ನ.೨೭ರಂದು ದಾಳಿಂಬೆ ಬೆಳೆ ವಿಚಾರ ಸಂಕಿರಣ
ಯಾದಗಿರಿ, ನವೆಂಬರ್ ೨೦ (ಕರ್ನಾಟಕ ವಾರ್ತೆ): ಜಿಲ್ಲೆಯ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ ೨೭ರಂದು ಒಂದು ದಿನದ ದಾಳಿಂಬೆ ಬೆಳೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ಯಾದಗಿರಿ ಜಿಲ್ಲೆ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ದಾಳಿಂಬೆ ಬೆಳೆಯುವ ಜಿಲ್ಲೆಗಳಲ್ಲೊಂದಾಗಿದ್ದು, ಬೆಳೆಗೆ ಸೂಕ್ತವಾದ ವಾತಾವರಣವಿರುತ್ತದೆ. ಸುರಪುರ ಮತ್ತು ಶಹಾಪುರ ತಾಲ್ಲೂಕುಗಳಲ್ಲಿ ಹಲವಾರು ರೈತರು ದಾಳಿಂಬೆಯನ್ನು ಬೆಳೆಯುತ್ತಿದ್ದು, ಪ್ರತಿ ವರ್ಷ ದಾಳಿಂಬೆ ಬೆಳೆಯ ವಿಸ್ತೀರ್ಣ ಹೆಚ್ಚುತ್ತಿದೆ. ಸರಕಾರದ ಹಲವು ಯೋಜನೆಗಳ ಮೂಲಕ ಸೌಲಭ್ಯಗಳಲ್ಲಿ ರೈತರಿಗೆ ಸೂಕ್ತ ಸೌಕರ್ಯಗಳು ದೊರೆಯುತ್ತಿದ್ದು, ರೈತರು ಈ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ದಾಳಿಂಬೆ ಬೆಳೆಯಲ್ಲಿ ಸೂಕ್ತ ನಿರ್ವಹಣೆ ಮಾಹಿತಿಯ ಕೊರತೆಯಿಂದಾಗಿ ಕೆಲವು ಬಾರಿ ಬೆಳೆಯಲ್ಲಿ ರೈತರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಈ ವಿಚಾರ ಸಂಕಿರಣದಲ್ಲಿ ಸೊಲ್ಲಾಪುರ ರಾಷ್ಟಿçÃಯ ದಾಳಿಂಬೆ ಸಂಶೋಧನಾ ಸಂಸ್ಥೆ, ರಾಯಚೂರು ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳು ಭಾಗವಹಿಸಿ ರೈತರಿಗೆ ದಾಳಿಂಬೆ ಬೆಳೆಯ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಆಸಕ್ತ ರೈತರು ಕೃಷಿ ವಿಜ್ಞಾನ ಕೇಂದ್ರ ಅಥವಾ ಭೀಮರಾಯನಗುಡಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಖುದ್ದಾಗಿ ತಮ್ಮ ಹೆಸರನ್ನು ನವೆಂಬರ್ ೨೬ರ ಒಳಗಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ.ಮಲ್ಲಿಕಾರ್ಜುನ ಕೆಂಗನಾಳ ಮೊ:೯೮೪೫೩೬೪೭೦೮, ಸತೀಶ ಕಾಳೆ ಮೊ:೯೪೪೮೫೩೪೮೨೬, ಡಾ.ಉಮೇಶ ಬಾರಿಕರ ಮೊ:೯೯೪೮೩೧೩೫೨೫ ಮತ್ತು ಡಾ.ಶಿವಾನಂದ ಹೊನ್ನಳ್ಳಿ ಮೊ:೯೪೪೮೪೩೭೩೧೩ ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ