ಗುರುವಾರ, ನವೆಂಬರ್ 28, 2019

ದಾಳಿಂಬೆ ಬೆಳೆ ಒಂದು ದಿನದ ವಿಚಾರ ಸಂಕಿರಣ
ಉತ್ಕೃಷ್ಟ ದಾಳಿಂಬೆ ಉತ್ಪಾದನೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ
-: ಡಾ.ಜೋತ್ಸನಾ ಶರ್ಮಾ
ಯಾದಗಿರಿ, ನವೆಂಬರ್ ೨೮ (ಕರ್ನಾಟಕ ವಾರ್ತೆ): ದಾಳಿಂಬೆ ಬೆಳೆಯಲ್ಲಿ ಮಣ್ಣು ಮತ್ತು ನೀರಿನ ನಿರ್ವಹಣೆ ಮಹತ್ವವಾಗಿದ್ದು, ಅದರ ಸಮಗ್ರ ಬೇಸಾಯಕ್ಕೆ ಸೂಕ್ತವಾದ ವಾತವರಣ ಯಾದಗಿರಿ ಜಿಲ್ಲೆಯಲ್ಲಿದೆ. ರೈತರು ಉತ್ಕೃಷ್ಟವಾದ ದಾಳಿಂಬೆ ಉತ್ಪಾದನೆಗೆ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸೊಲ್ಲಾಪುರದ ರಾಷ್ಟಿಯ ದಾಳಿಂಬೆ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಜೋತ್ಸನಾ ಶರ್ಮಾ ಅವರು ಹೇಳಿದರು.
ಜಿಲ್ಲೆಯ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅದಾಮ ಇಂಡಿಯಾ ಪ್ರೆöÊವೆಟ್ ಲಿಮಿಟೆಡ್ ಸಂಸ್ಥೆಯ ಸಹೋಗದಲ್ಲಿ ಬುಧವಾರ ರಾಷ್ಟಮಟ್ಟದ ವಿಜ್ಞಾನಿಗಳಿಂದ ದಾಳಿಂಬೆ ಬೆಳೆ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ದಾಳಿಂಬೆ ಬೆಳೆಯ ವಿವಿಧ ತಳಿಗಳ ಬಗ್ಗೆ ವಿವರಣೆ ನೀಡಿದ ಅವರು, ಹೊಸದಾಗಿ ಬಿಡುಗಡೆಗೊಳ್ಳುತ್ತಿರುವ ರೊಗ ನಿರೋಧಕ ತಳಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. 
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ.ಬಿ.ಎಮ್. ಚಿತ್ತಾಪೂರ ಅವರು ಮಾತನಾಡಿ, ದಾಳಿಂಬೆ ಬೆಳೆಯಲ್ಲಿ ಸರಿಯಾದ ಸಮಯಕ್ಕೆ ಚಾಟನಿ ಮಾಡುತ್ತಾ ಅದಕ್ಕೆ ಸರಿಯಾದ ಆಕಾರ ನೀಡಿ ನಿರ್ವಹಣೆ ಮಾಡುವುದು ಹಾಗೂ ತೋಟದ ಸುತ್ತಮುತ್ತ ಜೈವಿಕ ತಡೆಗಳನ್ನು ನಿರ್ಮಾಣ ಮಾಡಿ ಬೆಳೆಯನ್ನು ಸಂರಕ್ಷಣೆ ಮಾಡಲು ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ದಾಳಿಂಬೆ ತಜ್ಞರಾದ ಡಾ.ವಿ.ಐ. ಬೆಣಗಿ ಅವರು ಮಾತನಾಡಿ, ದಾಳಿಂಬೆ ಬೆಳೆಯಲ್ಲಿ ಮೊದಲು ಎರಡು ವರ್ಷಗಳವರೆಗೆ ಯಾವುದೇ ತರಹದ ಹಣ್ಣುಗಳನ್ನು ಪಡೆಯಬಾರದು. ರೋಗ ಮತ್ತು ಕೀಟಗಳ ಹಾವಳಿಯನ್ನು ತಡೆಯಲು ಸಕಾಲಕ್ಕೆ ಜೈವಿಕ ಮತ್ತು ರಸಾಯನಿಕ ಕ್ರಮಗಳನ್ನು ಹಾಗೂ ಖರ್ಚು ಕಡಿಮೆ ಮಾಡುವಂತಹ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೀಟ ಶಾಸ್ತçಜ್ಞರಾದ ಡಾ.ಅರುಣಕುಮಾರ ಹೊಸಮನಿ ಅವರು ಮಾತನಾಡಿ, ದಾಳಿಂಬೆ ಬೆಳೆಯಲ್ಲಿ ರೋಗಗಳ ಮತ್ತು ಕೀಟಗಳ ನಿರ್ವಹಣೆಗೆ ಜೈವಿಕ ಕೀಟನಾಶಕಗಳ ಬಳಕೆ ಮತ್ತು ಅವುಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಳಕೆ ಮಾಡಲು ಸಾಧ್ಯವಿರುವುದರಿಂದ ರೈತರು ಕೃಷಿ ವಿಜ್ಞಾನ ಕೇಂದ್ರದಿAದ ಮಾಹಿತಿ ಪಡೆದು ಬಳಸಲು ತಿಳಿಸಿದರು.
ರಾಯಚೂರು ಕೃಷಿ ವಿ.ವಿ.ಯ ಸಹ ಸಂಶೋಧನಾ ನಿರ್ದೇಶಕರಾದ ಡಾ.ಜೆ.ಆರ್.ಪಾಟೀಲ್ ಅವರು ಮಾತನಾಡಿ, ದಾಳಿಂಬೆ ಬೆಳೆಯಲ್ಲಿ ಸಸ್ಯ ಪ್ರಚೋದಕಗಳ ಸರಿಯಾದ ಬಳಕೆ ಕುರಿತು ಮಾಹಿತಿ ನೀಡಿದರು. ರೈತರು ಗುಂಪುಗಳನ್ನು ರಚನೆ ಮಾಡಿಕೊಂಡು ದಾಳಿಂಬೆ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹದು ಎಂದು ತಿಳಿಸಿದರು.
ಕಾಡಾ ಭೀಮರಾಯನಗುಡಿ ಜಂಟಿ ನಿರ್ದೇಶಕರಾದ ಡಾ.ಜಿಯಾವುಲ್ಲಾ ಅವರು ರೈತರಿಗೆ ಅಚ್ಚುಕಟ್ಟು ಪ್ರದೇಶದಲ್ಲಿ ಪರ್ಯಾಯ ಹಣ್ಣು ಬೆಳೆಗಳ ಬೇಸಾಯಕ್ಕೆ ಕರೆ ನೀಡಿದರು. ಅದಮಾ ಇಂಡಿಯಾ ಪ್ರೆöÊ.ಲೀ. ಸಂಸ್ಥೆಯ ಅಧಿಕಾರಿಗಳಾದ ಡಾ.ಮಂಜುನಾಥ ಹಾಗೂ ಡಾ. ಅನೀಲ ಭಂಡಾರೆ ಅವರು ಮಾತನಾಡಿ, ದಾಳಿಂಬೆ ಬೆಳೆಯಲ್ಲಿ ಬರುವ ಜಂತು ಹುಳುವಿನ ನಿರ್ವಹಣೆಗೆ ನಿಮಿಟ್ಜ ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಸೆಂಥಿಲ್ ಕುಮಾರ ಅವರು ದಾಳಿಂಬೆ ಬೆಳೆಯಲ್ಲಿ ಸಂಸ್ಕರಣೆಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಮಣ್ಣು ಮತ್ತು ಜಲತಜ್ಞರಾದ ಡಾ.ರಾಜಕುಮಾರ ಹಳ್ಳಿದೊಡ್ಡಿ ಅವರು ದಾಳಿಂಬೆ ಬೆಳೆಯಲ್ಲಿ ಹನಿ ನೀರಾವರಿ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಬಾಬು ಅವರು ದಾಳಿಂಬೆ ಬೆಳೆಗಾರರಿಗೆ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಮೋಹನ ಚವ್ಹಾಣ, ಜೈವಿಕ ತಂತ್ರಜ್ಞಾನ ವಿಜ್ಞಾನಿಗಳಾದ ಡಾ.ಪ್ರಕಾಶ ಪಾಟೀಲ, ಕೃಷಿ ವಿಜ್ಞಾನ ಕೇಂದ್ರದ ಸತೀಶ ಕಾಳೆ, ಡಾ.ಉಮೇಶ ಬಾರಿಕರ, ಡಾ.ಮಹೇಶ ಹಾಗೂ ಅದಮಾ ಸಂಸ್ಥೆಯ ಆನಂದ ಅದ್ದೇಮಲ, ಪ್ರಭಾಕರ ರೆಡ್ಡಿ ಅವರು ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ.ಮಲ್ಲಿಕಾರ್ಜುನ ಕೆಂಗನಾಳ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಿಂದ ಸುಮಾರು ೧೫೦ಕ್ಕೂ ಹೆಚ್ಚು ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾಹಿತಿ ಪಡೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...