ಸಶಸ್ತç ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ಫಲಿತಾಂಶ ಪ್ರಕಟ
ಯಾದಗಿರಿ, ಮಾರ್ಚ್ 20(ಕ.ವಾ): ಪರೀಕ್ಷೆಗೆ ಗೈರುಹಾಜರಾದ ಮತ್ತು ಅನರ್ಹರಾದ ಅಭ್ಯರ್ಥಿಗಳ ಬದಲಿಗೆ ಬೇರೊಬ್ಬ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ಸಶಸ್ತç ಪೊಲೀಸ್ ಕಾನ್ಸ್ ಟೇಬಲ್(ಪುರುಷ) (ಕೆಕೆ) ಹುದ್ದೆಗಳಿಗೆ ಸಂಬAಧಿಸಿದAತೆ 2ನೇ ಪರಿಷ್ಕೃತ ಅಂತಿಮ ಆಯ್ಕೆ ಪಟ್ಟಿಯನ್ನು ಯಾದಗಿರಿ ಜಿಲ್ಲಾ ಪೊಲೀಸ್ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಯಾದಗಿರಿ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 46 ಸಶಸ್ತç ಪೊಲೀಸ್ ಕಾನ್ಸ್ಟೇಬಲ್(ಪುರುಷ) (ಕೆಕೆ) ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅಧಿಸೂಚನೆಯನ್ವಯ ಪಿಎಸ್‌ಟಿ ಮತ್ತು ಇಟಿ ಪರೀಕ್ಷೆಗಳಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ಜಿಲ್ಲೆಯಲ್ಲಿ ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ತರಬೇತಿ ಕಾರ್ಯಾಗಾರ
ಯಾದಗಿರಿ ಮಾರ್ಚ್ 20(ಕ.ವಾ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯಾದಗಿರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯಾದಗಿರಿ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ, ಮಹಿಳಾ ಶಕ್ತಿ ಕೇಂದ್ರ ಯೋಜನೆಯಡಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಯಾದಗಿರಿ ಹಾಗೂ ಗುರುಮಠಕಲ್ ಇವರ ಸಂಯುಕ್ತಾಶ್ರಯದಲ್ಲಿ ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕಿನ 40 ಗ್ರಾಮ ಪಂಚಾಯತ್‌ಗಳ 412 ಜನ ಮಹಿಳಾ ಚುನಾಯಿತ ಪ್ರತಿನಿಧಿಗಳಿಗೆ “ಮಹಿಳಾ ಸಬಲೀಕರಣ ಹಾಗೂ ಲಿಂಗ ಸೂಕ್ಷö್ಮತೆ ಮತ್ತು ಲಿಂಗ ಸಮಾನತೆ ವಿಷಯ” ಕುರಿತು ತರಬೇತಿಯನ್ನು ಮಾರ್ಚ್ 22 ರಿಂದ 28ರ ವರೆಗೆ ಎನ್‌ವಿಎಂ ಟ್ರೆöÊನಿಂಗ್ ಹಾಲ್ (ರೆಸ್ಟೋರೆಂಟ್)ನ ಮೊದಲ ಮಹಡಿಯಲ್ಲಿ ಆಯೋಜಿಸಲಾಗಿರುತ್ತದೆ.
ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಉದ್ಘಾಟನೆ ಮಾಡುವುದರ ಮೂಲಕ ಈ ತರಬೇತಿ ಕಾರ್ಯಾಗಾರಕ್ಕೆ ಚಾಲನೆಯನ್ನು ನೀಡಲಿದ್ದಾರೆ.
ತರಬೇತಿಯನ್ನು 7 ತಂಡಗಳ ಮೂಲಕ ಹಮ್ಮಿಕೊಳ್ಳಲಾಗಿದ್ದು, ಆಯಾ ದಿನಾಂಕಗಳAದು ಸಂಬAಧಪಟ್ಟ ಗ್ರಾಮ ಪಂಚಾಯತಿಗಳ ಮಹಿಳಾ ಚುನಾಯಿತ ಪ್ರತಿನಿಧಿಗಳು ಆಗಮಿಸಿ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಯಾದಗಿರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಹಾಪುರ ತಾಲೂಕಿನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಯಾದಗಿರಿ ಮಾರ್ಚ್ 20(ಕ.ವಾ): ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿಯಲ್ಲಿ ಶಹಾಪುರ ತಾಲೂಕಿನಲ್ಲಿ ಖಾಲಿ ಇರುವ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರ ಹುದ್ದೆಯನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಅರ್ಜಿಯನ್ನು ಪಡೆದು ಎಮ್.ಆರ್.ಬ್ಲೂ ಗಳ ಮುಖಾಂತರವಾಗಿ ಏಪ್ರಿಲ್ 1 ರಂದು ಸಲ್ಲಿಸಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರಸಭೆ ನಿಧಿ ಅನುದಾನದ ಅಡಿಯಲ್ಲಿನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಯಾದಗಿರಿ ಮಾರ್ಚ್ 20 (ಕ.ವಾ): 2020-21ನೇ ಸಾಲಿನ ನಗರಸಭೆ ನಿಧಿ ಅನುದಾನ ಅಡಿಯಲ್ಲಿ 24.10%, 7.25%&5% ಯೋಜನೆಯ ವಿವಿಧ ಸೌಲಭ್ಯಗಳಿಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ದಿನಾಂಕ 20-3-21 ರಿಂದ ದಿನಾಂಕ 03-04-21 ರವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲವೆಂದು ಶಹಾಪುರ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಜಪೇಯಿ ನಗರ ನಿವೇಶನ ಯೋಜನೆಯಡಿ ವಸತಿ ನಿರ್ಮಾಣ
ಯಾದಗಿರಿ.ಮಾ20(ಕ.ವಾ): ವಾಜಪೇಯಿ ನಗರ ನಿವೇಶನ ಯೋಜನೆಯಡಿ ವಸತಿ ನಿರ್ಮಾಣಕ್ಕಾಗಿ ನಗರ ಪ್ರದೇಶದ 5 ಕಿ.ಮೀ ವ್ಯಾಪ್ತಿಯಲ್ಲಿ 25 ಎಕರೆ ಖಾಸಗಿ ಜಮೀನು ಬೇಕಿದ್ದು ಅಸಕ್ತರು ಪೂರಕ ದಾಖಲೆಗಳೊಂದಿಗೆ ಜಮೀನು ನೀಡಬೇಕೆಂದು ಯಾದಗಿರಿ ನಗರಸಭೆ ಪೌರಾಯುಕ್ತರಾದ ಭೀಮಣ್ಣ ಟಿ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಮತ್ತು ಪ್ರಧಾನ ಮಂತ್ರಿ ಆವಾಸ ಯೋಜನೆಗಳಡಿ ಯಾದಗಿರಿ ನಗರದ ವಸತಿ ಮತ್ತು ನಿವೇಶನ ರಹಿತರಿಗೆ ಜಿ+2 ಮಾದರಿಯಲ್ಲಿ (ಬಹುಮಹಡಿ ಮನೆಗಳು) ನಿರ್ಮಾಣಕ್ಕಾಗಿ ವಾಜಪೇಯಿ ನಗರ ನಿವೇಶನ ಯೋಜನೆಯಡಿ ನಗರ ಪ್ರದೇಶನದಿಂದ 5 ಕೀ.ಮೀ.ಅಂತರದಲ್ಲಿ ಸರ್ಕಾರಿ ಜಮೀನು ಲಭ್ಯವಿಲ್ಲದ ಪ್ರಯುಕ್ತ 25 ಎಕರೆ ಖಾಸಗಿ ಜಮೀನು ಬೇಕಾಗಿರುತ್ತದೆ. ಆಸಕ್ತಿಯಳ್ಳ ಜಮೀನು ಮಾಲಿಕರು ಏಪ್ರಿಲ್ 5ರ ಒಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಜಮೀನು ಖರೀದಿಯು ಸರ್ಕಾರದ ಮಾನದಂಡಗಳ ಮತ್ತು ಇತರ ಪೂರಕ ಅಂಶಗಳ ಆಧಾರದ ಮೇಲೆ ಜಮೀನು ದರವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ