ಗುರುವಾರ, ಮಾರ್ಚ್ 25, 2021

 ಹೋಳಿ ಹಬ್ಬದಲ್ಲಿ ಸಂಭ್ರಮಾಚರಣೆ ಬೇಡ: ಸಚಿವ ಪ್ರಭು ಚವ್ಹಾಣ್ 

ಯಾದಗಿರಿ.ಮಾ.24.(ಕ.ವಾ)-: ಕೊರೊನಾ ಎರಡನೇ ಅಲೆಯಿಂದ ಜನ ಆತಂಕಕ್ಕೆ ಒಳಗಾಗಿದ್ದು, ಈ ವರ್ಷ ಹೋಳಿ ಹಬ್ಬದಲ್ಲಿ ಸಂಭ್ರಮಾಚರಣೆ ಬೇಡ ಎಂದು ಪಶು ಸಂಗೋಪನೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದ್ದಾರೆ.


ಹೋಳಿ ಹಬ್ಬದಲ್ಲಿ ಗುಂಪು ಸೇರಿ ಅತಿ ಹೆಚ್ಚು ಶಬ್ಧ ಮಾಡುವ ದ್ವನಿ ವರ್ಧಕಗಳನ್ನು ಬಳಸಿ ಸಂಭ್ರಮಿಸುವುದು ಬೇಡ. ಆರೋಗ್ಯ ಇದ್ದರೆ ಬದುಕಿನ ಬಣ್ಣ ಮತ್ತಷ್ಟು ಚೆಂದ. ನೂರಾರು ಜನ ಸೇರಿ ಸಂಭ್ರಮಾಚರಣೆ ಮಾಡದಿರಲು ಅವರು ಕೋರಿದ್ದಾರೆ. 

ಹೋಳಿ ದಹನಕ್ಕೆ ಗುಂಪು ಗುಂಪಾಗಿ ಸೇರಿ ಕೊರೊನಾ ಹಬ್ಬಲು ಅವಕಾಶ ನೀಡಬೇಡಿ. ಸಾಧ್ಯವಾದಷ್ಟು ದಟ್ಟಣೆ ಪ್ರದೇಶದಿಂದ ದೂರವಿದ್ದು, ಇತಿಮಿತಿಯಲ್ಲಿ ಬಣ್ಣದ ಹಬ್ಬವನ್ನು ಆಚರಿಸಿ ಎಂದು ಸಚಿವರು ಸಲಹೆ ನೀಡಿದ್ದಾರೆ. 


ಯಾದಗಿರಿ ಜಿಲ್ಲೆಯ ಜನತೆಗೆ ಕಳಕಳಿಯ ವಿನಂತಿ ಮಾಡಿದ ಸಚಿವರು, ಗುಂಪು ಸೇರುವುದು, ಮಾಸ್ಕ್ ಧರಿಸದೇ ಹೊರಗಡೆ ಓಡಾಡುವುದು ಬೇಡ ಎಂದಿದ್ದು, ನಿಮ್ಮ ಜೀವ ನಿಮ್ಮ ಕುಟುಂಬಕ್ಕೆ ಬಹುಮುಖ್ಯ. ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿ ಕೊರೊನಾ ಹಿಮ್ಮೆಟ್ಟಿಸುವಲ್ಲಿ ಜಿಲ್ಲಾಡಳಿತಕ್ಕೆ ಸಹಕರಿಸಿ ಎಂದು ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದೆ. ಆದರೆ ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸದಿದ್ದರೆ ಕೊರೊನಾ ಉಲ್ಬಣ ಆಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಸಚಿವರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ಏರುಗತಿಯಲ್ಲಿದ್ದ ಕೊರೊನಾ ನಿಯಂತ್ರಣ ತಪ್ಪಿ ಜನಜೀವನ ಅಸ್ತವ್ಯಸ್ತ ಆದ ನೆನಪು ಮಾಸುವ ಮುನ್ನವೇ ಮತ್ತೆ ಎರಡನೇ ಅಲೆ ಶರವೇಗದಲ್ಲಿ ಹಬ್ಬುತ್ತಿದೆ.


 ಮನವಿ : ಯಾದಗಿರಿ ಜಿಲ್ಲೆಯನ್ನು ಕೊರೊನಾ ಮುಕ್ತ ಮಾಡಲು ಎಲ್ಲರೂ ಪಣ ತೊಡೋಣ. ಸರ್ಕಾರ ಜಾರಿಗೊಳಿಸುವ ಎಲ್ಲಾ ನಿಯಮಗಳನ್ನು ಪಾಲಿಸಿ ಕೊರೊನಾ ಹರಡುವುದನ್ನು ತಡೆಗಟ್ಟೋಣ. ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಇಲ್ಲದೇ ಓಡಾಡಬೇಡಿ. ಮಾಸ್ಕ್ ಧರಿಸುವ ಬಗ್ಗೆ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ಸಾರ್ವಜನಿಕರಲ್ಲಿ ಸಚಿವರು ಮನವಿ ಮಾಡಿದ್ದಾರೆ 







 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...