ಸೋಮವಾರ, ಮಾರ್ಚ್ 8, 2021



ಚಂದನ ವಾಹಿನಿಯಲ್ಲಿ ಸರಕಾರದ ವಿವಿಧ ಕಾರ್ಯಕ್ರಮಗಳ ಪ್ರಸಾರ

ಯಾದಗಿರಿ,ಮಾ8 (ಕ.ವಾ):- ಸಮಾಜ ಕಲ್ಯಾಣ ಇಲಾಖೆ ಮತ್ತು ಅಭಿವೃದ್ಧಿ ನಿಗಮಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗಗಳ ಸಮಗ್ರ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕುರಿತು ಕಾರ್ಯಕ್ರಮಗಳ ದೂರದರ್ಶನ ಚಂದನವಾಹಿನಿಯಲ್ಲಿ ಮಾರ್ಚ್ 8 ರಿಂದ ಆರಂಭವಾಗಲಿದ್ದು,  ಸಂಜೆ 7.30 ರಿಂದ 8.30 ವರೆಗೆ ಪ್ರತಿ ಸೋಮವಾರ ದಿಂದ ಗುರುವಾರದ ವರೆಗೆ ಪ್ರಸಾರವಾಗಲಿದೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದು. ಸಮಾಜ ಕಲ್ಯಾಣ ಇಲಾಖೆಯ ನಿಗಮಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ನಡೆಸಿಕೊಡಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ನಾಳೆ ವಾಲ್ಮೀಕಿ ಮುಖಂಡರ ಸಭೆ

ಯಾದಗಿರಿ,ಮಾ8 (ಕ.ವಾ):- ಜಿಲ್ಲಾ  ಮಟ್ಟದ ವಾಲ್ಮೀಕಿ ಭವನ ನಿರ್ವಹಣೆಗೆ ಮತ್ತು ಜಿಲ್ಲಾ ಮಟ್ಟದ ನಾಮನಿರ್ದೇಶಿತ ಸದಸ್ಯರ ಆಯ್ಕೆಗಾಗಿ ಇದೇ ಮಾರ್ಚ್ ರಂದು 9 ರಂದು ಬೆಳ್ಳಿಗೆ: 10.30 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ಕರೆಯಲಾಗಿದ್ದು ವಾಲ್ಮೀಕಿ ಸಮಾಜ ಮತ್ತು ಸಂಘಟನೆಯ ಮುಖಂಡರು ಜಿಲ್ಲಾ ಮಟ್ಟದ ಸಭೆಗೆ ಹಾಜರಾಗಲು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಭು ದೊರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...