ಸೋಮವಾರ, ಜನವರಿ 18, 2021

 ಯಾದಗಿರಿ, ಗುರುಮಿಠಕಲ್ ತಾಲೂಕಿನ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ 


ಯಾದಗಿರಿ.ಜ.18 (ಕ.ವಾ):-
2020 ನೇ ಸಾಲಿನ ಮೊದಲ 30 ತಿಂಗಳವಧಿಗೆ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ  ಯಾದಗಿರಿ ತಾಲೂಕಿನ 22 ಹಾಗೂ ಗುರುಮಿಠಕಲ್  ತಾಲೂಕಿನ 18 ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಜಿಲ್ಲಾಧಿಕಾರಿಗಳಾದ ಡಾ.ರಾಗಪ್ರಿಯ ಆರ್.  ಅವರು ಇಂದು (ಜ.18 ರ ಸೋಮವಾರ) ನಗರದ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯತ್ ನೂತನ ಸದಸ್ಯರ ಸಭೆ ಜರುಗಿಸಿ, ಅವರ ಸಮ್ಮುಖದಲ್ಲಿಯೇ ಮೀಸಲಾತಿ ನಿಗದಿಪಡಿಸಿ ಪ್ರಕಟಿಸಿದರು. 


ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಒಳ ಚರಂಡಿ ಸೇರಿದಂತೆ ಇತರರ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿ ಕಡೆ ಸಾಗುವಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.


ಗ್ರಾಮಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ ಸ್ಥಾನಗಳ ಮೀಸಲಾತಿ ನಿಗದಿಪಡಿಸುವ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಹಾಯಕ ಆಯುಕ್ತರಾದ ಶಂಕರಗೌಡ ಸೋಮನಾಳ, ಯಾದಗಿರಿ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಗುರುಮಿಠಕಲ್ ತಹಶೀಲ್ದಾರ ಸಂಗಮೇಶ ಜಿಡಗೆ ಸೇರಿಂದ ಇತರರು ಇದ್ದರು.


ಯಾದಗಿರಿ ತಾಲೂಕಿನ 22 ಗ್ರಾಮ ಪಂಚಾಯತಿಗಳ ಮೀಸಲಾತಿಯ ವಿವರ:


ಕ್ರಮ ಸಂಖ್ಯೆ ಗ್ರಾಮ ಪಂಚಾಯತಿಯ ಹೆಸರು ಅಧ್ಯಕ್ಷ ಉಪಾಧ್ಯಕ್ಷ

1 ಠಾಣಗುಂದಿ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)

2 ಅರಿಕೇರಾ (ಬಿ) ಪರಿಶಿಷ್ಟ ಜಾತಿ( ಮಹಿಳೆ) ಸಾಮಾನ್ಯ

3 ಮುದ್ನಾಳ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ

4 ಯರಗೋಳ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ 

5 ಅಲ್ಲಿಪೂರ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ

6 ಹತ್ತಿಕುಣಿ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)

7 ಬಂದಳ್ಳಿ ಪರಿಶಿಷ್ಟ ಜಾತಿ( ಮಹಿಳೆ) ಸಾಮಾನ್ಯ

8 ಹೊನಿಗೇರಾ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ

9 ಮುಂಡರಗಿ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ( ಮಹಿಳೆ) 

10 ರಾಮಸಮುದ್ರಾ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)

11 ಅರಿಕೇರಾ (ಕೆ) ಪರಿಶಿಷ್ಟ ಪಂಗಡ ಸಾಮಾನ್ಯ (ಮಹಿಳೆ)

12 ರ‍್ಕನಳ್ಳಿ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)

13 ಹಳಗೇರಾ ಸಾಮಾನ್ಯ ಪರಿಶಿಷ್ಟ ಪಂಗಡ 

14 ಕೌಳೂರು ಸಾಮಾನ್ಯ ಪರಿಶಿಷ್ಟ ಜಾತಿ( ಮಹಿಳೆ)

15 ಮಲ್ಹಾರ ಸಾಮಾನ್ಯ ಪರಿಶಿಷ್ಟ ಜಾತಿ( ಮಹಿಳೆ)

16 ಬಳಿಚಕ್ರ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ

17 ಬಾಡಿಯಾಳ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)

18 ಬೆಳಗುಂದಾ ಪರಿಶಿಷ್ಟ ಜಾತಿ( ಮಹಿಳೆ) ಸಾಮಾನ್ಯ

19 ಕಡೇಚೂರ ಪರಿಶಿಷ್ಟ ಜಾತಿ( ಮಹಿಳೆ) ಸಾಮಾನ್ಯ

20 ಕಿಲ್ಲನಕೇರಾ ಸಾಮಾನ್ಯ ಪರಿಶಿಷ್ಟ ಜಾತಿ( ಮಹಿಳೆ)

21 ಸೈದಾಪೂರ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)

22 ಮೋಟ್ನಳ್ಳಿ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ


ಗುರುಮಿಠಕಲ್ ತಾಲೂಕಿನ 18 ಗ್ರಾಮ ಪಂಚಾಯತಿಗಳ ಮೀಸಲಾತಿಯ ವಿವರ:

ಕ್ರಮ ಸಂಖ್ಯೆ ಗ್ರಾಮ ಪಂಚಾಯತಿ ಹೆಸರು ಅಧ್ಯಕ್ಷ ಉಪಾಧ್ಯಕ್ಷ

01 ಪಸಪುಲ್ ಸಾಮಾನ್ಯ ಸಾಮಾನ್ಯ

02 ಯಂಪಾಡ ಸಾಮಾನ್ಯ ಪರಿಶಿಷ್ಟ ಜಾತಿ ಮಹಿಳೆ

03 ಮಾದ್ವಾರ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ

04 ಮಿನಾಸಪೂರ ಸಾಮಾನ್ಯ ಸಾಮಾನ್ಯ

05 ಕಾಳೆಬೆಳಗುಂದಿ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)

06 ಅಜಲಾಪೂರ ಪ್ರವರ್ಗ-ಅ (ಮಹಿಳೆ) ಪ್ರವರ್ಗ-ಬ

07 ಜೈಗ್ರಾಮ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ( ಮಹಿಳೆ)

08 ಯಲಸತ್ತಿ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ

09 ಕೊಂಕಲ್ ಪರಿಶಿಷ್ಟ ಜಾತಿ ಪ್ರವರ್ಗ-ಅ(ಮಹಿಳೆ)

10 ಯಲ್ಹೇರಿ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ

11 ಕಂದಕೂರ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)

12 ಚಿನ್ನಕಾರ ಪರಿಶಿಷ್ಟ ಜಾತಿ (ಮಹಿಳೆ) ಪ್ರವರ್ಗ-ಅ (ಮಹಿಳೆ)

13 ಚಪೇಟ್ಲಾ ಪರಿಶಿಷ್ಟ ಜಾತಿ(ಮಹಿಳೆ) ಸಾಮಾನ್ಯ

14 ಗಾಜರಕೋಟ ಪ್ರವರ್ಗ-ಅ (ಮಹಿಳೆ) ಪರಿಶಿಷ್ಟ ಜಾತಿ

15 ಕಾಕಲವಾರ ಸಾಮಾನ್ಯ (ಮಹಿಳೆ) ಸಾಮಾನ್ಯ

16 ಚಂಡ್ರಿಕಿ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)

17 ಅನಪೂರ ಪ್ರವರ್ಗ-ಬ ಸಾಮಾನ್ಯ ಮಾಹಿಳೆ

18 ಪುಟಪಾಕ ಸಾಮಾನ್ಯ ಸಾಮಾನ್ಯ (ಮಹಿಳೆ)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...