ಮಂಗಳವಾರ, ನವೆಂಬರ್ 26, 2019

ಡಿ.೧ರಿಂದ ಚಾಲು- ಬಂದ್ ಪದ್ಧತಿಯಂತೆ ಕಾಲುವೆಗೆ ನೀರು
ಯಾದಗಿರಿ, ನವೆಂಬರ್ ೨೬ (ಕರ್ನಾಟಕ ವಾರ್ತೆ): ೨೦೧೯-೨೦ನೇ ಸಾಲಿನ ಹಿಂಗಾರು ಹಂಗಾಮಿಗಾಗಿ ನಾರಾಯಣಪುರ ಎಡದಂಡೆ ಕಾಲುವೆಯ ವಿತರಣಾ ಕಾಲುವೆ ೧ರಿಂದ ೨೫ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆ ೧ರಿಂದ ೧೪ರ ವರೆಗೆ ಮತ್ತು ರಾಂಪೂರ ಏತ ನೀರಾವರಿ ಕಾಲುವೆಗಳಲ್ಲಿ ಚಾಲು- ಬಂದ್ ಪದ್ಧತಿಯಂತೆ ನೀರು ಹರಿಸಲಾಗುವುದು ಎಂದು ಕೃಷ್ಣ ಭಾಗ್ಯ ಜಲನಿಗಮ ನಿಯಮಿತ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಲಮಟ್ಟಿಯಲ್ಲಿ ನವೆಂಬರ್ ೧೭ರಂದು ಜರುಗಿದ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದಂತೆ, ನಾರಾಯಣಪುರ ಎಡದಂಡೆ ಕಾಲುವೆ ಕಿ.ಮೀ. ೦.೦೦ ರಿಂದ ೭೭.೦೦ ವರೆಗೆ, ವಿತರಣಾ ಕಾಲುವೆ ಸಂ. ೧ರಿಂದ ೨೫ರ ವರೆಗೆ, ನಾರಾಯಣಪುರ ಬಲದಂಡೆ ಕಾಲುವೆ ಕಿ.ಮೀ.೦.೦೦ ರಿಂದ ೮೨.೦೦ ವರೆಗೆ, ವಿತರಣಾ ಕಾಲುವೆ ಸಂಖ್ಯೆ: ೧ರಿಂದ ೧೪ರ ವರೆಗೆ ಮತ್ತು ರಾಂಪೂರ ಏತ ನೀರಾವರಿಯ ಕಾಲುವೆಗಳಿಗೆ ನವೆಂಬರ್ ೨೧ರಿಂದ ನವೆಂಬರ್ ೩೦ರವರೆಗೆ ಕಾಲುವೆ ಜಾಲದಲ್ಲಿ ನೀರನ್ನು ನಿಲ್ಲಿಸಿ, ಡಿಸೆಂಬರ್ ೧ರಿಂದ ಹರಿಸಲಾಗುತ್ತದೆ. ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಈ ಕೆಳಕಂಡAತೆ ಚಾಲು/ಬಂದ್ ಪದ್ಧತಿಯಂತೆ ನೀರನ್ನು ಹರಿಸಲಾಗುವುದು.
ನೀರು ನಿಲ್ಲಿಸುವ ದಿನಾಂಕಗಳು: ನವೆಂಬರ್ ೨೧ರಿಂದ ನ.೩೦ರವರೆಗೆ, ಡಿಸೆಂಬರ್ ೧೫ರಿಂದ ಡಿ.೨೨ರವರೆಗೆ, ೨೦೨೦ರ ಜನವರಿ ೬ರಿಂದ ಜ.೧೩ರವರೆಗೆ, ಜನವರಿ ೨೮ರಿಂದ ಫೆಬ್ರುವರಿ ೪ರ ವರೆಗೆ, ಫೆಬ್ರುವರಿ ೧೯ರಿಂದ ಫೆ.೨೬ರವರೆಗೆ, ಮಾರ್ಚ್ ೧೨ರಿಂದ ಮಾ.೧೯ರವರೆಗೆ ಸೇರಿದಂತೆ ಒಟ್ಟು ೪೦ ದಿನ ನೀರು ನಿಲ್ಲಿಸಲಾಗುವುದು.
ನೀರು ಬಿಡುವ ದಿನಾಂಕಗಳು: ಡಿಸೆಂಬರ್ ೧ರಿಂದ ಡಿ.೧೪ರ ವರೆಗೆ, ಡಿಸೆಂಬರ್ ೨೩ರಿಂದ ೨೦೨೦ರ ಜನವರಿ ೫ರ ವರೆಗೆ, ಜನವರಿ ೧೪ರಿಂದ ಜ.೨೭ರವರೆಗೆ, ಫೆಬ್ರುವರಿ ೫ರಿಂದ ಫೆ.೧೮ರ ವರೆಗೆ, ಫೆಬ್ರುವರಿ ೨೭ರಿಂದ ಮಾರ್ಚ್ ೧೧ರ ವರೆಗೆ ಸೇರಿದಂತೆ ಒಟ್ಟು ೭೦ ದಿನ ನೀರು ಬಿಡಲಾಗುವುದು. ಮುಂದಿನ ದಿನಾಂಕವನ್ನು ಜಲಾಶಯದ ನೀರಿನ ಲಭ್ಯತೆಗೆ ಅನುಗುಣವಾಗಿ ಫೆಬ್ರುವರಿ ತಿಂಗಳಲ್ಲಿ ಜರುಗುವ ಸಭೆಯಲ್ಲಿ ನಿರ್ಧರಿಸಲಾಗುವುದು.
ನೀರು ಪೂರೈಕೆಯ ಯಾವುದೇ ಸಮಸ್ಯೆಗಳಿಗೆ ತಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ಸಂಬAಧಿಸಿದAತೆ ಕೆಳಕಂಡ ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಬಹುದು. ಕೃಭಾಜನಿ(ನಿ) ನಾರಾಯಣಪೂರ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಸ್.ಎಚ್.ನಾಯಕೋಡಿ ಮೊ:೯೩೮೦೫೮೧೦೬೦, ಎಡದಂಡೆ ಕಾಲುವೆ ವಿಭಾಗ ರೋಡಲಬಂಡಾ ಇಇ ಸುರೇಂದ್ರಬಾಬು ಮೊ:೯೪೪೯೪೦೪೯೨೧, ಬಲದಂಡೆ ಕಾಲುವೆ ವಿಭಾಗ ನಂ.೫ ರೋಡಲಬಂಡಾ ಇಇ ವೆಂಕಟೇಶಲು ಮೊ:೭೩೪೯೬೭೭೧೨೬, ಎಡದಂಡೆ ಕಾಲುವೆ ವಿಭಾಗ ಹುಣಸಗಿ ಇಇ ಎಸ್.ಎಚ್.ನಾಯಕೋಡಿ ಮೊ:೯೩೮೦೫೮೧೦೬೦, ನಿಮಪೋ ವೃತ್ತ-೧ ನಾರಾಯಣಪೂರ ಅಧೀಕ್ಷಕ ಇಂಜಿನಿಯರ್ ಎಸ್.ರಂಗರಾಮ್ ಮೊ:೯೪೮೩೫೪೫೬೬೯ ಅವರನ್ನು ಸಂಪರ್ಕಿಸಬಹುದು.
ಭತ್ತ, ಕಬ್ಬು, ಬಾಳೆ ನಿಷೇಧ: ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಅಚ್ಚುಕಟ್ಟು ಕ್ಷೇತ್ರದಲ್ಲಿ ಭತ್ತ, ಕಬ್ಬು ಹಾಗೂ ಬಾಳೆಯ ಬೆಳೆಗಳನ್ನು ನಿಷೇಧಿಸಿ, ಲಘು ನೀರಾವರಿ ಹಾಗೂ ಅಲ್ಪಾವಧಿ ಬೆಳೆಗಳು ಮಾತ್ರ ಬೆಳೆಯುವುದಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರನ್ವಯ ಅಚ್ಚುಕಟ್ಟು ಪ್ರದೇಶದ ರೈತಬಾಂಧವರು ಸಹಕರಿಸಿ, ಲಘು ನೀರಾವರಿ ಬೆಳೆಗಳನ್ನು ಮಾತ್ರ ಬೆಳೆಯಲು ಹಾಗೂ ಮಿತವಾಗಿ ನೀರನ್ನು ಬಳಸಲು ವಿನಂತಿಸಲಾಗಿದೆ. ಕಾಲುವೆ ಜಾಲದ ನೀರು ನಿರ್ವಹಣೆ ಸಮಯದಲ್ಲಿ ತೂಬಿನ ಗೇಟುಗಳನ್ನು ಕಾಲುವೆ ಕಟ್ಟಡಗಳನ್ನು ರಕ್ಷಿಸುವುದು ಎಲ್ಲಾ ರೈತ ಬಾಂಧವರ ಕರ್ತವ್ಯವಾಗಿರುತ್ತದೆ ಹಾಗೂ ಕಾಲುವೆ ಮೇಲೆ ಸೈಫನ್ ಪೈಪ್‌ಗಳು ಮತ್ತು ಅನಧಿಕೃತ ಪಂಪುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ಎಲ್ಲಾ ರೈತಬಾಂಧವರು ಚಾಲು/ಬಂದ್ ಪದ್ಧತಿಯನ್ನು ಅನುಸರಿಸುವ ಮೂಲಕ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಅವರು ಕೋರಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...