ಗುರುವಾರ, ಜನವರಿ 21, 2021

 75 ಹಿರಿಯ ನಾಗರಿಕ ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಣೆ

ಯಾದಗಿರಿ.ಜ.21 (ಕ.ವಾ):- ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಅಲಿಂಕೊ ಕಂಪನಿಯ ಸಹಯೋಗದಲ್ಲಿ ರಾಷ್ಟಿçಯ ವಯೋಶ್ರೀ ಯೋಜನೆಯಡಿಯಲ್ಲಿ 75 ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಯನ್ನು ವಿತರಿಸಲಾಯಿತು.


ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜ.21 ರ ಗುರುವಾರ ನಡೆದ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯಡಿಯಾಪೂರ ಅವರು ಉದ್ಘಾಟಿಸಿದರು.

402 ಜನ ಫಲಾನುಭವಿಗಳನ್ನು ಗುರುತಿಸಿ ವೀಲ್‌ಚೇರ್, ಕನ್ನಡಕ, ಶ್ರವಣ ಸಾಧನ, ವಾಕರ್, ವಾಕಿಂಗ್ ಸ್ಟಿಕ್‌ಗಳು ಒಳಗೊಂಡ 830 ಸಾಧನ ಸಲಕರಣೆಗಳು 19.24 ಲಕ್ಷ ರೂ. ವೆಚ್ಚವಾಗಿದ್ದು, ಸಾಕೇಂತಿಕವಾಗಿ ಇಂದು ಯಾದಗಿರಿ ತಾಲೂಕಿನಲ್ಲಿ 75 ಜನ ಫಲಾನುಭವಿಗಳಿಗೆ ಜಿಲ್ಲಾ ಮಟ್ಟದಲ್ಲಿ ಅವರು ವಿತರಿಸಿದರು.

ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಅನುಪಮಾ ಜಾಧವ, ಲಿಟ್ಲ ಸರ್ಕಾರ, ಸುರಪೂರ ತಾಲೂಕ ನೋಡಲ್ ಅಧಿಕಾರಿ ದೀಪಿಕಾ. ಇಲಾಖೆಯ ಸಿಬ್ಬಂದಿಗಳಾದ ನಾಗಮ್ಮ ಜಕಾತಿ, ರಾಧ.ಜಿ, ಅಬ್ದುಲ್ ಭಾಷಾ, ಶರಣಪ್ಪ, ಮಲ್ಲಯ್ಯ ತಿಪ್ಪಣ್ಣ ಇದ್ದರು. ಸಹಾಯಕ ಶಿಶು ಯೋಜನಾಧಿಕಾರಿ ಮೀನಾಕ್ಷಮ್ಮ ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...