3 ರಿಂದ ಗ್ರಾಹಕರ ಸಂಪರ್ಕ ಸಭೆ
ಯಾದಗಿರಿ, ಫೆ.01 (ಕ.ವಾ):- ಗ್ರಾಹಕರೊಂದಿಗೆ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಉಪ ವಿಭಾಗಗಳ ವ್ಯಾಪ್ತಿಯಲ್ಲಿನ ಗ್ರಾಹಕರ ಸಂಪರ್ಕ ಸಭೆಯನ್ನು ಇದೇ ಫೆ.3 ರಿಂದ ಫೆ.5 ರವರಗೆ ಹಮ್ಮಿಕೊಳ್ಳಲಾಗಿದೆ.
ಫೆ. 3ರ ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 1.30ರ ವರೆಗೆ ಯಾದಗಿರಿಯ ಜೆಸ್ಕಾಂನ ಕಾರ್ಯ ಮತ್ತು ಪಾಲನೆಯ ಉಪ ವಿಭಾಗದ ಕಚೇರಿಯಲ್ಲಿ, ಅದೇ ಮಧ್ಯಾಹ್ನ 3 ರಿಂದ ಸಾಯಂಕಾಲ 5.30 ರವರೆಗೆ ಗುರುಮಠಕಲ್ ಜೆಸ್ಕಾಂನ ಕಾ ಮತ್ತು ಪಾ ಉಪ ವಿಭಾಗದ ಕಚೇರಿಯಲ್ಲಿ ಗ್ರಾಹಕ ಸಂಪರ್ಕ ಸಭೆ ನಡೆಯಲಿದೆ.
ಫೆ.4 ರಂದು ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 1.30ರ ವರೆಗೆ ಸುರಪುರದ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಕಚೇರಿಯಲ್ಲಿ, ಮಧ್ಯಾಹ್ನ 3 ರಿಂದ ಸಾಯಂಕಾಲ 5.30 ರವರೆಗೆ ಹುಣಸಗಿಯ ಜೆಸ್ಕಾಂನ ಕಾ ಮತ್ತು ಪಾ ಉಪ ವಿಭಾಗದ ಕಚೇರಿಯಲ್ಲಿ ಹಾಗೂ ಫೆ. 5 ರಂದು ಬೆಳಗ್ಗೆ 11 ಗಂಟೆಯಿAದ ಮಧ್ಯಾಹ್ನ 1.30ರ ವರೆಗೆ ಜೆಸ್ಕಾಂನ ಶಹಾಪುರದ ಕಾ ಮತ್ತು ಪಾ ಉಪ ವಿಭಾಗದ ಕಚೇರಿಯಲ್ಲಿ ನಡೆಯಲಿದೆ.
ಗ್ರಾಹಕರು ವಿದ್ಯುಚ್ಛಕ್ತಿಗೆ ಸಂಬAಧಿಸಿದ ಕುಂದುಕೊರತೆಗಳನ್ನು ಸಲ್ಲಿಸಬಹುದು ಎಂದು ಜೆಸ್ಕಾಂನ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.9 ರಂದು ಇಎಚ್‌ಟಿ/ಎಚ್‌ಟಿ ಗ್ರಾಹಕರೊಂದಿಗೆ ಸಂವಾದ
ಯಾದಗಿರಿ, ಫೆ.01 (ಕ.ವಾ):- ಜಿಲ್ಲೆಯ ಜೆಸ್ಕಾಂನ ಇಎಚ್‌ಟಿ/ಎಚ್‌ಟಿ ಗ್ರಾಹಕರೊಂದಿಗೆ ಸಂವಾದ ಸಭೆಯನ್ನು ಇದೇ ಫೆ.9 ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿ ಜೆಸ್ಕಾಂ ನಿಗಮ ಕಚೇರಿಯ ನೆಲಮಹಡಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಯಾದಗರಿ ಜೆಸ್ಕಾಂನ ಕಾ ಮತ್ತು ಪಾ ಉಪ ವಿಭಾಗದ ಇಎಚ್‌ಟಿ/ಎಚ್‌ಟಿನಲ್ಲಿ ಕುಂದುಕೊರತೆ ಇರುವ ಗ್ರಾಹಕರು ಮಾತ್ರ ಸಭೆಗೆ ಹಾಜರಾಗುವಂತೆ ಜೆಸ್ಕಾಂನ ಕಾ ಮತ್ತು ಪಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಯಾದಗಿರಿ, ಫೆ.01 (ಕ.ವಾ):- 2020-21ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ/ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರವೇಶ ಬಯಸುವ ಪ್ರ-1 2ಎ 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಪ.ಜಾ, ಪ.ಪಂ, ಪ್ರವರ್ಗ-1 ರ ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ.ಗಳು ಮತ್ತು ಜಾತಿ ಪ್ರವರ್ಗ-2 ಎ,2ಬಿ,3ಬಿ, 3ಬಿ, ಇತರೆ ಹಿಂದುಳಿದ ವರ್ಗ ಹಾಗೂ ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ಆದಾಯ 1 ಲಕ್ಷ ರೂ.ಗಳನ್ನು ಮೀರದವರು ವೆಬ್ ಸೈಟ್ ತಿತಿತಿ.bsಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಕೊನೆಯ ದಿನ 2021ರ ಫೆಬ್ರುವರಿ 10.
ಹೆಚ್ಚಿನ ಮಾಹಿತಿಗೆ ಜಿಲ್ಲೆ ಅಥವಾ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಸಂಪರ್ಕಿಸುವAತೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ.
6ರಂದು ಜಾಗೃತಿ, ಉಸ್ತುವಾರಿ ಸಮಿತಿ ಸಭೆ
ಯಾದಗಿರಿ, ಫೆ.01 (ಕ.ವಾ):- ಇಲ್ಲಿನ ಉಪ ವಿಭಾಗ ಮಟ್ಟದ ಅನುಸೂಚಿತ ಜಾತಿ, ಅನುಸೂಚಿತ ಪಂಗಡ (ದೌರ್ಜನ್ಯ ನಿಯಂತ್ರಣ)ದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಇದೇ ಫೆ.6ರ ಬೆಳಿಗ್ಗೆ 11 ಗಂಟೆಗೆ ಯಾದಗಿರಿ ಸಹಾಯಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-1) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ