ಜ.20, 21 ರಂದು ಜಿಲ್ಲೆಗೆ ಬಾಬುರಾವ ಚಿಂಚನಸೂರ
ಯಾದಗಿರಿ.ಜ.19 (ಕ.ವಾ):- ಮಾಜಿ ಸಚಿವರು ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಅಧ್ಯಕ್ಷರಾದ ಬಾಬುರಾವ ಚಿಂಚನಸೂರ ಅವರು ಜನವರಿ 20 ಹಾಗೂ 21 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅವರ ಪ್ರವಾಸ ವಿವರ ಇಂತಿದೆ.
ಅವರು ಜ.20 ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಯಿಂದ ನಿರ್ಗಮಿಸಿ 10;30 ಗಂಟೆಗೆ ಯಾದಗಿರಿಗೆ ಆಗಮಿಸುವವರು. ಅವರು ನಿಜಶರಣ ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಸಭೆ, ಸಮಾರಂಭದಲ್ಲಿ ಭಾಗವಹಿಸಿ ಸಂಜೆ 04 ಕ್ಕೆ ಯಾದಗಿರಿ ನಗರ ದಿಂದ ನಿರ್ಗಮಿಸುವವರು.
ಅವರು ಜ.21 ರ ಗುರುವಾರ ಬೆಳಿಗ್ಗೆ 08;30 ಗಂಟೆಗೆ ಕಲಬುರಗಿಯಿಂದ ನಿರ್ಗಮಿಸಿ 10 ಗಂಟೆಗೆ ಯಾದಗಿರಿಗೆ ಆಗಮಿಸುವವರು. ಅವರು ನಿಜಶರಣ ಅಂಬಿಗರ ಚೌಡಯ್ಯನವರ 901 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 06 ಕ್ಕೆ ಯಾದಗಿರಿ ನಗರ ದಿಂದ ನಿರ್ಗಮಿಸುವವರು ಎಂದು ನಿಗಮದ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ