ಶುಕ್ರವಾರ, ಮಾರ್ಚ್ 26, 2021

 ಅಂಗವಿಕಲರಿಗೆ 31 ಯಂತ್ರ ಚಾಲಿತ ತ್ರಿಚಕ್ರ ವಾಹನ ವಿತರಣೆ

  

ಯಾದಗಿರಿ,ಮಾ.26 (ಕ.ವಾ);-ಜಿಲ್ಲಾ ಪಂಚಾಯತ್ ಮೀಸಲಿಟ್ಟ 36 ಲಕ್ಷ ರೂ ಅನುದಾನದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ವತಿಯಿಂದ ಅಂಗವಿಕಲರಿಗೆ 31 ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ಜಿ.ಪಂ ಅಧ್ಯಕ್ಷ ಬಸನಗೌಡ ಯಡಿಯಾಪೂರ ಅವರು ಶುಕ್ರವಾರ ವಿತರಿಸಿದರು. ಈ ಸಂದರ್ಭದಲ್ಲಿ ಜಿ.ಪಂ  ಉಪಾಧ್ಯಕ್ಷೆ ಗಿರಿಜಮ್ಮಗೌಡ ರೋಟ್ನಡಗಿ, ಸದಸ್ಯರಾದ ರಾಜಶೇಖರಗೌಡ ಪಾಟೀಲ ವಜ್ಜಲ್, ಚಂದ್ರಕಲಾ ಹೊಸಮನಿ,ಶಶಿಕಲಾ ಪಾಟೀಲ್, ಜಿ.ಪಂ ಸಿಇಒ ಶಿಲ್ಪಾ ಶರ್ಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸೇರಿದಂತೆ ಇನ್ನಿತರರಿದ್ದರು. (ಚಿತ್ರ ಶೀರ್ಷಿಕೆ)


ಟೆಲಿವಿಷನ್ ಜರ್ನಲಿಸಂ ಹಾಗೂ ಕ್ಯಾಮರಾಮೆನ್ ತರಬೇತಿಗೆ ಅರ್ಜಿ ಆಹ್ವಾನ   

                                                        

ಯಾದಗಿರಿ,ಮಾ.26 (ಕ.ವಾ);- ಡಾ. ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿಗೆ ವಿಶೇಷ ಕೇಂದ್ರೀಯ ನೆರವಿನಿಂದ ಕೌಶಲ್ಯ ಟೆಲಿವಿಷನ್ ಜರ್ನಲಿಸಂ ಹಾಗೂ ಕ್ಯಾಮರಾಮೆನ್ ತರಬೇತಿ ನೀಡಲು ಜಿಲ್ಲೆಯ ಪರಿಶಿಷ್ಟ ಜಾತಿಯ ವಿದ್ಯಾವಂತ ನಿರುದ್ಯೋಗಿ ಯುವತಿ-ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. 

ಮೆ. ಅನನ್ಯ ಕ್ರಿಯೇಷನ್ ಮಂಡ್ಯ ಜಿಲ್ಲೆಯಲ್ಲಿ 3 ತಿಂಗಳ ಅವಧಿಗೆ ತರಬೇತಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ  ದಾಖಲೆಗಳೊಂದಿಗೆ ಕಲಬುರಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಇದೇ ಮಾರ್ಚ್ 31 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಯಾದಗಿರಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

 


  





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...