ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕುರಿತು ಕಾರ್ಯಾಗಾರ
ಕ್ಷಯರೋಗಕ್ಕೆ 6 ತಿಂಗಳ ಚಿಕಿತ್ಸಾ ವಿಧಾನ ಪೂರ್ಣಗೊಳಿಸಿದರೆ ಸಂಪೂರ್ಣ ಗುಣಮುಖ
ಯಾದಗಿರಿ,ಮಾ 05 (ಕ.ವಾ):- ಕ್ಷಯರೋಗಕ್ಕೆ 6ತಿಂಗಳ ಚಿಕಿತ್ಸಾ ವಿಧಾನ ಪೂರ್ಣಗೊಳಿಸಿದರೆ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಲಕ್ಷಿö್ಮÃಕಾಂತ ಅವರು ತಿಳಿಸಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾದಗಿರಿ ಇವರ ಸಹಯೋಗದಲ್ಲಿ ಗುರುವಾರ ನಡೆದ ಖಾಸಗಿ ಔಷಧ ವಿತರಕರಿಗೆ ಕ್ಷಯರೋಗ ಕುರಿತು ಮಾತ್ರೆಗಳನ್ನು ವಿತರಿಸುವ, ರಾಷ್ಟಿçÃಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಬ್ಬ ಕ್ಷಯರೋಗಿಯು ಸಂಪೂರ್ಣವಾಗಿ ಗುಣಮುಖರಾಗಲು ನಿರಂತರ 6 ತಿಂಗಳು ಚಿಕಿತ್ಸೆ ಪಡೆದುಕೊಳ್ಳಬೇಕು, ಕ್ಷಯರೋಗವು ಒಂದು ಸಾಂಕ್ರಾಮಿಕ ರೋಗವಾಗಿರುವದರಿಂದ ಇದರ ಬಗ್ಗೆ ಎಲ್ಲರೂ ಜಾಗೃತರಾಗಿ ಕಾಳಜಿಯನ್ನು ವಹಿಸಬೇಕು ಎಂದು ಹೇಳಿದರು.
ಕ್ಷಯರೋಗಕ್ಕೆ ಸಂಬAಧಪಟ್ಟAತೆ ಬಹಳಷ್ಟು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪೆಡೆಯುತ್ತಿದ್ದು, ಅವರು ಖಾಸಗಿ ಔಷಧಿ ಅಂಗಡಿಗಳ ಮಾತ್ರೆಗಳನ್ನು ತೆಗೆದುಕೊಳ್ಳುವವರ ಮಾಹಿತಿ ಸಂಗ್ರಹಣೆ ಮಾಡಿಕೊಂಡು ಪ್ರತಿ ತಿಂಗಳು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಘಟಕಕ್ಕೆ ನೀಡಬೇಕೆಂದು ವಿತರಕರಿಗೆ ತಿಳಿಸಿದರು.
ಒಬ್ಬ ಕ್ಷಯರೋಗಿಯನ್ನು ಕಂಡು ಹಿಡಿದು ಮಾಹಿತಿ ನೀಡಿದರೆ ಅಂತಹವರಿಗೆ ಸರ್ಕಾರದಿಂದ 500 ರೂ. ಮತ್ತು ಕ್ಷಯರೋಗಿಗೆ 6 ತಿಂಗಳ ಚಿಕಿತ್ಸೆ ನೀಡಿರುವಂತಹ ವ್ಯಕ್ತಿಗೆ 1000 ರೂ. ಸಹಾಯಧನವನ್ನು ನಿಕ್ಷಯ ಪೋಷಣ ಯೋಜನೆಯಡಿ ನೀಡಲಾಗುವುದು ಎಂದು ಅವರು ಘೋಷಿಸಿದರು.
ಕಾರ್ಯಾಗಾರವನ್ನು ಸಹಾಯಕ ಔಷಧ ನಿಯಂತ್ರಣಾಧಿಕಾರಿ ಪುಷ್ಪಪ್ರಿಯಾ ಉದ್ಘಾಟಿಸಿದರು, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಭಗವಂತ ಅನ್ವಾರ ಸೇರಿದಂತೆ ಇತರರು ಇದ್ದರು.
ಮೊಬೈಲ್ ಮೂಲಕ ಗುರುತಿನ ಚೀಟಿ ಡೋನ್‌ಲೋಡ್ ಮಾಡಿಕೊಳ್ಳಲು ಅವಕಾಶ
ಯಾದಗಿರಿ,ಮಾ 05 (ಕ.ವಾ):- ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (2020ರ ನವೆಂಬರ್ 18 ರಿಂದ ಡಿಸೆಂಬರ್ 17ರವರೆಗೆ) ಸಂದರ್ಭದಲ್ಲಿ ಹೊಸದಾಗಿ ಮತದಾರರ ಯಾದಿಯಲ್ಲಿ ನೋಂದಣಿಯಾದ 18-19 ವರ್ಷದ ಯುವ ಮತದಾರರಿಗೆ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಂಡ್ರಾಯ್ಡ್ ಮೊಬೈಲ್ (ಂಟಿಜಡಿoiಜ ಒobiಟe) ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತದಾರರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೇ ತಿತಿತಿ.ಟಿvsಠಿ.iಟಿ ಸಹ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡುವ ಕುರಿತು ತಮ್ಮ ಮತಗಟ್ಟೆ ವ್ಯಾಪ್ತಿಯ ಯುವ ಮತದಾರರಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಃಐಔ) ಇದೇ ಮಾರ್ಚ್ 6 ಹಾಗೂ 7 ರಂದು ಎಲ್ಲಾ ಮತಗಟ್ಟೆಗಳಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸಾಲ ಮರುಪಾವತಿಗೆ ಸೂಚನೆ
ಯಾದಗಿರಿ,ಮಾ 05 (ಕ.ವಾ):- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಎನ್.ಎಮ್.ಡಿ.ಎಫ್.ಸಿ ನೇರಸಾಲ, ಶ್ರಮಶಕ್ತಿ, ಸ್ವಾವಲಂಬನಾ, ಪಶುಸಂಗೋಪನೆ, ಮಹಿಳಾ ಸ್ವ-ಸಹಾಯ ಸಂಘಗಳು, ಭೂ-ಖರೀದಿ ಯೋಜನೆ ಹಾಗೂ ಅರಿವು ವಿದ್ಯಾಭ್ಯಾಸ ಸಾಲದ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಇದೇ ಮಾರ್ಚ್ 31ರೊಳಗಾಗಿ ಮರುಪಾವತಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 4 ರಿಂದ 31ರ ವರೆಗೆ ಸಾಲ ವಸೂಲಾತಿ/ಮರುಪಾವತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಯೋಜನಗಳಡಿಯಲ್ಲಿ ಸಾಲ ಪಡೆದ ಪಲಾನುಭವಿಗಳು ತಮ್ಮ ಸಾಲದ ಬಾಕಿ ಮೊತ್ತವನ್ನು ಜಿಲ್ಲಾ ಕಚೇರಿಯಲ್ಲಿ ಮರುಪಾವತಿಸಿ ಸಾಲ ವಸೂಲಾತಿ ಅಧಿಕಾರಿಗಳಿಂದ ರಸೀದಿಯನ್ನು ಪಡೆದುಕೊಳ್ಳಲು ಸೂಚಿಸಿದ್ದಾರೆ.
ಬಸ್ ಪಾಸ್ ಪಡೆಯಲು ಮಾರ್ಚ್ 31 ಕಡೆಯ ದಿನ
ಯಾದಗಿರಿ,ಮಾ 05 (ಕ.ವಾ):-2021 ಸಾಲಿನಲ್ಲಿ ವಿದ್ಯಾರ್ಥಿ ಉಚಿತ ರಿಯಾಯಿತಿ ಬಸ್ ಪಾಸ್ ಪಡೆದುಕೊಳ್ಳವ ವಿದ್ಯಾರ್ಥಿಗಳು ಇದೇ ಮಾರ್ಚ್ 31ರಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಖುದ್ದಾಗಿ ಆನ್‌ಲೈನನಲ್ಲಿ ಸರ್ಕಾರ ನಿಗದಿಪಡಿಸಿರುವ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಉಚಿತ ರಿಯಾಯಿತಿ ಬಸ್ ಪಾಸ್ ಪಡೆದುಕೊಳ್ಳುವ ವಿದ್ಯಾರ್ಥಿಗಳು ಆನ್‌ಲೈನ್ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ 07 ದಿನಗಳೊಳಗಾಗಿ ಸಂಬAಧಪಟ್ಟ ಬಸ್ ನಿಲ್ದಾಣದ ಪಾಸ್ ಕೌಂಟರನಲ್ಲಿ ಖುದ್ದು ಹಾಜರಾಗಿ ಬಸ್ ಪಾಸ್‌ನ್ನು ಪಡೆದುಕೊಳ್ಳಬೇಕು. ಒಂದು ವೇಳೆ ಸೇವಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ 07 ದಿನಗಳೊಳಗಾಗಿ ಬಸ್ ನಿಲ್ದಾಣದ ಪಾಸ್ ಕೌಂಟರನಲ್ಲಿ ಸಲ್ಲಿಸದ್ದಿದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದೆಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ. ಶ್ರೀಹರಿಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ
ಯಾದಗಿರಿ ಮಾ.05(ಕ.ವಾ): ಪಶುಸಂಗೋಪನೆ,ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ಅಧ್ಯಕ್ಷತೆಯಲ್ಲಿ ಇದೇ ಮಾರ್ಚ್ 6ರಂದು ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆ(ಕೆಡಿಪಿ) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಸಂಬAಧಿಸಿದ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ