ಬುಧವಾರ, ನವೆಂಬರ್ 20, 2019

ಉದ್ಯೋಗ ವಾಹಿನಿ ಜಾಗೃತಿ ರಥಕ್ಕೆ ಚಾಲನೆ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಯಾದಗಿರಿ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕುರಿತು ಗ್ರಾಮೀಣ ಕೂಲಿಕಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ “ಉದ್ಯೋಗ ವಾಹಿನಿ ಜಾಗೃತಿ ರಥ”ಕ್ಕೆ ಶಾಸಕರಾದ ನಾಗನಗೌಡ ಕಂದಕೂರ ಅವರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕರು, ಜಿಲ್ಲೆಯ ಜನ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನೆರವಾಗುತ್ತದೆ. ಗಂಡು ಹೆಣ್ಣಿಗೆ ಪ್ರತಿದಿನ ೨೪೯ ರೂ. ಸರಿಸಮಾನ ಕೂಲಿ ನೀಡಲಾಗುವುದು. ಒಂದು ಆರ್ಥಿಕ ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ನೂರು ದಿನಗಳ ಕೂಲಿ ಕೆಲಸ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಪ್ರಚಾರ ಕೊಡುವ ಜೊತೆಗೆ ಜನರಿಗೆ ಕೆಲಸ ನೀಡಬೇಕು. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಅವರು ಮಾತನಾಡಿ, ಉದ್ಯೋಗ ವಾಹಿನಿ ಪ್ರಚಾರ ರಥವು ಯಾದಗಿರಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಸಂಚರಿಸಿ ಯೋಜನೆಯ ಬಗ್ಗೆ ಮಾಹಿತಿ ನೀಡಲಿದೆ. ಕೂಲಿಕಾರ್ಮಿಕರಿಗೆ ಅವರ ಗ್ರಾಮದಲ್ಲಿ ಉದ್ಯೋಗ ನೀಡುವ ಸಲುವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಕೂಲಿಕಾರ್ಮಿಕರು ಬೇರೆ ಕಡೆಗೆ ವಲಸೆ ಹೋಗದಂತೆ ಅವರ ಮನವೊಲಿಸಿ ಉದ್ಯೋಗವನ್ನು ನೀಡುವ ಈ ಯೋಜನೆ ಬಗ್ಗೆ ತಿಳಿಸುವ ಸಲುವಾಗಿ ಉದ್ಯೋಗ ವಾಹಿನಿ ಮೂಲಕ ಪ್ರಚಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಭೀಮವ್ವ, ಉಪಾಧ್ಯಕ್ಷರಾದ ರಾಮಲಿಂಗಮ್ಮ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ, ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ್, ಎಡಿಪಿಸಿ ಬನ್ನಪ್ಪ, ಡಿಐಇಸಿ ಪರಶುರಾಮ ಜಿನಿಕೇರಾ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...