ಭಾರತ ಸ್ಟೇಜ್-4 ವಾಹನಗಳ ನೋಂದಣಿಗೆ 16 ರವರೆಗೆ ಕಾಲಾವಕಾಶ
ಯಾದಗಿರಿ,ಜ 11 (ಕ.ವಾ):- ಭಾರತ ಸ್ಟೇಜ್-4 ವಾಹನಗಳು ಇ-ಪೋರ್ಟಲ್‌ನಲ್ಲಿ ನಮೂದಿತವಾಗಿ 2020 ರ ಮಾರ್ಚ್ 31 ರೊಳಗಾಗಿ ತಾತ್ಕಾಲಿಕವಾಗಿ ನೋಂದಣಿ ಪಡೆದಿರುವ ವಾಹನಗಳು 2021ರ ಜನವರಿ 16 ರೊಳಗಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯ ಸಾರ್ವಜನಿಕರು ಹಾಗೂ ವಾಹನ ಅಧೀಕೃತ ಮಾರಾಟಗಾರರು ಭಾರತ್ ಸ್ಟೇಜ್-4 ವಾಹನಗಳನ್ನು ನೋಂದಣಿ ಮಾಡಿಕೊಂಡು, ಸದುಪಯೋಗ ಪಡೆಯಬೇಕೆಂದು ಯಾದಗಿರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರೆ ಮಾಡಿ ಯೋಜನೆ ಮಾಹಿತಿ ಪಡೆಯಲು ಕೋರಿಕೆ
ಯಾದಗಿರಿ,ಜ 11 (ಕ.ವಾ):- ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಸಾಧನ ಸಲಕರಣೆ, ಯಂತ್ರಚಾಲಿತ ತ್ರಿಚಕ್ರವಾಹನ, ಆಧಾರ ಯೋಜನೆ, ಟಾಕಿಂಗ್ ಲ್ಯಾಪ್‌ಟಾಪ್, ವಿವಾಹ ಪ್ರೋತ್ಸಾಹಧನ ಯೋಜನೆ, ಸ್ವಯಂ ಉದ್ಯೋಗದಡಿ ಹೊಲಿಗೆಯಂತ್ರ, ವೈದ್ಯಕೀಯ ಪರಿಹಾರ ನಿಧಿ, ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ಸ್ಪರ್ಧಾಚೇತನ ಯೋಜನೆಯ ಸೌಲಭ್ಯಗಳ ಕುರಿತು ಹೆಚ್ಚಿನ ಮಾಹಿತಿಗೆ ದೂ: 08473-253531 ಸಂಪರ್ಕಿಸಲು ವಿಕಲಚೇತನರ ಸಹಾಯವಾಣಿ ಕೇಂದ್ರದ ಮಾಹಿತಿ ಸಲಹೆಗಾರರು ಪ್ರಕಟಣೆಯಲ್ಲಿ ಕೋರಿದ್ದಾರೆ.
20 ರಂದು ಉದ್ಯೋಗ ಮೇಳ
ಯಾದಗಿರಿ,ಜ 11 (ಕ.ವಾ):- ರಾಷ್ಟಿçÃಯ ವೃತ್ತಿ ಸೇವಾ ಅಡಿಯಲ್ಲಿ (ಓಅSP) ಒಂದು ದಿನದ ಉದ್ಯೋಗ ಮೇಳವನ್ನು ಇದೇ ಜನವರಿ 20ರ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಆಯೋಜಿಸಲಾಗಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ಅಭ್ಯರ್ಥಿಗಳು ಹಾಗೂ ವಿಕಲಚೇತನ ಅಭ್ಯರ್ಥಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 9448250868, 08473-253718ಗೆ ಕರೆ ಮಾಡಬಹುದು.
ಅಲ್ಲದೆ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡುವುದಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಪ್ರಭು ಚವ್ಹಾಣ ಅವರ ಪ್ರವಾಸ
ಯಾದಗಿರಿ,ಜ 11 (ಕ.ವಾ):- ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ.ಚವ್ಹಾಣ ಅವರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಅವರು ಜ.12ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಯಾದಗಿರಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸುವರು ಹಾಗೂ ರಾತ್ರಿ ವಾಸ್ತವ್ಯ ಹೂಡುವರು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿಂದು 02 ಕೋವಿಡ್-19 ಪಾಸಿಟಿವ್ ಪ್ರಕರಣ
ಯಾದಗಿರಿ,ಜ 11 (ಕ.ವಾ)- ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿAದ ಆಸ್ಪತ್ರೆಗೆ ದಾಖಲಾದವರಲ್ಲಿ ಜ.11 ರ ಸೋಮವಾರ 5 ಮಂದಿ ಸಂಪೂರ್ಣ ಚೇತರಿಸಿಕೊಂಡಿದ್ದು, ಒಟ್ಟಾರೆ ಇಲ್ಲಿಯವರೆಗೆ 10,529 ಮಂದಿ ಗುಣಮುಖರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ. ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 02 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 10,627 ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಕೋವಿಡ್ ಸಕ್ರಿಯ ಪ್ರಕರಣಗಳಲ್ಲಿ 37 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ