ಸೋಮವಾರ, ಜನವರಿ 18, 2021

  ಮಕ್ಕಳಿಗೆ ಶಿಕ್ಷಣ ನೀಡಿ ಮೂಡನಂಬಿಕೆಯಿAದ ಹೊರ ಬನ್ನಿ: ಪ್ರಭು ದೊರೆ

ಯಾದಗಿರಿ.ಜ18 (ಕ. ವಾ): ಅಲೆಮಾರಿ ಸಮುದಾಯದ ಜನರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ ಮೂಡನಂಬಿಕೆಯಿAದ ಹೊರ ಬಂದು ಆರ್ಥಿಕವಾಗಿ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ ಹೇಳಿದರು.
ಅವರು ನಗರದ ಶಾಂತಿನಗರದಲ್ಲಿ ಜ.14 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಯಾದಗಿರಿ ತಾಲ್ಲೂಕು ಹಿಂದುಳಿದ ವರ್ಗಗಳ ಸಹಯೋಗದಿಂದ ನಡೆದ ಅಲೆಮಾರಿ ಮತ್ತು ಅರೆಅಲೆಮಾರಿ ಸಮುದಾಯದ ಕಾಲೋನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು ಮಕ್ಕಳ ಹೆರಿಗೆ ಮತ್ತು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ಹಟ್ಟಿಯಿಂದ ದೂರವಿರುವ ಮೂಡನಂಬಿಕೆಯನ್ನು ಪದ್ಧತಿಯನ್ನು ಕೈಬಿಡಬೇಕು ಏಕೆಂದರೆ ಇದು ನಿಸರ್ಗದತ್ತನೀಯವಾಗಿದ್ದೆ ಎಂದರು.

ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಸಂಜೀವಕುಮಾರ ಪಟ್ಟಣಕರ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿರುವ ಯೋಜನೆಗಳ ಬಗ್ಗೆ ಸ್ವವಿಸ್ತಾರವಾಗಿ ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಮರೆಪ್ಪ ಹಂಚನಾಳ, ಯಲ್ಲಪ್ಪ ಕೋರಿ, ಭೀಮರಾಯ ಸೇರಿದಂತೆ ಇತರರಿದ್ದರು. ಶರಣಪ್ಪ ಕಾರ್ಯಕ್ರಮವನ್ನು ಸ್ವಾಗತಿಸಿದರೆ, ಲಕ್ಷಿö್ಮÃಕಾಂತರೆಡ್ಡಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...