ಇಂದು ಉದ್ಯೋಗ ಮೇಳ
ಯಾದಗಿರಿ.ಜ.19 (ಕ.ವಾ):- ರಾಷ್ಟಿçÃಯ ವೃತ್ತಿ ಸೇವಾ ಅಡಿಯಲ್ಲಿ (ಓಅSP) ಒಂದು ದಿನದ ಉದ್ಯೋಗ ಮೇಳವನ್ನು ಇದೇ ಜನವರಿ 20 ರಂದು ಯಾದಗಿರಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರ ವರೆಗೆ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ ವಿವಿಧ ಹುದ್ದೆಗಳಾದ ಫೀಲ್ಡ್ ಆಫೀಸರ್ ಹುದ್ದೆ, ಇಡಿಓ ಫೀಲ್ಡ್ ಆಫೀಸರ್, ಓಜೆಟಿ, ಹಾರ್ಟಿಕಲ್ಚರ್, ಟೀಚಿಂಗ್ ಫೀಲ್ಡ್, ಟ್ರೇನಿ, ಕಸ್ಟಮರ್ ರಿಲೇಷನ್‌ಶಿಪ್ ಆಫೀಸರ್, ಪೋನ್ ಬ್ಯಾಂಕಿAಗ್/ಕಸ್ಡಮರ್ ಕೇರ್ ಎಕ್ಸಿಕ್ಯೂಟಿವ್, ಲೋನ್ ಆಫೀಸರ್/ಫೀಲ್ಡ್ ಅಸಿಸ್ಟಂಟ್, ಜಾವಾ ಡೆವಲಪರ್ ಡಿಸೈನ್, ಟೆಸ್ಟೀಂಗ್ ಇಂಜಿನಿಯರ್ ಅಡ್ಮಿನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಆಸಕ್ತರು 18 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ಹಾಗೂ ವಿಕಲಚೇತನ ಅಭ್ಯರ್ಥಿಗಳು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ 9448250868, 08473-253718 ಗೆ ಕರೆ ಮಾಡಬಹುದು
ಅಲ್ಲದೆ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡುವುದಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ