ಖಾಲಿಯಿರುವ ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಮಾ 29 ಕ್ಕೆ ಉಪ ಚುನಾವಣೆ
ಯಾದಗಿರಿ,ಮಾ15(ಕ.ವಾ):- ಯಾದಗಿರಿ ಜಿಲ್ಲೆಯ ಶಹಾಪೂರ ಹಾಗೂ ಹುಣಸಗಿ ತಾಲೂಕುಗಳಲ್ಲಿನ ವಿವಿಧ ಕಾರಣಗಳಿಂದ ಖಾಲಿಯಿರುವ ಗ್ರಾಮ ಪಂಚಾಯತಿ ಕ್ಷೇತ್ರಗಳಿಗೆ ಮಾರ್ಚ್ 29 ಕ್ಕೆ ಉಪ ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದ್ದಾರೆ.
ಶಹಾಪೂರ ತಾಲೂಕಿನ 7-ಮುಡಬೂಳ ಗ್ರಾಮ ಪಂಚಾಯಿತಿಯ 4-ಮುಡಬೂಳ ಕ್ಷೇತ್ರ ಮತ್ತು 10-ಗೋಗಿಪೇಠ ಗ್ರಾಮ ಪಂಚಾಯಿತಿಯ 1ರಿಂದ7 ಕ್ಷೇತ್ರಗಳು ಹಾಗೂ ಹುಣಸಗಿ ತಾಲ್ಲೂಕಿನ 3-ಗೆದ್ದಲಮರಿ ಗ್ರಾಮ ಪಂಚಾಯಿತಿಯ 6-ಧರ್ಮಾಪುರ ಕ್ಷೇತ್ರಗಳಲ್ಲಿ ಚುನಾವಣೆಯನ್ನು ನಡೆಸಲಾಗುವುದು. ಚುನಾವಣಾ ನೀತಿ ಸಂಹಿತೆಯು ಮಾರ್ಚ್ 15 ರಿಂದ 31 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಮಾರ್ಚ್ 19 ಕೊನೆಯ ದಿನವಾಗಿದೆ, ನಾಮಪತ್ರಗಳನ್ನು ಮಾರ್ಚ್ 20 ರಂದು ಪರಿಶೀಲಿಸಲಾಗುವುದು. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಮಾರ್ಚ್ 22 ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ಮಾರ್ಚ್ 29 ರಂದು ಬೆಳಿಗ್ಗೆ 7 ಗಂಟೆಯಿAದ ಸಾಯಂಕಾಲ 5 ಗಂಟೆವರೆಗೆ, ಮರು ಮತದಾನ ಇದ್ದಲ್ಲಿ ಮತದಾನ ನಡೆಸಲು ಮಾರ್ಚ್ 30 ರಂದು ಬೆಳಿಗ್ಗೆ 7ಗಂಟೆಯಿAದ ಸಾಯಂಕಾಲ 5 ಗಂಟೆವರೆಗೆ, ಮತಗಳ ಎಣಿಕೆಯು ಮಾರ್ಚ್ 31 ರ ಬೆಳಿಗ್ಗೆ 8 ಗಂಟೆಯಿAದ ಪ್ರಾರಂಭ (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)ವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ