ಗುರುವಾರ, ನವೆಂಬರ್ 28, 2019

ಡಿ.೧ರಂದು ಪೊಲೀಸ್ ನೇಮಕಾತಿ ಪರೀಕ್ಷೆ
ಯಾದಗಿರಿ, ನವೆಂಬರ್ ೨೮ (ಕರ್ನಾಟಕ ವಾರ್ತೆ): ಸಶಸ್ತç ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಸಿಇಟಿ ಪರೀಕ್ಷೆ ಡಿಸೆಂಬರ್ ೧ರಂದು ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧೨.೩೦ ಗಂಟೆಯವರೆಗೆ ಯಾದಗಿರಿ ನಗರದ ವಿವಿಧ ಶಾಲಾ- ಕಾಲೇಜುಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ ಭಗವಾನ್ ಸೋನವಣೆ ಅವರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ವೆಬ್‌ಸೈಟ್‌ನಿಂದ ಕರೆಪತ್ರವನ್ನು ಪಡೆದುಕೊಳ್ಳಬೇಕು. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಪರೀಕ್ಷಾ ದಿನದಂದು ಕರೆಪತ್ರದೊಂದಿಗೆ ಪಾಸ್‌ಪೋರ್ಟ್, ಡ್ರೆöವಿಂಗ್ ಲೈಸೆನ್ಸ್, ಪ್ಯಾನ್‌ಕಾರ್ಡ್, ಸರ್ವಿಸ್ ಐಡಿಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಎಲೆಕ್ಷನ್ ಫೋಟೋ ಐಡಿ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿ ಪ್ರತಿಯನ್ನು ಸಹ ತಪ್ಪದೆ ತರಬೇಕು. ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಮುಂಚಿತವಾಗಿ ಹಾಜರಾಗಬೇಕು. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ನೋಟ್‌ಬುಕ್, ಮೊಬೈಲ್, ಕ್ಯಾಲುಕುಲೇಟರ್ ಹಾಗೂ ಪುಸ್ತಕಗಳನ್ನು ತೆಗೆದುಕೊಂಡು ಬರುವುದನ್ನು ನಿಷೇಧಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಯಾದಗಿರಿ, ನವೆಂಬರ್ ೨೮ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್(ಎಸ್.ಎಸ್.ಪಿ) ನಲ್ಲಿ ಪೋಸ್ಟ್ ಮೆಟ್ರಿಕ್ ಮತ್ತು ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ಅಲ್ಪ ಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ ೩೧ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅರ್ಜಿ ಸಲ್ಲಿಸಲು ನವೆಂಬರ್ ೩೦ ಕೊನೆಯ ದಿನವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದಿರುವ ಕಾರಣ ಅವಧಿ ವಿಸ್ತರಿಸಲಾಗಿದೆ. ವಿದ್ಯಾರ್ಥಿ ವೇತನದ ವೆಬ್‌ಸೈಟ್ http://ssp.postmatric.karnataka.gov.in ನಲ್ಲಿ ಇ-ಅಟೆಸ್ಟೇಶನ್ ಮಾಡಿ ಖಾತೆ ಸೃಜಿಸಿ, ಅರ್ಜಿ ಸಲ್ಲಿಸಬೇಕು. ನ್ಯಾಷನಲ್ ಸ್ಕಾಲರ್‌ಶಿಪ್ ಪೋರ್ಟಲ್ (ಎನ್‌ಎಸ್‌ಪಿ)ನಲ್ಲಿ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತರ ಸಮುದಾಯದ ಎಲ್ಲಾ ವಿದ್ಯಾರ್ಥಿಗಳು ಎಸ್.ಎಸ್.ಪಿಯಲ್ಲಿಯೂ ಸಹ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಸಾಮಾನ್ಯ ಪದವಿಯ ಎಲ್ಲಾ ಕೋರ್ಸ್ಗಳು, ಸ್ನಾತಕೋತ್ತರ ಪದವಿಯ ಎಲ್ಲಾ ಕೋರ್ಸ್ಗಳಲ್ಲಿ, ಇಂಜಿನಿಯರಿ0ಗ್ ಹಾಗೂ ವೈದ್ಯಕೀಯ ಶಿಕ್ಷಣದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇ- ಅಟೆಸ್ಟೇಶನ್ ಮಾಡುವುದು ಕಡ್ಡಾಯವಾಗಿರುತ್ತದೆ.
ಇ-ಅಟೆಸ್ಟೇಶನ್ ಮಾಡಿಸಿ ಅಲ್ಲಿ ಸಿಗುವ ಐಡಿ ಸಂಖ್ಯೆಯಿAದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಪಿಯುಸಿ, ಐಟಿಐ, ನರ್ಸಿಂಗ್ (ಜೆಎಎನ್‌ಎಮ್), ಪ್ಯಾರಾಮೆಡಿಕಲ್, ಡಿಪ್ಲೋಮಾ ಕೋರ್ಸ್ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಇ-ಅಟೆಸ್ಟೇಶನ್ ಮಾಡುವ ಅಗತ್ಯ ಇರುವುದಿಲ್ಲ. ನೇರವಾಗಿ ತಮ್ಮ ಎಸ್‌ಎಟಿಎಸ್ ಐಡಿ ಸಂಖ್ಯೆಯಿAದ ವಿದ್ಯಾರ್ಥಿವೇತನ ಖಾತೆ ಸೃಜಿಸಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್‌ಸೈಟ್  www.gokdom.kar.nic.in ವಿದ್ಯಾರ್ಥಿ ವೇತನದ ವೆಬ್‌ಸೈಟ್ http://ssp.postmatric.karnataka.gov.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ದೂ:೦೮೪೭೩-೨೫೩೨೩೫ ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದರಪಟ್ಟಿ ಆಹ್ವಾನ
ಯಾದಗಿರಿ, ನವೆಂಬರ್ ೨೮ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯ ದೈನಂದಿನ ಕೆಲಸ ಕಾರ್ಯಗಳಿಗಾಗಿ ಮಾರ್ಚ್ ೨೦೨೦ರವರೆಗೆ ಬಾಡಿಗೆ ವಾಹನ ನೀಡಲು ಅರ್ಹ ಟರ‍್ಸ್ ಮತ್ತು ಟ್ರಾವೆಲ್ಸ್, ಏಜೆನ್ಸಿ, ನೋಂದಾಯಿತ ಟ್ಯಾಕ್ಸಿದಾರರಿಂದ ದರಪಟ್ಟಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದರಪಟ್ಟಿಯನ್ನು ಸಲ್ಲಿಸುವ ಅರ್ಹ ಆಸಕ್ತರು ೩೦೦ ರೂ. ಡಿ.ಡಿಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳು, ಯಾದಗಿರಿ ಇವರ ಹೆಸರಿಗೆ ಸಂದಾಯ ಮಾಡಿ ಅರ್ಜಿ ಫಾರಂಗಳನ್ನು ಡಿಸೆಂಬರ್ ೩ರವರೆಗೆ ಪಡೆಯಬಹುದಾಗಿದೆ. ದರಪಟ್ಟಿಗಳನ್ನು ದ್ವಿಲಕೋಟೆಯಲ್ಲಿ ಡಿಸೆಂಬರ್ ೫ರಂದು ಸಂಜೆ ೫.೩೦ ಗಂಟೆಯೊಳಗಾಗಿ ತಲುಪುವಂತೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸತಕ್ಕದ್ದು. ಡಿಸೆಂಬರ್ ೬ರಂದು ಬೆಳಿಗ್ಗೆ ೧೧ ಗಂಟೆಗೆ ಟೆಂಡರ್‌ದಾರರ ಸಮಕ್ಷಮದಲ್ಲಿ ಟೆಂಡರ್ ತೆರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...