ನರೇಗಾ ದಿವಸ ದಿನಾಚರಣೆ
ನಿರಂತರ ಕೆಲಸ ಮಾಡಿ ನರೇಗಾ ಯೋಜನೆ ಉಪಯೋಗ ಪಡೆಯಿರಿ: ಬಸವರಾಜ
ಯಾದಗಿರಿ,ಫೆ. 02 (ಕ.ವಾ):- ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯತಿ ವತಿಯಿಂದ ವರ್ಷದಲ್ಲಿ ಒಂದು ಕುಟುಂಬಕ್ಕೆ ಒಂದು ನೂರು ದಿನಗಳವರೆಗೆ ಕೂಲಿ ಕೆಲಸ ನೀಡಲಾಗುತ್ತದೆ. ಕೂಲಿ ಕಾರ್ಮಿಕರು ನಿರಂತರ ಕೆಲಸ ಮಾಡಿ ಯೋಜನೆ ಉಪಯೋಗ ಪಡೆದುಕೊಳ್ಳಬೇಕು ಎಂದು ಯಾದಗಿರಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಅವರು ಹೇಳಿದರು.
ಅವರು ಫೆ.2 ರಂದು ನರೇಗಾ ದಿವಸ ದಿನಾಚರಣೆ ಅಂಗವಾಗಿ ಅಲ್ಲಿಪುರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಹೊಸದಾಗಿ ನೋಂದಣಿ ಮಾಡಿಕೊಂಡ ನರೇಗಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಒಂದು ದಿನಕ್ಕೆ ಕನಿಷ್ಟ 100 ರಿಂದ 150 ರೂ. ಗಳ ಕೂಲಿ ಸಿಗುತ್ತದೆ, ಅದು ವರ್ಷ ಪೂರ್ತಿ ಕೆಲಸ ಇರುವುದಿಲ್ಲ, ಕೆಲಸ ವಿಲ್ಲದ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೆ ದಿನಕ್ಕೆ 275 ರೂ.ಗಳು ಅಲ್ಲದೆ ಕೆಲಸದ ಉಪಕಣ ಸಾಣೆ ಇಡಿಯಲು 10 ರೂ.ಗಳು ನೀಡಲಾಗುತ್ತದೆ, ಮಹಿಳೆ ಹಾಗೂ ಪುರುಷರಿಗೂ ಸಮಾನ ಕೂಲಿ ನೀಡಲಾಗುತ್ತದೆ, ಅಲ್ಲದೆ ಇಲ್ಲಿ ವಿಕಲ ಚೇತನನರಿಗೂ ಕೆಲಸ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ತಾವು ನಿರಂತರ ಕೆಲಸ ಮಾಡುವ ಜೊತೆಗೆ ತಮ್ಮ ಮನೆಯ ಅಕ್ಕ ಪಕ್ಕದವರಿಗೆ ನರೇಗಾ ಕೆಲಸದ ಬಗ್ಗೆ ಮಾಹಿತಿ ನೀಡಿ ಅವರನ್ನು ಕೆಲಸಕ್ಕೆ ಕರೆ ತರಬೇಕು. ನರೇಗಾ ಕೆಲಸ ಕಷ್ಟಕರವಾದ ಕೆಲಸವಲ್ಲ ಎಂದು ಅವರು ಹೇಳಿದರು.
ತಾಲ್ಲೂಕು ತಾಂತ್ರಿಕ ಸಂಯೋಜಕ ಶರಣಪ್ಪ ಅವರು ನಮ್ಮ ನಡಿಗೆ ಉದ್ಯೋಗ ಖಾತ್ರಿ ಕಡೆಗೆ ನಮ್ಮ ನಡಿಗೆ ಕೆಲಸದ ಕಡೆಗೆ ಎಂದು ನೂತನ ನರೇಗಾ ಕೂಲಿ ಕಾರ್ಮಿಕರೊಂದಿಗೆ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ತಾಲ್ಲೂಕು ತಾಂತ್ರಿಕ ಸಂಯೋಜಕ ಶರಣಪ್ಪ, ಪಿಡಿಒ ಶರಣಪ್ಪ, ಐಇಸಿ ಸಂಯೋಜಕ ಬಸಪ್ಪ, ಡಿಇಒ ಪತ್ತು, ಗ್ರಾಮೀಣ ಕೂಲಿಕಾರರ ಸಂಘದ ಪ್ರತಿನಿಧಿ ಮಹಾಲಕ್ಷ್ಮಿ, ಪಿಂಕಿಬಾಯಿ, ರೇಣುಕಾ, ಸೋನಿಬಾಯಿ, ನಿರ್ಮಲ, ಸವಿತಾ, ದಾನಿಬಾಯಿ, ಸೋಮ್ಲಿಬಾಯಿ, ಸಿತಾಬಾಯಿ, ತಾರಿಬಾಯಿ, ನಾಗಮ್ಮ, ಈರಮ್ಮ, ಸಾಬಮ್ಮ, ಮಂಗಿಲಾಲ, ಗೇಮು,ರಮೇಶ, ಜಮ್ಲಾ,ರಾಜು ಸೇರಿದಂತೆ ಇತರರು ಇದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ