ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
ಯಾದಗಿರಿ,ಜ 15 (ಕ.ವಾ);- ಕೋವಿಡ್-19 ಹಿನ್ನೆಲೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ಅವರು ಶಿವಯೋಗಿ ಸಿದ್ದರಾಮೇಶ್ವರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ ಹಾಗೂ ಸಮಾಜದ ಮುಖಂಡರಾದ ನಾಗಪ್ಪ ಬೆನಕಲ್, ಶರಣಪ್ಪ ಸಾತೂರಕರ, ಹಣಮಂತ, ಜಯಪ್ರಕಾಶ್, ಹಳ್ಳೆಪ್ಪ ಧೋತ್ರೆ, ಬಾಲಪ್ಪ ಮಂಜಲಕರ್, ಅಂಜಪ್ಪ ಯತ್ತರಕರ್, ಮಲ್ಲಿಕಾರ್ಜುನ ಚಿನ್ನಾಕಾರ್, ಲಘಮಣ್ಣ ಮುಂಡರಗಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ