ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವ್ಯಕ್ತಿ ಚೌಡಯ್ಯ: ಬಾಬುರಾವ ಚಿಂಚನಸೂರ
ಯಾದಗಿರಿ.ಜ.21 (ಕ.ವಾ):- ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಮಾಜಿ ಸಚಿವರು ಹಾಗೂ ನಿಜಶರಣ ಅಂಬಿಗರ
ಚೌಡಯ್ಯ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರು ಅಭಿಪ್ರಾಯಪಟ್ಟರು ನಗರದ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾರಿಗೂ ಹೆದರದೆ, ಅಳುಕದೇ ಸಮಾಜದ ಅಂಕುಡೊAಕುಗಳನ್ನು ತಿದ್ದಿದವರು. ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿದ್ದವರಿಗೆ ಸಾಂತ್ವಾನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ಅಂಬಿಗರ ಚೌಡಯ್ಯನವರು ಎಂದು ಬಣ್ಣಿಸಿದರು. ಜಾತಿ ಅಭಿಮಾನ ಇರಲಿ, ದುರಾಭಿಮಾನ ಬೇಡ, ಇಂತಹ ಮಹಾತ್ಮರ ಜಯಂತಿಯನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡದೇ ಎಲ್ಲಾ ವರ್ಗದವರನ್ನು ಒಗ್ಗೂಡಿ ಆಚರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಯಾದ ಪ್ರಕಾಶ ಜಿ.ರಜಪೂತ್ ಅವರು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರು ಭಾವಚಿತ್ರಕ್ಕೆ ಪುಪ್ಪಾರ್ಚನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಎಸ್.ಚಂಡಕ್ರಿ, ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷರಾದ ಮೌಲಾಲಿ ಅನಾಪುರ, ಹನುಮಂತ ಮಡ್ಡಿ ಸೇರಿದಂತೆ ಸಮಾಜದ ಗಣ್ಯರು ಹಾಗೂ ಜಿಲ್ಲಾಡಳಿತ ಸಿಬ್ಬಂದಿಗಳ ಕಾರ್ಯಕ್ರಮದಲ್ಲಿ ಇದ್ದರು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ