ಶುಕ್ರವಾರ, ನವೆಂಬರ್ 29, 2019

ಡಿ.೩ರಂದು ಎಸ್‌ಪಿ ಅವರಿಂದ ಫೋನ್ ಇನ್ ಕಾರ್ಯಕ್ರಮ
ಯಾದಗಿರಿ, ನವೆಂಬರ್ ೨೯ (ಕರ್ನಾಟಕ ವಾರ್ತೆ): ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಮಧ್ಯೆ ಉತ್ತಮ ಸಂಪರ್ಕ ಬೆಳೆಯುವ ನಿಟ್ಟಿನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಷ್ ಭಗವಾನ್ ಸೋನವಣೆ ಅವರಿಂದ ಫೋನ್ ಇನ್ ಕಾರ್ಯಕ್ರಮವನ್ನು ಡಿಸೆಂಬರ್ ೩ರಂದು ಮಂಗಳವಾರ ಬೆಳಿಗ್ಗೆ ೧೧ರಿಂದ ೧೨ ಗಂಟೆಯವರೆಗೆ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ಸಾರ್ವಜನಿಕರು, ಫಿರ್ಯಾದಿ ಹಾಗೂ ನೊಂದವರು ಪೊಲೀಸ್ ಇಲಾಖೆಗೆ ಸಂಬAಧಿಸಿದAತಹ ಸಮಸ್ಯೆಗಳು ಯಾವುದಾದರೂ ಇದ್ದಲ್ಲಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆ ಇನ್ನಿತರೆ ಸುಧಾರಣೆಗಳ ಬಗ್ಗೆ ಸಲಹೆಗಳು ಇದ್ದಲ್ಲಿ ನೇರವಾಗಿ ಮೊ.ನಂ.೯೪೮೦೮೦೩೬೦೦ ಹಾಗೂ ದೂ:೦೮೪೭೩-೨೫೩೭೩೬ ಸಂಖ್ಯೆಗಳಿಗೆ ಕರೆ ಮಾಡಬಹುದು. ತಮ್ಮ ಸಲಹೆ, ಸಮಸ್ಯೆ, ದೂರುಗಳನ್ನು ಹೇಳಿದಲ್ಲಿ ಅವುಗಳನ್ನು ತಕ್ಷಣವಾಗಿ ಪರಿಹಾರ, ಕ್ರಮ ಕಂಡುಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿ.೨ರಿಂದ ಗ್ರಾಮ ಪಂಚಾಯಿತಿಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ
ಯಾದಗಿರಿ, ನವೆಂಬರ್ ೨೯ (ಕರ್ನಾಟಕ ವಾರ್ತೆ): ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ಗಳನ್ನು ಡಿಸೆಂಬರ್ ೨ರಿಂದ ನಿಗದಿತ ದಿನಾಂಕಗಳAದು ಬೆಳಿಗ್ಗೆ ೮ ಗಂಟೆಯಿAದ ಸಂಜೆಯವರೆಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿತರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ತಿಳಿಸಿದ್ದಾರೆ.
ಡಿಸೆಂಬರ್ ೨ರಂದು ಯಾದಗಿರಿ ತಾಲ್ಲೂಕಿನ ಮುದ್ನಾಳ, ಡಿ.೩ರಂದು ಬಂದಳ್ಳಿ, ಡಿ.೪ರಂದು ಹೊನಗೇರಾ, ಡಿ.೫ರಂದು ಹತ್ತಿಕುಣಿ, ಡಿ.೬ರಂದು ಠಾಣಗುಂದಿ, ಡಿ.೭ರಂದು ಅರಕೇರಾ- ಬಿ., ಡಿ.೯ರಂದು ಯರಗೋಳ, ಡಿ.೧೦ರಂದು ಅಲ್ಲಿಪೂರ, ಡಿ.೧೧ರಂದು ಮುಂಡರಗಿ, ಡಿ.೧೨ರಂದು ರಾಮಸಮುದ್ರ, ಡಿ.೧೩ರಂದು ಅರಕೇರಾ-ಕೆ, ಡಿ.೧೬ರಂದು ಯಂಪಾಡ, ಡಿ.೧೭ರಂದು ಪಸ್‌ಪುಲ್, ಡಿ.೧೮ರಂದು ಕಂದಕೂರ, ಡಿ.೧೯ರಂದು ಅನಪೂರ, ಡಿ.೨೦ರಂದು ಮಿನಾಸಪುರ, ಡಿ.೨೧ರಂದು ವರ್ಕನಳ್ಳಿ, ಡಿ.೨೩ರಂದು  ಹಳಿಗೇರಾ, ಡಿ.೨೪ರಂದು ಕಿಲ್ಲನಕೇರಾ, ಡಿ.೨೬ರಂದು ಬಳಿಚಕ್ರ, ಡಿ.೨೭ರಂದು ಕಡೇಚೂರ, ಡಿ.೩೦ರಂದು ಮಾದ್ವಾರ, ಡಿ.೩೧ರಂದು ಅಜಲಾಪುರ, ಜನವರಿ ೧ರಂದು ಜೈಗ್ರಾಮ, ಜ.೨ರಂದು ಯಲ್ಹೇರಿ, ಜ.೩ರಂದು ಕೌಳೂರು, ಜ.೪ರಂದು ಮಲ್ಹಾರ, ಜ.೬ರಂದು ಸೈದಾಪುರ, ಜ.೭ರಂದು ಬೆಳಗುಂದಿ, ಜ.೮ರಂದು ಬಾಡಿಯಾಳ, ಜ.೯ರಂದು ಕಾಕಲವಾರ, ಜ.೧೦ರಂದು ಚಪೆಟ್ಲಾ, ಜ.೧೩ರಂದು ಗಾಜರಕೋಟ, ಜ.೧೬ರಂದು ಮೊಟ್ನಳ್ಳಿ, ಜ.೧೭ರಂದು ಕಾಳಬೆಳಗುಂದಿ, ಜ.೧೮ರಂದು ಯಲಸತ್ತಿ, ಜ.೨೦ರಂದು ಕೊಂಕಲ್, ಜ.೨೧ರಂದು ಚಿನ್ನಾಕರ, ಜ.೨೨ರಂದು ಚಂಡರಕಿ, ಜ.೨೩ರಂದು ಪುಟಪಾಕ.
ಶಹಾಪುರ ತಾಲ್ಲೂಕು: ಡಿ.೨ರಂದು ಗುಲಸರಂ, ಡಿ.೩ರಂದು ನಾಯ್ಕಲ್, ಡಿ.ರಂದು ಖಾನಾಪೂರ, ಡಿ.೫ರಂದು ತಡಬಿಡಿ, ಡಿ.೬ರಂದು ದೋರನಳ್ಳಿ, ಡಿ.೭ರಂದು ತುಮಕೂರ, ಡಿ.೯ರಂದು ಐಕೂರ್, ಡಿ.೧೦ರಂದು ಹಯ್ಯಾಳ-ಬಿ, ಡಿ.೧೧ರಂದು ಬಿರನೂರ, ಡಿ.೧೨ರಂದು ಕೊಂಕಲ್, ಡಿ.೧೩ರಂದು ಬೆಂಡೆಬೆAಬಳಿ, ಡಿ.೧೬ರಂದು ಗೋನಾಲ್, ಡಿ.೧೭ರಂದು ಬಿಳ್ಹಾರ, ಡಿ.೧೮ರಂದು ವಡಗೇರಾ, ಡಿ.೧೯ರಂದು ಹಾಲಗೇರಾ, ಡಿ.೨೦ರಂದು ಕುರಕುಂದಾ, ಡಿ.೨೧ರಂದು ಉಳ್ಳೆಸೂಗೂರು, ಡಿ.೨೩ರಂದು ಕಾಡಂಗೇರಾ-ಬಿ, ಡಿ.೨೪ರಂದು ಟಿ.ವಡಗೇರಾ, ಡಿ.೨೬ರಂದು ಗುಂಡಗುರ್ತಿ, ಡಿ.೨೭ರಂದು ಗೋಗಿ-ಕೆ, ಡಿ.೩೦ರಂದು ಗೋಗಿಪೇಠ, ಡಿ.೩೧ರಂದು ಉಕ್ಕಿನಾಳ, ಜನವರಿ ೧ರಂದು ಚಾಮನಾಳ, ಜ.೨ರಂದು ಶಿರವಾಳ, ಜ.೩ರಂದು ಅಣಬಿ, ಜ.೪ರಂದು ಚಟ್ನಳ್ಳಿ, ಜ.೬ರಂದು ಉರಸುಗುಂಡಗಿ, ಜ.೭ರಂದು ಇಬ್ರಾಹಿಂಪುರ, ಜ.೮ರಂದು ಹೊಸಕೇರಾ, ಜ.೯ರಂದು ವನದುರ್ಗ, ಜ.೧೦ರಂದು ಕಕ್ಕಸಗೇರಾ, ಜ.೧೩ರಂದು ನಾಗನಟಗಿ, ಜ.೧೬ರಂದು ಕನ್ಯಾಕೋಳೂರು, ಜ.೧೭ರಂದು ರಸ್ತಾಪುರ, ಜ.೧೮ರಂದು ಹತ್ತಿಗುಡೂರು, ಜ.೨೦ರಂದು ಎಂ.ಕೊಳ್ಳೂರು, ಜ.೨೧ರಂದು ಸಗರ, ಜ.೨೨ರಂದು ಮದ್ದರಕಿ, ಜ.೨೩ರಂದು ಹೋತಪೇಠ, ಜ.೨೪ರಂದು ಮುಡಬೂಳ.
ಸುರಪುರ ತಾಲ್ಲೂಕು: ಡಿ.೨ರಂದು ಅಗ್ನಿ, ಡಿ.೩ರಂದು ಮುದ್ನೂರು-ಕೆ, ಡಿ.೪ರಂದು ಅರಕೇರಾ-ಜೆ, ಡಿ.೫ರಂದು ಕೋಳಿಹಾಳ, ಡಿ.೬ರಂದು ಅಲ್ದಾಳ, ಡಿ.೭ರಂದು ದೇವಾಪುರ, ಡಿ.೯ರಂದು ತಿಂಥಣಿ, ಡಿ.೧೦ರಂದು ಅರಕೇರಾ-ಕೆ, ಡಿ.೧೧ರಂದು ಹೆಮನೂರ, ಡಿ.೧೨ರಂದು ಸುಗೂರು, ಡಿ.೧೩ರಂದು ಖಾನಾಪುರ-ಎಸ್.ಎಚ್., ಡಿ.೧೬ರಂದು ದೇವಿಕೇರಾ, ಡಿ.೧೭ರಂದು ಬಾದ್ಯಾಪುರ, ಡಿ.೧೮ರಂದು ದೇವರಗೋನಾಲ, ಡಿ.೧೯ರಂದು ಹೆಗ್ಗಣದೊಡ್ಡಿ, ಡಿ.೨೦ರಂದು ನಗನೂರ, ಡಿ.೨೧ರಂದು ಮಾಲಗತ್ತಿ, ಡಿ.೨೩ರಂದು ಕರಡಕಲ್, ಡಿ.೨೪ರಂದು ಕಿರದಳ್ಳಿ, ಡಿ.೨೬ರಂದು ವಾಗಣಗೇರಾ, ಡಿ.೨೭ರಂದು ಪೇಠಅಮ್ಮಾಪುರ, ಡಿ.೩೦ರಂದು ಕಚಕನೂರ, ಡಿ.೩೧ರಂದು ಬೈಚಬಾಳ, ಜನವರಿ ೧ರಂದು ದೇವತ್ಕಲ್, ಜ.೨ರಂದು ಹೆಬ್ಬಾಳ-ಬಿ, ಜ.೩ರಂದು ವಜ್ಜಲ್, ಜ.೪ರಂದು ಹುಣಸಗಿ, ಜ.೬ರಂದು ಮಾಳನೂರ, ಜ.೭ರಂದು ಬೈಲಕುಂಟಿ, ಜ.೮ರಂದು ಬರದೇವನಹಾಳ, ಜ.೯ರಂದು ಜೋಗುಂಡಬಾವಿ, ಜ.೧೦ರಂದು ಕಾಮನಟಗಿ, ಜ.೧೩ರಂದು ಕೊಡೇಕಲ್, ಜ.೧೬ರಂದು ಮಾರನಾಳ, ಜ.೧೭ರಂದು ನಾರಾಯಣಪುರ, ಜ.೧೮ರಂದು ರಾಜನಕೂಳ್ಳೂರ, ಜ.೨೦ರಂದು ಮಲ್ಲಾ-ಬಿ, ಜ.೨೧ರಂದು ಯಕ್ತಾಪುರ, ಜ.೨೨ರಂದು ಯಾಳಗಿ, ಜ.೨೩ರಂದು ಏವೂರ್, ಜ.೨೪ರಂದು ಗೆದ್ದಲಮರಿ, ಜ.೨೬ರಂದು ಹಗರಟಗಿ.
ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಒಂದು ವರ್ಷಕ್ಕೆ ೫ ಲಕ್ಷ ರೂಪಾಯಿಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಎಪಿಎಲ್ ಕುಟುಂಬಗಳಿಗೆ ಸರ್ಕಾರಿ ಪ್ಯಾಕೇಜ್ ದರದ ಶೇ.೩೦ರಷ್ಟು ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ೧.೫೦ ಲಕ್ಷ ರೂಪಾಯಿ ಇರುತ್ತದೆ. ಈ ಯೋಜನೆಯಲ್ಲಿ ೧೬೫೦ ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹಾಜರುಪಡಿಸಿ ಈ ಯೋಜನೆಯಡಿ ನೋಂದಾಯಿಸಿ ಲಾಭ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಹತ್ತಿರದÀ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಕಾರ್ಡ್ನ್ನು ಪಡೆಯಬಹುದು. ಈ ಕಾರ್ಡ್ನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆ, ಶಹಾಪೂರ ಮತ್ತು ಸುರಪೂರ ತಾಲ್ಲೂಕು ಆಸ್ಪತ್ರೆಗಳು ಹಾಗೂ ವಡಿಗೇರಾ, ಸೈದಾಪೂರ, ಗುರುಮಠಕಲ್, ಅರಕೇರಾ ಬಿ., ಹುಣಸಗಿ, ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಯಾದಗಿರಿ, ಶಹಾಪೂರ, ಸುರಪೂರ ನಗರ ಆರೋಗ್ಯ ಕೇಂದ್ರಗಳಲ್ಲಿ ೧೦ ರೂಪಾಯಿ ಶುಲ್ಕ ನೀಡಿ ಪಡೆಯಬಹುದು. ಅಲ್ಲದೆ, ನಿಮ್ಮ ಹತ್ತಿರದಲ್ಲಿರುವ ಸೇವಾಸಿಂಧು ಕೇಂದ್ರಗಳಲ್ಲಿ ಕಾಗದದ ಕಾರ್ಡ್ಗೆ ೧೦ ರೂಪಾಯಿ ಹಾಗೂ ಪ್ಲಾಸ್ಟಿಕ್ ಕಾರ್ಡ್ಗೆ ೩೫ ರೂಪಾಯಿ ನೀಡಿ ಪಡೆದುಕೊಳ್ಳಬಹುದು. ಯಾದಗಿರಿ ತಹಸೀಲ್ ಕಚೇರಿ ಆವರಣದಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿ ಕೂಡ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಡಿ.೧೦ರಂದು ವಿಭಾಗಮಟ್ಟದ ಸಮಾಲೋಚನೆ ಸಭೆ
ಯಾದಗಿರಿ, ನವೆಂಬರ್ ೨೯ (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅವರ ಆಯೋಗದ ವತಿಯಿಂದ ಕಲಬುರಗಿ ವಿಭಾಗ ಮಟ್ಟದ ಸಮಾಲೋಚನಾ ಸಭೆಯನ್ನು ಡಿಸೆಂಬರ್ ೧೦ರಂದು ಬೆಳಿಗ್ಗೆ ೧೧ ಗಂಟೆಗೆ ಕಲಬುರಗಿಯ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಸರ್ಕಾರಿ, ಸಾರ್ವಜನಿಕ ಉದ್ಯೋಗಗಳಿಗೆ ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತು ಸಾರ್ವಜನಿಕರಿಂದ ಹಾಗೂ ಸಂಬAಧಿಸಿದ ಸಮುದಾಯ, ಸಂಘ- ಸಂಸ್ಥೆಗಳು, ವಿದ್ವಾಂಸರು, ಸಾಮಾಜಿಕ ಕಾರ್ಯಕರ್ತರಿಂದ ಮನವಿ ಅಥವಾ ಅಹವಾಲುಗಳನ್ನು ಸ್ವೀಕರಿಸಲು ಸಭೆಯನ್ನು ಏರ್ಪಡಿಸಲಾಗಿದೆ. ಆಸಕ್ತಿ ಇರುವ ಯಾರಾದರೂ ಆಯೋಗಕ್ಕೆ ಮನವಿ, ಅಹವಾಲು, ವರದಿ, ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು. ಮನವಿಗಳು ಆಯೋಗದ ವಿಷಯಕ್ಕೆ ಸಂಬAಧಿಸಿರಬೇಕು ಮತ್ತು ಸಂಕ್ಷಿಪ್ತವಾಗಿರಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಕ್ಷಣಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಯಾದಗಿರಿ, ನವೆಂಬರ್ ೨೯ (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಬರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಾದಗಿರಿ ಕಚೇರಿಯಲ್ಲಿ ಖಾಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ ಗುತ್ತಿಗೆ/ಸಂಚಿತ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪತ್ರಾಂತಿಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಮಾಸಿಕ ವೇತನ ೩೨,೮೦೦ ರೂ. ಒಂದು ವರ್ಷದ ಅವಧಿಗೆ ಅಥವಾ ಸರ್ಕಾರದಿಂದ ಅಥವಾ ಇಲಾಖೆಯಿಂದ ಸದರಿ ಹುದ್ದೆಗಳಿಗೆ ನಿಯಮಾನುಸಾರ ಭರ್ತಿ ಮಾಡುವವರೆಗೂ ಇದರಲ್ಲಿ ಯಾವುದು ಮೊದಲೋ ಅದರಂತೆ. ಸಂಚಿತ ವೇತನ ಹೊರತುಪಡಿಸಿ ಯಾವುದೇ ಭತ್ಯೆಗಳಿಗೆ ಅರ್ಹರಿರುವುದಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಅರ್ಜಿ ಪಡೆದು ಡಿಸೆಂಬರ್ ೧೦ರಂದು ಮಧ್ಯಾಹ್ನ ೩ ಗಂಟೆÀವರೆಗೆ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಬ್ಲಾಕ್ ಸಂಖ್ಯೆ:ಸಿ-೧೭, ಒಂದನೇ ಮಹಡಿ, ಜಿಲ್ಲಾಡಳಿತ ಭವನ ಸಂಕೀರ್ಣ, ಯಾದಗಿರಿ ಇಲ್ಲಿಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...