ನಡೆಸಲಾಯಿತು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಸದಸ್ಯರಾದ ವೆಂಕಟರೆಡ್ಡಿ ಮುದ್ನಾಳ, ಬಸನಗೌಡ ಎಸ್.ಪಾಟಿಲ್ ಯಡಿಯಾಪೂರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರು ಹಾಗೂ ಸುರಪುರ ವಿಧಾನ ಸಭಾ ಸದಸ್ಯರಾದ ನರಸಿಂಹ ನಾಯಕ (ರಾಜುಗೌಡ) ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್, ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಅಧ್ಯಕ್ಷರಾದ ಬಾಬುರಾವ ಚಿಂಚನಸೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಗಿರಿಜಮ್ಮ ಸದಾ ಶಿವಪ್ಪಗೌಡ ರೋಟ್ನಡಗಿ, ನಗರಸಭೆ ಅಧ್ಯಕ್ಷರಾದ ವಿಲಾಸ ಬಿ.ಪಾಟೀಲ್, ಜಿಲ್ಲಾಧಿಕಾರಿಯಾದ ಡಾ.ರಾಗಪ್ರಿಯಾ ಆರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ಹಕ ಅಧಿಕಾರಿಯಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಋಷಿಕೇಶ ಭಗವಾನ್ ಸೋನವಣೆ, ಐ.ಎ.ಎಸ್ ಪ್ರೋಫೆಷನರಿಯಾದ ಅಶ್ವಿಜಾ, ಅಪರ ಜಿಲ್ಲಾಧಿಕಾರಿಯಾದ ಪ್ರಕಾಶ್ ಜಿ.ರಜಪೂತ್, ಸಹಾಯಕ ನಿರ್ದೇಶಕಾರ ಶಂಕರಗೌಡ ಸೋಮನಾಳ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ