ಬುಧವಾರ, ಜನವರಿ 20, 2021

 ನಾಲಾ ಹೂಳೆತ್ತುವ ಕಾಮಗಾರಿ ಪರಿಶೀಲಸಿದ  ಪವಾರ  


ಯಾದಗಿರಿ.ಜ.20 (ಕ.ವಾ)
:-  ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಳಿಚಕ್ರ ಗ್ರಾಮದ ದಿಬ್ಬಿಕೆರೆ ನಾಲಾ ಹೂಳೆತ್ತುವ  ಕಾಮಗಾರಿಯ ಸ್ಥಳಕ್ಕೆ ಯಾದಗಿರಿ ತಾಲ್ಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ ಹಾಗೂ ಜಿಲ್ಲಾ ಪಂಚಾಯತಿ ಐಇಸಿ ಸಂಯೋಜಕರಾದ ಪರಶುರಾಮ ಅವರು ಭೇಟಿ ನೀಡಿ, ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ಮಾಡಿದರು.


ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಬಳಿಚಕ್ರ ಗ್ರಾಮದ 74 ಜನ ಕೂಲಿ ಕಾರ್ಮಿಕರು ದಿಬ್ಬಿಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದು, (ಕೋವಿಡ್-19) ಕರೋನಾ ರೂಪಾಂತರ ಸೋಂಕಿನ ಹಿನ್ನಲೆಯಲ್ಲಿ ಸರಕಾರದ ನಿರ್ದೇಶನದಂತೆ ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸುವ ಜೊತೆಗೆ  ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕೆಲಸ ಮಾಡುವಂತೆ ತಿಳಿಸಿದರು.


ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ತಾಯಂದಿರ ಮಕ್ಕಳ ಪಾಲನೆ ಹಾಗೂ ಆರೋಗ್ಯದ ಸುರಕ್ಷತೆಗೆ ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಪಂಚಾಯತಿ ಸಿಬ್ಬಂದಿಗಳಿಗೆ ಸೂಚಿಸಿದರು.


ಕಾರ್ಮಿಕರು ತಮ್ಮ ಮೇಲೆ ಕೆಲಸದ ಒತ್ತಡ ಹಾಕಿಕೊಳ್ಳದೆ ಕೆಲಸ ಮಾಡಬೇಕು. ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ದಿನಕ್ಕೆ 275 ರೂ.ಗಳಂತೆ ಒಂದು ಕುಟುಂಬಕ್ಕೆ ವರ್ಷದಲ್ಲಿ 100 ದಿನ ಗ್ರಾಮ ಪಂಚಾಯತಿ ವತಿಯಿಂದ ನರೇಗಾ ಯೋಜನೆಯಡಿ ಉದ್ಯೋಗ ಕೊಡಲಾಗುತ್ತದೆ, ಕೂಲಿ ಹಣ ನೇರವಾಗಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡಿರುವ  ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದ ಅವರು ಇಂತಹ ಅವಕಾಶವನ್ನು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಬಳಸಿಕೊಂಡಾಗ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅವರು ತಿಳಿಸಿದರು.


ಇದೇ ಸಂದರ್ಭದಲ್ಲಿ ಕಾಳೆಬೆಳಗುಂದಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೇತನ್, ತಾಂತ್ರಿಕ  ಸಹಾಯಕರಾದ ನಿಂಗಪ್ಪ (ಟಿಎಇ), ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಪರಶುರಾಮ, ಬಳಿಚಕ್ರ ಪಂಚಾಯತಿಯ ಡಿಇಒ ಸೋಮು, ಕಾರ್ಯದರ್ಶಿ ಪ್ರಭು, ಟಿಐಇಸಿ ಬಸಪ್ಪ, ಕಾಯಕ ಬಂಧುಗಳು ಸೇರಿದಂತೆ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...