ಶುಕ್ರವಾರ, ನವೆಂಬರ್ 22, 2019

ಕುಷ್ಠರೋಗವು ದೇವರ ಶಾಪ ಅಥವಾ ಪಾಪದ ಫಲವಲ್ಲ
ನ.೨೫ರಿಂದ ಕುಷ್ಠ, ಕ್ಷಯರೋಗ ಪತ್ತೆ ಆಂದೋಲನ
-:ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ
ಯಾದಗಿರಿ, ನವೆಂಬರ್ ೨೨ (ಕರ್ನಾಟಕ ವಾರ್ತೆ): ಜಿಲ್ಲೆಯಾದ್ಯಂತ ಕುಷ್ಠರೋಗ ಮತ್ತು ಕ್ಷಯರೋಗ ಪತ್ತೆ ಹಚ್ಚುವ ಆಂದೋಲನವನ್ನು ನವೆಂಬರ್ ೨೫ರಿಂದ ಡಿಸೆಂಬರ್ ೧೦ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಪ್ರತಿಕಾಗೋಷ್ಠಿನಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನಸಂಖ್ಯೆ ೧೪,೧೫,೫೫೨ ಇದ್ದು, ಒಟ್ಟು ೨,೩೨,೬೦೫ ಮನೆಗಳಿವೆ. ಕುಷ್ಠ ಮತ್ತು ಕ್ಷಯರೋಗ ಪತ್ತೆಗೆ ಒಟ್ಟು ೮೪೭ ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಓರ್ವ ಆಶಾ ಕಾರ್ಯಕರ್ತೆ ಮತ್ತು ಒಬ್ಬ ಪುರುಷ ವಾಲೆಂಟೀರ್ ಇರುತ್ತಾರೆ. ಐದು ತಂಡಗಳಿಗೆ ಒಬ್ಬರಂತೆ ೧೬೮ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಂದೋಲನದಲ್ಲಿ ಪ್ರತಿಯೊಂದು ತಂಡ ದಿನಕ್ಕೆ ೨೦ ಮನೆಗಳಿಗೆ ಭೇಟಿ ನೀಡುತ್ತದೆ. ಕುಟುಂಬದ ಎಲ್ಲಾ ಸದಸ್ಯರಿಗೆ ದೇಹದ ಯಾವುದೇ ಭಾಗದಲ್ಲಿ ಮಚ್ಚೆ ಇದೆ ಅಥವಾ ಇಲ್ಲ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ. ಮಹಿಳೆಯರಿಗೆ ಆಶಾ ಕಾರ್ಯಕರ್ತೆ, ಪುರುಷರಿಗೆ ಪುರುಷ ವಾ ಸ್ಪಂದಿಸುವ ಮೂಲಕ ಜಿಲ್ಲೆಯನ್ನು ಕುಷ್ಠ ಮತ್ತು ಕ್ಷಯರೋಗ ಮುಕ್ತ ಮಾಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಜಿಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಮ್.ಎಸ್.ಪಾಟೀಲ್ ಅವರು ಮಾತನಾಡಿ, ಕುಷ್ಠರೋಗ ಆಂದೋಲನ ಜೊತೆಗೆ ಕ್ಷಲೆಂಟೀರ್ ತಪಾಸಣೆ ಮಾಡುತ್ತಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸಾರ್ವಜನಿಕರ ಮನೆಗೆ ಭೇಟಿ ನೀಡಿದಾಗ ಅವರಿಗೆಯರೋಗ ಪತ್ತೆ ಆಂದೋಲನ ಕೂಡ ನಡೆಸಲಾಗುತ್ತಿದ್ದು, ನವೆಂಬರ್ ೨೫ರಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು. ಯಾದಗಿರಿ ನಗರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕುಷ್ಠರೋಗವನ್ನು ಬಹುವಿಧ ಔಷಧಿ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದ್ದು, ಭಯ ಪಡುವ ಅಗತ್ಯವಿಲ್ಲ. ಚಿಕಿತ್ಸೆಯ ಅವಧಿ ೬ರಿಂದ ೧೨ ತಿಂಗಳು ಇದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ದೊರೆಯುತ್ತದೆ. ಪ್ರತಿ ಕ್ಷಯರೋಗಿಗೆ ಪೌಷ್ಟಿಕ ಆಹಾರದ ಸಲುವಾಗಿ ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಮಾಸಿಕ ೫೦೦ ರೂ. ಗೌರವಧನವನ್ನು ಪೂರ್ಣ ಚಿಕಿತ್ಸೆ ಆಗುವವರೆಗೂ ನೀಡಲಾಗುವುದು. ಕ್ಷಯರೋಗಿಯ ಅಧಿಸೂಚನೆ ಮಾಡಿದ ಮಾಹಿತಿದಾರರಿಗೆ ೫೦೦ ರೂ. ಗೌರವಧನ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ ಅವರು ಮಾತನಾಡಿ, ಕುಷ್ಠರೋಗವು ದೇವರು ನೀಡುವ ಶಾಪ ಅಥವಾ ಪಾಪದ ಫಲವಲ್ಲ. ದೇವರ ಶಾಪದಿಂದ ಬರುತ್ತದೆ ಎಂಬುದು ಜನರಲ್ಲಿ ಮೂಢನಂಬಿಕೆ ಇದೆ. ನೋವು ರಹಿತವಾಗಿರುವ ಈ ಕಾಯಿಲೆಯು “ಮೈಕೊಬ್ಯಾಕ್ಟೀರಿಯಂ ಲೆಪ್ರೆ” ಎಂಬ ರೋಗಾಣುವಿನಿಂದ ಬರುತ್ತದೆ. ಈ ರೋಗ ಕಾಣಿಸಿಕೊಳ್ಳಲು ೨ ವಾರದಿಂದ ೨೫ ವರ್ಷ ಬೇಕು. ಕುಷ್ಠರೋಗವು ವಂಶಪಾರAಪರಿಕವಾಗಿ ಹರಡುವುದಿಲ್ಲ. ಆದರೆ, ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ಕುಟುಂಬದಲ್ಲಿ ಅಥವಾ ಯಾರಿಗೆ ಬೇಕಾದರೂ ಈ ರೋಗ ಹರಡಬಹುದು ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯ ಚರ್ಮದ ಬಣ್ಣ ಬದಲಾಗುವುದು, ದಪ್ಪವಾಗುವುದು, ಮಿಂಚುವುದು, ಎಣ್ಣೆ ಚರ್ಮ, ಗಂಟುಗಳಾಗುವುದು, ಕಣ್ಣುಗಳನ್ನು ಮುಚ್ಚಲು ಸಾಧ್ಯವಾಗದಿರುವುದು, ಕೈಯಲ್ಲಿ ಹುಣ್ಣು, ಪಾದ ಮತ್ತು ಕೈಬೆರಳುಗಳು ಮಡಿಚಿರುವುದು, ಪಾದ ಬಿದ್ದಿರುವುದು, ಜುಮ್ಮೆನಿಸುವಿಕೆ, ಮರುಗಟ್ಟುವಿಕೆ, ಕೈಗಳಲ್ಲಿ ಮತ್ತು ಪಾದಗಳಲ್ಲಿ ಸಂವೇದನೆಯ ನಷ್ಟ, ಹಸ್ತಗಳಲ್ಲಿ, ಅಂಗಾಲುಗಳಲ್ಲಿ, ತಣ್ಣನೆ ಮತ್ತು ಬೆಚ್ಚನೆ ವಸ್ತುವಿನ ಸ್ಪರ್ಶದ ಬಗ್ಗೆ ಅಸಮರ್ಥತೆ ಮತ್ತು ಕೈಗಳಲ್ಲಿ, ಪಾದಗಳಲ್ಲಿ ವಸ್ತುವಿನ ಗ್ರಹಿಸುವುಕೆ, ಹಿಡಿದುಕೂಳ್ಳುವಿಕೆಯಲ್ಲಿ ಅಶಕ್ತತೆ ಕುಷ್ಠರೋಗದ ಲಕ್ಷಣಗಳಾಗಿವೆ ಎಂದು ಅವರು ವಿವರಿಸಿದರು.
ಕಾಯಿಲೆ ಹೊಂದಿದವರನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.೧೦೦ರಷ್ಟು ಗುಣಮುಖವಾಗುತ್ತಾರೆ. ಆದರೆ, ಮೈಕೊಬ್ಯಾಕ್ಟೀರಿಯಂ ಲೆಪ್ರೆ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ ೧೮ ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ ೧೫ ದಿನದಿಂದ ೧ ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು. ಜಿಲ್ಲೆಯಲ್ಲಿ ೧೬ ಪಿಬಿ, ೪೦ ಎಂಬಿ ಪ್ರಕರಣಗಳಿವೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಗುರುರಾಜ ಹಿರೇಗೌಡ್ರು ಅವರು ಮಾತನಾಡಿ, ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು, ಜ್ವರ ವಿಶೇಷವಾಗಿ ರಾತ್ರಿ ವೇಳೆ ಬರುವುದು, ತೂಕ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳಿರುವ ಜನರ ಕಫ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಆಂದೋಲನದ ಅಂಗವಾಗಿ ಕುಷ್ಠರೋಗ ಮತ್ತು ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಬಿ.ಪಾಟೀಲ್, ಆರೋಗ್ಯ ಇಲಾಖೆಯ ಸಹಾಯಕ ಆಡಳಿತ ಅಧಿಕಾರಿ ತಿಮ್ಮಯ್ಯ, ಡಿ.ಎಚ್.ಓ ಕಚೇರಿಯ ಅಧೀಕ್ಷಕರಾದ ಸಾಹೇಬಗೌಡ ಮಾನೇಗಾರ, ಹಿರಿಯ ಆರೋಗ್ಯ ಸಹಾಯಕ ಶರಣಬಸಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...