ಮಹಾಯೋಗಿ ವೇಮನ ಜಯಂತಿ ಆಚರಣೆ
ಯಾದಗಿರಿ.ಜ.19 (ಕ.ವಾ):- ಕೋವಿಡ್-19 ಹಿನ್ನೆಲೆಯಲ್ಲಿ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಅಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ಅವರು ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೋಟ್ರೇಶ ಹಾಗೂ ಸಮಾಜದ ಮುಖಂಡರಾದ ಮಹೇಶ ರೆಡ್ಡಿಗೌಡ ಮುದ್ನಾಳ, ಬsಸ್ಸುಗೌಡ ಬಿಳಾರ, ಲಿಂಗಾರೆಡ್ಡಿ ಎಡ್ಡೇಳ್ಳಿ ವಿಶ್ವನಾಥ ರೆಡ್ಡಿ ಕೊಳ್ಳೂರ, ಮಲ್ಲಿಕಾರ್ಜುನ ರೆಡ್ಡಿ, ಶರಣಗೌಡ ಎಡ್ಡೇಳ್ಳಿ, ಶಶಿಧರ ರೆಡ್ಡಿ, ಶಿವಣ್ಣಗೌಡ ಗೋಳಬಾಳ, ಷಣ್ಮುಖ ರೆಡ್ಡಿ, ಶಿವುಗೌಡ ಬಂದಳ್ಳಿ, ರಮೇಶ ದೊಡ್ಡಮನಿ, ರಾಜುಗೌಡ ಹುಳಸೂಗೂರ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ