ಬುಧವಾರ, ಮಾರ್ಚ್ 24, 2021

 ವಿಧಾನಸಭೆ ಉಪಚುನಾವಣೆ: ಮಾದರಿ ನೀತಿ ಸಂಹಿತೆ 

ಉಲ್ಲಂಘನೆಯಾಗದAತೆ ನೋಡಿಕೊಳ್ಳಲು ನೋಡಲ್ ಅಧಿಕಾರಿ ನೇಮಕ

ಯಾದಗಿರಿ.ಮಾ.24.(ಕ.ವಾ)-ರಾಯಚೂರು ಜಿಲ್ಲೆಯ ಮಸ್ಕಿ-59 (ಎಸ್.ಟಿ.) ಹಾಗೂ ಬೀದರ ಜಿಲ್ಲೆಯ ಬಸವಕಲ್ಯಾಣ-47 ವಿಧಾನಸಭೆಯ ಉಪ ಚುನಾವಣೆ ಸಂದರ್ಭದಲ್ಲಿ (ವಾಣಿಜ್ಯ ತೆರಿಗೆ ಇಲಾಖೆಗೆ ಸಂಬAಧಿಸಿದAತೆ) ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ನೋಡಿಕೊಳ್ಳಲು ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ (ಜಾರಿ) ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಕಲಬುರಗಿ ಪೂರ್ವ ವಲಯ (ಜಾರಿ) ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಗೆ ಸಂಬAಧಿಸಿದAತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬೀದರ-ರಾಯಚೂರ ಹಾಗೂ ನೆರೆಯ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ ಇವರ ಕಚೇರಿಯ ಸಮನ್ವಯದೊಂದಿಗೆ ಮಾಹಿತಿ ವಿನಿಮಯ ಹಾಗೂ ಮಾಹಿತಿ ಸಲ್ಲಿಕೆಗೆ ಸಂಬAಧಿಸಿದAತೆ ಮೇಲ್ಕಂಡ ಕಚೇರಿಯಲ್ಲಿ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ. 

ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆಗಳ ಉಪ ಆಯುಕ್ತ (ಜಾರಿ) ಲಕ್ಷಾಪತಿ ಎನ್.ನಾಯ್ಕ್ ಇವರನ್ನು (ಮೊಬೈಲ್ ಸಂಖ್ಯೆ 9448811330) ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಸರಕು ಸಾಗಾಣಿಕೆಗೆ ಮಾಡುವ ಕುರಿತು ಮಾಹಿತಿಯಿದ್ದಲ್ಲಿ ಸಾರ್ವಜನಿಕರು ನೋಡಲ್ ಅಧಿಕಾರಿಗಳು ಹಾಗೂ ನಿಯಂತ್ರಣಾ ಕೊಠಡಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. 

ನಿಯಂತ್ರಣಾ ಕೊಠಡಿ ವಿವರ ಇಂತಿದೆ: ಕಲಬುರಗಿ ಪ.ವ್ಯ. (ಜಾರಿ) ವಾಣಿಜ್ಯ ತೆರಿಗೆ ಅಧಿಕಾರಿ ಮಹೇಶ್ವರ ಸೋನಾರಕರ್ (ಮೊಬೈಲ್ ಸಂಖ್ಯೆ 9482150039) ಹಾಗೂ ವಾಣಿಜ್ಯ ತೆರಿಗೆ ಪರಿವೀಕ್ಷಕ ಅಶೋಕ ಕುಮಾರ ಅಡಿಕಿಕರ್ (ಮೊಬೈಲ್ ಸಂಖ್ಯೆ: 9448890946) ಇರುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...