ಬುಧವಾರ, ನವೆಂಬರ್ 20, 2019

ನವೆಂಬರ್ ತಿಂಗಳ ಪಡಿತರ ಧಾನ್ಯ ಬಿಡುಗಡೆ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ನವೆಂಬರ್ ತಿಂಗಳ ಪಡಿತರ ಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆಯ ೨೬,೫೭೮ ಪಡಿತರ ಚೀಟಿಗಳಿಗೆ ತಲಾ ೩೫ ಕೆ.ಜಿ ಅಕ್ಕಿ, ೨,೨೯,೦೮೩ ಬಿಪಿಎಲ್ ಪಡಿತರ ಚೀಟಿಗಳ ೮,೧೧,೬೪೮ ಸದಸ್ಯರಿಗೆ ತಲಾ ೭ ಕೆ.ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ವಿತರಿಸಲು ಹಂಚಿಕೆ ನೀಡಲಾಗಿದೆ. ಪಡಿತರ ಚೀಟಿದಾರರು ತಮ್ಮ ಹಕ್ಕಿನಲ್ಲಿರುವ ಅಕ್ಕಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ತಪ್ಪದೇ ಪಡೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಜಿಲ್ಲೆಯ ೩೯೯ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಬೆರಳಚ್ಚನ್ನು/ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು (Point of Sale – POS Shop Module) ವ್ಯವಸ್ಥೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯನ್ವಯ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ಆಯಾ ತಾಲ್ಲೂಕಿನ ತಹಶೀಲ್ದಾರ್, ಜಿಲ್ಲೆಯ ಉಪ ನಿರ್ದೇಶಕರ ಕಚೇರಿ ಅಥವಾ ಸಹಾಯವಾಣಿ ೧೯೬೭ ಸಂಖ್ಯೆಗೆ ದೂರನ್ನು ದಾಖಲಿಸಬಹುದು. ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರು ಪಡಿತರ ಪಡೆಯುವ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊದಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಕಾನೂನು ಪದವಿಧರರಿಂದ ಅರ್ಜಿ ಆಹ್ವಾನ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾನೂನು ಪದವಿಧರರಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿಗೆ ಸಹಾಯ ಧನ ಮಂಜೂರಿಸಲು ಕಾನೂನು ಪದವಿಧರರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಕಾನೂನು ಪಧವಿಧರರು ಜಾತಿ ಪ್ರಮಾಣಪತ್ರ ಆರ್.ಡಿ ಸಂಖ್ಯೆಯನ್ನು ಹೊಂದಿರತಕ್ಕದ್ದು. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಕಾನೂನು ಪದವಿ ಪಡೆದಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ ೨ ಲಕ್ಷ ರೂ. ಮೀರಿರಬಾರದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ ೨೩ಕ್ಕೆ ೪೦ ವರ್ಷ ಮೀರಿರಬಾರದು. ಆಧಾರ್ ಕಾರ್ಡ್ ಹೊಂದಿರತಕ್ಕದ್ದು. ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ www.swd.kar.nic ಗೆ ಭೇಟಿ ನೀಡಿ Social Empowerment Schemes link lick ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ದೂ:೦೮೪೭೩-೨೫೩೭೪೧ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ ಹರಾಜು ಪ್ರಕ್ರಿಯೆ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ (ಅಮಲಾಪುರ) ಗ್ರಾಮದ ಶ್ರೀ ಬಲಭೀಮೇಶ್ವರ ದೇವಸ್ಥಾನದ ಸ್ಥಳ ಹಾಗೂ ತೆಂಗಿನಕಾಯಿ ಮಾರಾಟ ಹರಾಜು ಪ್ರಕ್ರಿಯೆ ನವೆಂಬರ್ ೨೨ರಂದು ಬೆಳಿಗ್ಗೆ ೧೧ ಗಂಟೆಗೆ ಶಹಾಪುರ ತಹಸೀಲ್ ಕಾರ್ಯಾಲಯದಲ್ಲಿ ನಡೆಯಲಿದೆ.
ಹರಾಜಿನಲ್ಲಿ ಭಾಗವಹಿಸುವವರು ೨೫,೦೦೦ ರೂ. ಠೇವಣಿ ಇಟ್ಟು ಸರಿಯಾದ ಸಮಯಕ್ಕೆ ಹಾಜರಾಗಬೇಕು. ಹರಾಜಿನ ನಂತರ ೭ ದಿನಗಳ ಒಳಗಾಗಿ ಹರಾಜಿನ ಪೂರ್ತಿ ಹಣವನ್ನು ತುಂಬಬೇಕು. ತಪ್ಪಿದಲ್ಲಿ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ಪುನಃ ಹರಾಜು ನಡೆಸಲಾಗುವುದು ಎಂದು ದೇವಸ್ಥಾನದ ಕಾರ್ಯದರ್ಶಿಗಳೂ ಆದ ಶಹಾಪುರ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಕರ್ನಾಟಕ ನಾಟಕ ಅಕಾಡೆಮಿಯು ೨೦೧೮ನೇ ಸಾಲಿನಲ್ಲಿ ಪ್ರಕಟವಾಗಿರುವ ರಂಗಭೂಮಿಗೆ ಸಂಬಧಿಸಿದ ಕೃತಿಗಳಿಗೆ ಪುಸ್ತಕ ಬಹುಮಾನ ನೀಡಲು ಸ್ವವಿವರಗಳೊಂದಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೃತಿಗಳು ಜನವರಿ ೨೦೧೮ರಿಂದ ಡಿಸೆಂಬರ್ ೨೦೧೮ರೊಳಗೆ ಮುದ್ರಣವಾದ ಮೊದಲ ಪ್ರಕಟಣೆಯಾಗಿರಬೇಕು. ಲೇಖಕರು ತಮ್ಮ ಹೆಸರು, ವಿಳಾಸ, ಪ್ರಕಟಣೆಯ ವರ್ಷ ನೀಡಿ, ಪುಸ್ತಕದ ಐದು ಪ್ರತಿಗಳೊಂದಿಗೆ ರಿಜಿಸ್ಟಾರ್, ಕರ್ನಾಟಕ ನಾಟಕ ಅಕಾಡೆಮಿ, ಚಾಲುಕ್ಯ ವಿಭಾಗ, ಕನ್ನಡಭವನ ಜೆ.ಸಿ ರಸ್ತೆ ಬೆಂಗಳೂರು-೫೬೦೦೦೨ ಇವರಿಗೆ ಡಿಸೆಂಬರ್ ೧೫ರೊಳಗಾಗಿ ಸಲ್ಲಿಸಬೇಕು. ಷರತ್ತು ಮತ್ತು ಹೆಚ್ಚಿನ ಮಾಹಿತಿಗಾಗಿ ದೂ:೦೮೦-೨೨೨೩೭೪೮೪ ಅಥವಾ ಅಕಾಡೆಮಿಯ ವೆಬ್‌ಸೈಟ್: www.karnatakanatakaacademy.com ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್(ಎಸ್.ಎಸ್.ಪಿ) ನಲ್ಲಿ ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪ ಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಲಾಗಿದೆ.
ವಿದ್ಯಾರ್ಥಿ ವೇತನದ ವೆಬ್‌ಸೈಟ್ http://ssp.postmatric.karnataka.gov.in ನಲ್ಲಿ ಇ-ಅಟೆಸ್ಟೇಶನ್ ಮಾಡಿ ಖಾತೆ ಸೃಜಿಸಿ, ಅರ್ಜಿ ಸಲ್ಲಿಸಬೇಕು. ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (ಎನ್‌ಎಸ್‌ಪಿ)ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತರ ಸಮುದಾಯದ ಎಲ್ಲಾ ವಿದ್ಯಾರ್ಥಿಗಳು ಎಸ್.ಎಸ್.ಪಿಯಲ್ಲಿಯೂ ಸಹ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಸಾಮಾನ್ಯ ಪದವಿಯ ಎಲ್ಲಾ ಕೋರ್ಸ್ಗಳು, ಸ್ನಾತಕೋತ್ತರ ಪದವಿಯ ಎಲ್ಲಾ ಕೋರ್ಸ್ಗಳಲ್ಲಿ, ಇಂಜಿನಿಯರಿAಗ್ ಹಾಗೂ ವೈದ್ಯಕೀಯ ಶಿಕ್ಷಣದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇ- ಅಟೆಸ್ಟೇಶನ್ ಮಾಡುವುದು ಕಡ್ಡಾಯವಾಗಿರುತ್ತದೆ.
ಇ-ಅಟೆಸ್ಟೇಶನ್ ಮಾಡಿಸಿ ಅಲ್ಲಿ ಸಿಗುವ ಐಡಿ ಸಂಖ್ಯೆಯಿ0ದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಪಿಯುಸಿ, ಐಟಿಐ, ನರ್ಸಿಂಗ್ (ಜೆಎಎನ್‌ಎಮ್), ಪ್ಯಾರಾಮೆಡಿಕಲ್, ಡಿಪ್ಲೋಮಾ ಕೋರ್ಸ್ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇ-ಅಟೆಸ್ಟೇಶನ್ ಮಾಡುವ ಅಗತ್ಯ ಇರುವುದಿಲ್ಲ. ನೇರವಾಗಿ ತಮ್ಮ ಎಸ್‌ಎಟಿಎಸ್ ಐಡಿ ಸಂಖ್ಯೆಯಿ0ದ ನೇರವಾಗಿ ವಿದ್ಯಾರ್ಥಿವೇತನ ಖಾತೆ ಸೃಜಿಸಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್ www.gokdom.kar.nic.in ವಿದ್ಯಾರ್ಥಿ ವೇತನದ ವೆಬ್‌ಸೈಟ್ http://ssp.postmatric.karnataka.gov.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ದೂ:೦೮೪೭೩-೨೫೩೨೩೫ ಸಂಪರ್ಕಿಸುವ0ತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...