ಮಂಗಳವಾರ, ಮಾರ್ಚ್ 23, 2021

 ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ದಿನ ವಿಸ್ತರಣೆ

ಯಾದಗಿರಿ, ಮಾ.23 (ಕ.ವಾ):-  2020-21ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ರಾಜ್ಯ ಸರಕಾರದ ಅಧಿಕಾರಿ/ನೌಕರರರಿಂದ  ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಏಪ್ರಿಲ್ 21 ರಂದು ನಾಗರೀಕ ಸೇವಾ ದಿನವನ್ನು ರಾಜ್ಯ ಸರಕಾರಿ ನೌಕರರ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಿರುವದರಿಂದ ಅದೇ ದಿನದಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಮಾರ್ಚ್ 31ರ ವರೆಗೆ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಅವರು ತಿಳಿಸಿದ್ದಾರೆ.


ತೋಟಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ 

ಯಾದಗಿರಿ, ಮಾ.23 (ಕ.ವಾ):-  2020-21ನೇ ಸಾಲಿಗಾಗಿ ಯಾದಗಿರಿ ಜಿಲ್ಲೆಯ ರೈತರ ಮಕ್ಕಳಿಗೆ ಪುರುಷ ಅಭ್ಯರ್ಥಿಗಳಿಗೆ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ತರಬೇತಿ ಕೇಂದ್ರದಲ್ಲಿ  ಮತ್ತು  ಮಹಿಳಾ ಅಭ್ಯರ್ಥಿಗಳಿಗೆ ಕೊಪ್ಪಳ ಜಿಲ್ಲೆಯ ಮುನಿರಬಾದ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.


ತರಬೇತಿ ಪ್ರವೇಶ ಬಯಸುವ ಅಭ್ಯರ್ಥಿಯ ತಂದೆ, ತಾಯಿ, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ  ಸ್ವಂತ ಸಾಗುವಳಿ   ಮಾಡುತ್ತಿರಬೇಕು. ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18 ರಿಂದ 33 ವರ್ಷ, ಇತರರಿಗೆ 18 ರಿಂದ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿಯನ್ನು ಇಲಾಖೆಯ ವೆಬ್‌ಸೈಟ್ hಣಣಠಿs://hoಡಿಣiಛಿuಟಣuಡಿeಜiಡಿ.ಞಚಿಡಿಟಿಚಿಣಚಿಞಚಿ.gov.iಟಿ ನ ಮೂಲಕ ಅರ್ಜಿ ನಮೂನೆಯನ್ನು ಪಡೆದು ಅಥವಾ ಯಾದಗಿರಿಯ ಎಲ್ಲಾ ತಾಲೂಕಿನ ತೋಟಗಾರಿಕೆ ಕಚೇರಿಯಲ್ಲಿ ಪಡೆದುಕೊಂಡು ಮಾರ್ಚ್ 24 ರಿಂದ ಏಪ್ರಿಲ್ 17 ರೊಳಗೆ ಅರ್ಜಿಯನ್ನು ಸಲ್ಲಿಸಬೇಕು. 


ಹೆಚ್ಚಿನ ಮಾಹಿತಿಗಾಗಿ ಇಲಾಖೆ ದೂ.08473-253747 ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





ಏಪ್ರಿಲ್ 1 ರಿಂದ ಪರಿಷ್ಕೃತ ಆಸ್ತಿ ತೆರಿಗೆ ಜಾರಿ

ಯಾದಗಿರಿ, ಮಾ.23 (ಕ.ವಾ):-  ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳಿಗೆ 2021-22ನೇ ಸಾಲಿಗೆ ಪರಿಷ್ಕೃತ ಆಸ್ತಿ ತೆರಿಗೆಯನ್ನ ಏಪ್ರಿಲ್ 1 ರಿಂದ ಜಾರಿಗೆ  ಬರುತ್ತದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಾಸ ಹಾಗೂ ವಾಣಿಜ್ಯೇತರ ಉಪಯೋಗದ ಕಟ್ಟಡಗಳಿಗೆ ಶೇಕಡ 0.8 ಪ್ರತಿಶತ, ವಾಣಿಜ್ಯ ಉಪಯೋಗದ ಕಟ್ಟಡಗಳಿಗೆ ಶೇಕಡ 2.5 ಪ್ರತಿಶತ ಹಾಗೂ ಖಾಲಿ ನಿವೇಶನಗಳಿಗೆ ಶೇಕಡ 0.2 ಪ್ರತಿಶತ ಆಸ್ತಿ ತೆರಿಗೆ ಇರಲಿದೆ ಎಂದು ಅವರು ತಿಳಿಸಿದ್ದಾರೆ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...