ವಿಶ್ವ ಗ್ಲಾಕೋಮಾ ಸಪ್ತಾಹ
ದೃಷ್ಠಿ ಬಗ್ಗೆ ಕಾಳಜಿ ವಹಿಸಲು ಡಾ.ಇಂದುಮತಿ ಸಲಹೆ
ಯಾದಗಿರಿ,ಮಾ8 (ಕ.ವಾ):- ಜಗತ್ತು ಪ್ರಕಾಶಿಸುತ್ತಿದೆ ಅದನ್ನು ನೋಡುವ ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸಿವುದು ಅತಿ ಮಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಸಲಹೆ ನೀಡಿದರು.
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ವಿಭಾಗ) ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಸೋಮವಾರ ನಡೆದ ರಾಷ್ಟಿçÃಯ ಅಂಧತ್ವ ಕಾರ್ಯಕ್ರಮದಡಿಯಲ್ಲಿ ಮಾರ್ಚ್ 7 ರಿಂದ 13 ರವರೆಗೆ ನಡೆಯುತ್ತಿರುವ ವಿಶ್ವ ಗ್ಲಾಕೋಮಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಪ್ತಾಹದ ಘೋಷ ವಾಕ್ಯವಾದ ಜಗತ್ತು ಪ್ರಕಾಶಿಸುತ್ತಿದೆ ನಿಮ್ಮ ದೃಷ್ಟಿಯನ್ನು ಉಳಿಸಿ ಎಂಬAತೆ ನಡೆದುಕೊಳ್ಳಬೇಕಾದರೆ ಕಲಿಕೆ ಬಹಳ ಮುಖ್ಯ. ಕಣ್ಣು ನೋಡಲು ಅಷ್ಟೇ ಆದರೆ ನೋಡುವಂತೆ ಪ್ರೇರೆಪಿಸುವುದು ಬುದ್ಧಿ ಹಾಗಾಗಿ ಸಮಾಜದ ಪ್ರತಿಯೋಬ್ಬರು ಶಿಕ್ಷಿತರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಭಗವಂತ ಅನ್ವರ, ಅಂಧತ್ವ ನಿಯಂತ್ರಣಕ್ಕೆ ಸರಕಾರ ದೃಷ್ಠಿ ದಿನಾಚರಣೆ, ನೇತ್ರದಾನ ಕುರಿತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಗ್ಲಾಕೋಮಾ ಎಂಬುವುದು ನಮ್ಮ ಕಣ್ಣುಗಳನ್ನು ನಮ್ಮಗೆ ಗೊತ್ತಾಗದಂತೆ ಕದಿಯುತ್ತದೆ. ಇದಕ್ಕೆ ನಾವು ನಮ್ಮ ಕಣ್ಣಗಳ ಕುರಿತು ಸಂರಕ್ಷಸಿವುದು ಅತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಶಸ್ತçಚಿಕಿತ್ಸಕರು ಡಾ.ಬಸವಸ್ವಾಮಿ ಹಿರೇಮಠ, ರಘು ಮಮೋರಿಯಲ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ಅಪರ್ಣಾ ರಾಜೇಂದ್ರ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಲಕ್ಷಿö್ಮÃಕಾಂತ, ಜಿಲ್ಲಾ ಆರ್.ಸಿ.ಹೆಚ್‌ಅಧಿಕಾರಿ ಡಾ. ಸೂರ್ಯಪ್ರಕಾಶ.ಎಮ್.ಕಂದಕೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮುಬಷಿರ ಅಹ್ಮದ ಸಾಜೀದ, ಜಿಲ್ಲಾ ಆಸ್ಪತ್ರೆಯ ನೇತ್ರ ತಜ್ಞರಾದ ಡಾ.ರಾಧಿಕಾ ಬೂಬ್, ಯಾದಗಿರಿ ತಾಲ್ಲೂಕ ಆರೋಗ್ಯ ಅಧಿಕಾರಿ ಡಾ. ಹಣಮಂತ ರಡ್ಡಿ,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿ ಉಪನ್ಯಾಸಕರಾದ ರೆಹಿತಾ ಉನ್ನಿಸ್,ಅಶೋಕ ಮಡಿವಾಳ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ