ರಾಷ್ಟಿçÃಯ ಪೋಷಣ್ ಪಕ್ವಾಡ ಯೋಜನೆಯ ಸವಲತ್ತು ಸದುಪಯೋಗಪಡಿಸಿಕೊಳ್ಳಿರಿ
: ಜಿ.ಪಂ. ಸಿಇಓ ಶಿಲ್ಪಾ ಶರ್ಮಾ
ಯಾದಗಿರಿ ಮಾ,23 (ಕ:ವಾ):- ಮಹಿಳೆಯರು ಮತ್ತು ಮಕ್ಕಳು ರಾಷ್ಟಿçÃಯ ಪೋಷಣ್ ಪಕ್ವಾಡ ಯೋಜನೆಯಡಿ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಕರೆ ನೀಡಿದರು.
ನಗರದ ಜಿಲ್ಲಾ ಬಾಲಭವನ ಸೊಸೈಟಿಯಲ್ಲಿ ಇಂದು ರಾಷ್ಟಿçÃಯ ಪೋಷಣ್ ಅಭಿಯಾನ ಯೋಜನೆಯಡಿ 2020-21 ನೇ ಸಾಲಿನ ಜಿಲ್ಲಾ ಮಟ್ಟದ ಪೋಷಣ್ ಪಕ್ವಾಡ ಯೋಜನಾ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆ ಮತ್ತು ಮಕ್ಕಳಿಗೆ ಪೌಷ್ಠ್ಠಿಕಾಂಶ ಆಹಾರ ಮತ್ತು ಹಸಿರು ತರಕಾರಿ ಸೇವನೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅನಾರೋಗ್ಯಗಳಿಗೆ ಈಡುಮಾಡದೆ, ರಕ್ತಹೀನತೆಯನ್ನು ತಡೆಗಟ್ಟಬೇಕು. ಗರ್ಭಿಣಿಯರಿಗೆ ಮಾತ್ರೆಗಳನ್ನು ಕೊಡಬೇಕು ಎಂದು ಅವರು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಭಗವಂತ ಅನ್ವರ್ ಅವರು ಮಾತನಾಡಿ, ಕಬ್ಬಿಣ ಅಂಶವಿರುವ ಮತ್ತು ಪ್ರೋಟಿನ್, ವಿಟಾಮಿನ್ ಸಹಿತವಿರುವ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಹಸಿರು ತರಕಾರಿ ಸೇವಿಸುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ವಸ್ಥವಾಗಿರುತ್ತದೆ ಎಂದು ಅವರು ಹೇಳಿದರು.
ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ಉಚಿತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ನೈರ್ಮಲ್ಯತೆಯನ್ನು ಕಾಪಾಡಿ ಆರೋಗ್ಯದಿಂದ ಇರಬೇಕು ಎಂದು ಸಲಹೆ ನೀಡಿದರು.
ಆಯುಷ್ ಜಿಲ್ಲಾಧಿಕಾರಿಯಾದ ಡಾ: ವಂದನಾ ಗಾಳಿ, ಮಹಿಳಾ ಮತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಪ್ರಭಾಕರ್ ಕವಿತಾಳ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ರಾಧ ಜಿ ಮಣ್ಣೂರ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕರಾದ ಯಲ್ಲಪ್ಪ ಕೆ., ವೈದ್ಯಾಧಿಕಾರಿಗಳಾದ ವಿನುತಾ, ಯೋಗಾ ಗುರೂಜಿ ಅನಿಲ್ ಗುರೂಜಿ ಮತ್ತಿತರರು ಕಾರ್ಯಾಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ