ಮಂಗಳವಾರ, ಜನವರಿ 5, 2021

 56 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ * ಗುಣಮಟ್ಟದ ಚಿಕಿತ್ಸೆ ಲಭ್ಯ  

300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆ: ಸಕಲ ಸೌಕರ್ಯ!

ಯಾದಗಿರಿ,ಜ.5(ಕರ್ನಾಟಕ ವಾರ್ತೆ):- 56 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಬಳಿ ನಿರ್ಮಾಣಗೊಂಡಿರುವ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಯಲ್ಲಿ ಸಕಲ ಸೌಕರ್ಯ ಒಳಗೊಂಡಿದ್ದು, ಜ.6ರಂದು ಮುಖ್ಯಮಂತ್ರಿಗಳಿAದ ನಾಡಿಗೆ ಲೋಕಾರ್ಪಣೆಗೊಳ್ಳಲಿದೆ.


ಇನ್ಮುಂದೆ ಗಿರಿನಾಡಿನ ಜನರು ಚಿಕಿತ್ಸೆಗಾಗಿ ಕಲಬುರಗಿ,ರಾಯಚೂರು,ಸೋಲಾಪುರ ಸೇರಿದಂತೆ ಇತರೆಡೆ ಮುಖಮಾಡದೇ ತಮ್ಮ ಜಿಲ್ಲಾಕೇಂದ್ರದಲ್ಲಿ ಸಕಲ ಸೌಕರ್ಯ ಒಳಗೊಂಡು ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ನೂತನ ಜಿಲ್ಲಾಸ್ಪತ್ರೆಯು ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 3 ಕಿ.ಮೀ ಅಂತರವಿದೆ.ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿ ನೆಲ ಮಹಡಿಯಲ್ಲಿ ಸ್ವಾಗತ ಕೌಂಟರ್, ಹೊರ ರೋಗಿ ವಿಭಾಗ (ಓ.ಪಿ.ಡಿ), ತಪಾಸಣೆ ಕೊಠಡಿ, ಮೈನರ್ ಶಸ್ತç ಕೊಠಡಿ ರೋಗ ತಪಾಸಣೆ ಹಾಗೂ ಇನ್ನೀತರ ಪ್ರಮುಖವುಗಳು ಇರಲಿವೆ.

ಜಿಲ್ಲಾಸ್ಪತ್ರೆಯ ಮೊದಲನೇ ಮಹಡಿಯಲ್ಲಿ ಮೈನರ್ ಶಸ್ತç ಕೊಠಡಿ, ಐ.ಸಿ.ಯು, ಯುರೋಲಜಿ, ಡರ್ಮಾಟಾಲಾಜಿ, ಇ.ಎನ್.ಟಿ ಸೆೆಂಟರ್, ಡಯಾಲೈಸಿಸ್, ಸಭಾಂಗಣ ಇನ್ನೀತರ ಪ್ರಮುಖವುಗಳು ಒಳಗೊಂಡಿದೆ.

ಎರಡನೇ ಮಹಡಿಯಲ್ಲಿ ಮೇಜರ್ ಶಸ್ತç ಕೊಠಡಿ -2 , ಮಾಡುಲರ್ ಶಸ್ತç ಕೊಠಡಿ, ರಕ್ತ ನಿಧಿ, ಗ್ರಂಥಾಲಯ , ಸ್ಪೇಷಲ್ ವಾರ್ಡ್, ಮೂರನೇ ಮಹಡಿಯಲ್ಲಿ ಮೇಜರ್ ಓಟಿ , ಪುನರ್‌ವಸತಿ ಸೆಂಟರ್ ಲ್ಯಾಬ್, ಸ್ಪೆಷಲ್ ವಾರ್ಡಗಳು, ಪ್ಯಾಂಟಿ ಸ್ಟೋರ್ ಇವೆ.

ಟೆರಸ್ ಮಹಡಿಯಲ್ಲಿ ಎ.ಹೆಚ್.ಯು ಕೊಠಡಿ, ಲಿಫ್ಟ್ ಮಶೀನ್ ಕೋಣೆ,  ಸಿಂಟೆಕ್ಸ್ ಟ್ಯಾಂಕ್‌ಗಳು, ಸೋಲಾರ್ ವಾಟರ್ ಹೀಟರ್ಸ್ ಇವೆ.

ನೂತನ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗಾಗಿಯೇ ವಸತಿ ಗೃಹಗಳನ್ನು ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿದ್ದು ನೆಲಮಹಡಿ ಹಾಗೂ ಮೊದಲ ಮಹಡಿ ಸೇರಿದಂತೆ 8 ಯೂನಿಟ್ ಹೊಂದಿದೆ. ಶುಶ್ರೂಕಿಯರಿಗಾಗಿ ಮೂರು ಮಹಡಿಯಲ್ಲಿ 12ಯೂನಿಟ್‌ಗಳಲ್ಲಿ ವಸತಿಗೃಹ ನಿರ್ಮಿಸಲಾಗಿದೆ. ಗ್ರೂಪ್ ಡಿ ಸಿಬ್ಬಂದಿಗಾಗಿ  8 ಯೂನಿಟ್‌ಗಳಲ್ಲಿ ವಸತಿಗೃಹ ನಿರ್ಮಿಸಲಾಗಿದೆ.

ವಿದ್ಯುತ್‌ಚ್ಛಕ್ತಿ ಕೊಣೆ,ಗ್ಯಾಸ್ ಮನಿಪೋಲ್ಡ್ ಕೋಣೆ, ಶವಗಾರ ಕೋಣೆ ಸೇರಿದಂತೆ ಜಿಲ್ಲಾಸ್ಪತ್ರೆಗೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ನೂತನವಾಗಿ ನಿರ್ಮಾಣವಾಗಿರುವ ಜಿಲ್ಲಾಸ್ಪತ್ರೆಯಲ್ಲಿವೆ.



ಯೋಜನೆಯ ಅಂದಾಜು ವೆಚ್ಚ 325 ಕೋಟಿ ರೂ.*ಗಿರಿನಾಡಿನ ಬಹುದಿನಗಳ ಕನಸಿಗೆ ಸ್ಪಂದನೆ 

ಯಾದಗಿರಿಯಲ್ಲಿ ಸಿಎಂ ಅವರಿಂದ ಯಿಮ್ಸ್ಗೆ ಶಂಕುಸ್ಥಾಪನೆ ಜ.6ರಂದು

ಯಾದಗಿರಿ,ಜ.5(ಕರ್ನಾಟಕ ವಾರ್ತೆ):- ಕಲ್ಯಾಣ ಕರ್ನಾಟಕ ಭಾಗದ ಗಿರಿನಾಡು ಖ್ಯಾತಿಯ ಯಾದಗಿರಿ ಜಿಲ್ಲೆಯ ಜನರ ಬಹುದಿನಗಳ ಕನಸಿನ ಕೂಸಾದ ಯಿಮ್ಸ್ (ಯಾದಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್)ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸ್ಪಂದಿಸಿದೆ. ಸಿಎಂ ಯಡಿಯೂರಪ್ಪ ಅವರು 325 ಕೋಟಿ ರೂ.ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಗ್ರಾಮದ ಹತ್ತಿರ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಕಾಮಗಾರಿಗೆ ಜ.6ರಂದು ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಯೋಜನೆಯ ಒಟ್ಟು ಅಂದಾಜು ಮೊತ್ತ 438.75 ಕೋಟಿ ರೂ.ಗಳಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಯಿಮ್ಸ್ ಸ್ಥಾಪನೆಯಾಗುವುದರಿಂದ ಜಿಲ್ಲೆ ಸೇರಿದಂತೆ ರಾಜ್ಯದ ಪ್ರತಿಭಾವಂತರಿಗೆ ವೈದ್ಯರಾಗುವ ಅವಕಾಶ ಕಲ್ಪಿಸಿಕೊಡುತ್ತಿದೆ ಮತ್ತು ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಇದರ ಜೊತೆಗೆ ಗುಣಮಟ್ಟದ ಚಿಕಿತ್ಸಯೂ ಈ ಭಾಗದ ಜನರಿಗೆ ಲಭ್ಯವಾಗುವ ಆಶಾವಾದ ಮೂಡಿದೆ.

ಈ ಯಿಮ್ಸ್ ಸಂಸ್ಥೆಯು 70 ಎಕರೆ ಜಾಗದಲ್ಲಿ ಸಾಕಾರಗೊಳ್ಳುತ್ತಿದೆ. ಶೈಕ್ಷಣಿಕ ವಿಭಾಗದ ನಾಲ್ಕು ಅಂತಸ್ತಿನ ಕಟ್ಟಡ, ಆರು ಅಂತಸ್ತಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ನಿಲಯಗಳು, ಬೋಧಕ ಸಿಬ್ಬಂದಿಯ 5 ಅಂತಸ್ತಿನ ವಸತಿ ಕಟ್ಟಡ, ಬೋಧಕೇತರ ಸಿಬ್ಬಂದಿಯ 7 ಅಂತಸ್ತಿನ ಕಟ್ಟಡ, 7 ಅಂತಸ್ತಿನ ನರ್ಸ್ ವಸತಿ ಗೃಹ, ಡೀನ್ ಮತ್ತು ಪ್ರಾಂಶುಪಾಲರಿಗೆ ವಸತಿ ಗೃಹಗಳು ಈ ಆವರಣದಲ್ಲಿ ತಲೆ ಎತ್ತಲಿವೆ. 

ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿನಲ್ಲಿ 150 ಎಂ.ಬಿ.ಬಿ.ಎಸ್. ಸೀಟುಗಳ ಹೊಸ ವೈದ್ಯಕೀಯ ಕಾಲೇಜ್‌ನ್ನು ಸ್ವಾಯತ್ತ ಸಂಸ್ಥೆಯ ಸ್ಥಾನಮಾನದೊಂದಿಗೆ ಸ್ಥಾಪಿತವಾಗಲಿದೆ. ಯಿಮ್ಸ್ ಕಟ್ಟಡದ ಕಾಮಗಾರಿಯನ್ನು 24 ತಿಂಗಳೊಳಗೆ ಮುಗಿಸಲು ಸರಕಾರವು ಗುತ್ತಿಗೆ ಪಡೆದಿರುವ ಹೈದರಾಬಾದ್‌ನ ಕೆಎಂವಿ ಪ್ರೆöÊವೆಟ್ ಪ್ರೊಜೆಕ್ಟ್ ಲಿಮಿಟೆಡ್‌ಗೆ ಸೂಚಿಸಿದೆ.

*ಯಿಮ್ಸ್ ಕಟ್ಟಡದಲ್ಲೇನಿರಲಿದೆ..?: ಯಿಮ್ಸ್ನಲ್ಲಿ  37117.50 ಚದರ ಮೀಟರ್ ವಿಸ್ತೀರ್ಣದಲ್ಲಿ ಅಕಾಡೆಮಿಕ್ ಬ್ಲಾಕ್ ನಿರ್ಮಾಣವಾಗಲಿದ್ದು, 4 ಅಂತಸ್ತಿನ ಕಟ್ಟಡ, ಆಡಳಿತ ಕಛೇರಿ, ಭೋಧಕ ಕೊಠಡಿಗಳು, ಕೇಂದ್ರ ಗ್ರಂಥಾಲಯ, ಪರೀಕ್ಷಾ ಕೊಠಡಿಗಳು, ಸೆಮಿನಾರ್ ಹಾಲ್, ಪ್ರಯೋಗಾಲಯಗಳು ಇನ್ನೀತರ ಪ್ರಮುಖವುಗಳು ಒಳಗೊಂಡಿರಲಿದೆ.

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. 

11571.00ಚದರ ಮೀಟರ್ ವಿಸ್ತೀರ್ಣದಲ್ಲಿ 6 ಅಂತಸ್ತಿನ ಕಟ್ಟಡ ಬಾಲಕೀಯರ ವಿದ್ಯಾರ್ಥಿನಿಲಯ ನಿರ್ಮಾಣವಾಗಲಿದ್ದು, 187 ಕೊಠಡಿಗಳಿರಲಿದ್ದು, 374 ವಿದ್ಯಾರ್ಥಿನಿಯರಿಗೆ ಸ್ಥಳಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. 

9509.00 ಚದರ ಮೀಟರ್ ವಿಸ್ತೀರ್ಣದಲ್ಲಿ 5 ಅಂತಸ್ತಿನ ಬೋಧಕ ಸಿಬ್ಬಂದಿ ವಸತಿ ಗೃಹ ನಿರ್ಮಾಣವಾಗಲಿದ್ದು, 32 ವಸತಿಗೃಹಗಳಿರಲಿವೆ. 

ಬೋಧಕೇತರ ಸಿಬ್ಬಂದಿಗೂ 3422 ಚದರ ಮೀಟರ್ ವಿಸ್ತೀರ್ಣದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು, 24 ವಸತಿ ಗೃಹಗಳಿರಲಿವೆ.3422 ಚದರ್ ಮೀಟರ್ ವಿಸ್ತೀರ್ಣದಲ್ಲಿ ಶೂಶ್ರುಷಕರಿಗಾಗಿ 7 ಅಂತಸ್ತಿನ ಕಟ್ಟಡ ವಸತಿ ಗೃಹ ನಿರ್ಮಿಸಲಾಗುತ್ತಿದ್ದು, 24 ವಸತಿಗೃಹಗಳಿರಲಿವೆ. 

ಡೀನ್ ಹಾಗೂ ಪ್ರಾಂಶುಪಾಲರುಗಳಿಗೆ ವಸತಿ ಗೃಹ, 330.00 ಚ.ಮೀ ವಿಸ್ತೀರ್ಣದಲ್ಲಿ ವಾಣಿಜ್ಯ ಕಟ್ಟಡ, ಸರ್ವಿಸ್ ಬ್ಲಾಕ್ ಕಟ್ಟಡ ನಿರ್ಮಾಣ ಒಳಗೊಂಡಿರುತ್ತದೆ.

ಈ ಯಿಮ್ಸ್ ಆವರಣದಲ್ಲಿ  ನಿರ್ಮಿಸಲು ಉದ್ದೇಶಿಸಿರು ಕಟ್ಟಡಗಳ ಒಟ್ಟಾರೆ ವಿಸ್ತೀರ್ಣ: 78072.50 ಚದರ ಮೀಟರ್ (839935.18 ಚದರ ಅಡಿಗಳು) ಇರಲಿದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...