ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ
ಯಾದಗಿರಿ, ಮಾ.03 (ಕ.ವಾ):- ಯಾದಗಿರಿ ನಗರದ ಚಾಮಾ ಲೇಔಟ್ ನಿವಾಸಿಯೊಬ್ಬರು ನಾಪತ್ತೆಯಾಗಿದ್ದಾರೆ.
ಮಹ್ಮದ್ ಶಕೀಬ್ ಅಹ್ಮದ್ ಎಂಬಾತನು 2021 ರ ಫೆಬ್ರವರಿ 28 ರಂದು ರಾತ್ರಿ ಪ್ರಾರ್ಥನೆಗೆ ಹೋಗಿ ಬರುತ್ತೇನೆ ಎಂದು ಹೋದವರು ಇನ್ನೂ ವಾಪಸ್ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿಯು ಶಕೀಬ್ ಅಹ್ಮದ್ 20 ವರ್ಷದವರಾಗಿದ್ದು, ಸಾದಾಗೆಂಪು ಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, 5 ಅಡಿ 4ಇಂಚು ಎತ್ತರವಾಗಿದ್ದಾರೆ.
ತಿಳಿ ನೀಲಿ ಕಪ್ಪು ಬಣ್ಣದ ಜರ್ಕಿನ್ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್‌ನ್ನು ಧರಿಸಿದ್ದು,. ಹಿಂದಿ,ಇAಗ್ಲೀಷ್ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈತನ ಸುಳಿವು ಸಿಕ್ಕಲ್ಲಿ ಯಾದಗಿರಿ ನಗರ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ