ಗುರುವಾರ, ಜನವರಿ 21, 2021

 25 ರಂದು ಎನ್‌ಟಿಎಸ್‌ಇ/ ಎನ್‌ಎಮ್‌ಎಮ್‌ಎಸ್ ಪರೀಕ್ಷೆ

ಯಾದಗಿರಿ.ಜ.21 (ಕ.ವಾ):- ಕೆ.ಎಸ್.ಕ್ಯೂ.ಎ.ಎ.ಸಿ ರವರ ವತಿಯಿಂದ 2020-21 ರಲ್ಲಿ ನಡೆಯುವ ಎನ್‌ಟಿಎಸ್‌ಇ/ ಎನ್‌ಎಮ್‌ಎಮ್‌ಎಸ್ ಪರೀಕ್ಷೆಗಳು ಜ.25 ರಂದು ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಾದ ಯಾದಗಿರಿ,ಶಹಾಪುರ,ಸುರಪುರದಲ್ಲಿ ನಡೆಯಲಿದೆ.
ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಪೊಲೀಸ್ ಬಂದೋಬಸ್ತ್ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ.ಹೆಚ್.ಡಿ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ
ಯಾದಗಿರಿ.ಜ.21 (ಕ.ವಾ):- 2020-21 ನೇ ಸಾಲಿನ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕೆ ಅರ್ಹ ವ್ಯಕ್ತಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಜ್ಞಾನ ಮತ್ತು ಇಂಜಿನಿಯರಿAಗ್ ವಿಷಯಗಳಲ್ಲಿ ಕರ್ನಾಟಕದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆ/ಕಾಲೇಜುಗಳಲ್ಲಿ ಪಿ.ಹೆಚ್.ಡಿ ಪದವಿಗೆ ಈಗಾಗಲೇ ನೊಂದಾಯಿತರಾಗಿರುವ ಸಂಶೋಧನಾ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಫೆ.10ರ ರೊಳಗೆ ಸಲ್ಲಿಸಬೇಕು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪೋತ್ಸಾಹಕ ಸೊಸೈಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...