ಬುಧವಾರ, ಫೆಬ್ರವರಿ 17, 2021

 ಮಹತ್ವಕ್ಷಾಂಕ್ಷಿ ಜಿಲ್ಲಾ ಸಾಧನೆಯಲ್ಲಿ ಯಾದಗಿರಿಗೆ ಎರಡನೇ ಸ್ಥಾನ:

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ.ಫೆ.17 (ಕ.ವಾ):- ಪ್ರಧಾನಮಂತ್ರಿಗಳ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ ಮಹತ್ವಾಕ್ಷಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ 2020 ರ ನವೆಂಬರ್ ತಿಂಗಳ ಒಟ್ಟಾರೆ ಕಾರ್ಯಕ್ಷಮತೆ ವಿಭಾಗದಲ್ಲಿ ದೇಶದ 112 ಜಿಲ್ಲೆಗಳಲ್ಲಿ ಯಾದಗಿರಿ ಜಿಲ್ಲೆಯು  ಎರಡನೇ ಸ್ಥಾನ  ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆ 2ನೇ ಸ್ಥಾನ ಪಡೆದಿದ್ದು ಆದ್ದರಿಂದ ಚಾಲೆಂಜ್ ವಿಧಾನದ ಅಡಿಯಲ್ಲಿ 2 ಕೋಟಿ ರೂ. ಅನುದಾನ ಘೋಷಣೆಯಾಗಿದೆ. ಆರೋಗ್ಯ, ಕೃಷಿ ಸೇರಿದಂತೆ ಇತರ ವಲಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದರು. 

ಜುಲೈ 2020 ರಲ್ಲಿ ದೇಶದ 112 ಜಿಲ್ಲೆಗಳ ಪೈಕಿ ಕೃಷಿ ಮತ್ತು ಜಲ ಸಂಪನ್ಮೂಲ ಕ್ಷೇತ್ರದಲ್ಲಿ ಮೂರನೇ ಸ್ಥಾನ ಗಳಿಸಿದ್ದರಿಂದ ಜಿಲ್ಲೆಗೆ ನೀತಿ ಆಯೋಗದಿಂದ  3 ಕೋಟಿ ರೂ. ಅನುದಾನ ಸಹ ಘೋಷಣೆಯಾಗಿತ್ತು ಎಂದು ಅವರು ತಿಳಿಸಿದರು. 

2019-20 ಸಾಲಿನನಲ್ಲಿ ನೀತಿ ಆಯೋಗದ ನಿಧಿಯಿಂದ ಜಿಲ್ಲಾಡಳಿತವು ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಮತ್ತು ಶಾಲೆಗಳಿಗೆ ಪ್ರೋತ್ಸಾಹಧನವನ್ನು ತ್ರೆöÊಮಾಸಿಕ ಮೌಲ್ಯಮಾಪನದ ಮೂಲಕ  ನೀಡಲಾಗುವದು. ಜಿಲ್ಲಾಡಳಿತದ ಕಾರ್ಯಕ್ರಮಗಳಲ್ಲಿ ಒಂದಾದ ಲಂಬಾಣಿ ಜನಾಂಗದ ಮಹಿಳೆಯರ ಅಭಿವೃದ್ಧಿಗಾಗಿ ಅವರಲ್ಲಿ ಕೈಗಾರಿಕಾ ತರಬೇತಿ ನೀಡಿ ವಲಸೆ ಹೋಗುವುದನ್ನು ತಡೆಗಟ್ಟಲು ಮತ್ತು ಅವರದೇ ಆದ ಆದಾಯ ಹೊಂದುವಲ್ಲಿ ನೆರವಾಗುವದೆಂದು  ಅವರು ತಿಳಿಸಿದರು.

ತಂತ್ರಾಜ್ಞಾನಾಧಾರಿತ ಶಿಕ್ಷಣ: ಈ ಕಾರ್ಯಕ್ರಮದ ಮೂಲಉದ್ದೇಶ ಮಕ್ಕಳಿಗೆ ಧ್ವನಿ ಮತ್ತು ದೃಶ್ಯ ಮಾಧ್ಯಮದ ಮೂಲಕ ಕಲಿಕೆಯ ಮಟ್ಟ ಹೆಚ್ಚಿಸುವದು. ಟ್ಯಾಬ್‌ಗಳಲ್ಲಿ ಮೊದಲೇ ಲೋಡ್ ಮಾಡಲಾದ ದೃಶ್ಯಾವಳಿಗಳ ಮೂಲಕ ಕಲಿಕೆ ಉತ್ತೇಜನಗೊಳಿಸುವುದೆಂದು ಹೇಳಿದರು.

ನೀತಿ ಆಯೋಗವು ಜಿಲ್ಲೆಯ ಅಭಿವೃದ್ಧಿಗಾಗಿ 5 ಕ್ಷೇತ್ರಗಳಲ್ಲಿ 49 ಸೂಚ್ಯಂಕಗಳನ್ನು ನಿಗದಿಪಡಿಸಿದೆ. ಈ 5 ಕ್ಷೇತ್ರಗಳು ತಮ್ಮದೇಯಾದ ತೂಕವನ್ನು ಹೊಂದಿವೆ. ಅದರಂತೆ ಆರೋಗ್ಯ ಮತ್ತು ಪೌಷ್ಠಿಕಾಂಶ 13 ಸೂಚ್ಯಂಕಗಳಲ್ಲಿ ಶೇ.30 ರಷ್ಟು, ಕೃಷಿ ಮತ್ತು ಜಲಸಂಪನ್ಮೂಲ 10 ಸೂಚ್ಯಂಕಗಳಲ್ಲಿ ಶೇ.20 ಮತ್ತು ಶಿಕ್ಷಣ 8 ಸೂಚ್ಯಂಕಗಳಲ್ಲಿ ಶೇ.30 ಹಾಗೂ ಆರ್ಥಿಕ ಸೇರ್ಪಡೆ ಮೂಲಭೂತ ಸೌಕಾರ್ಯ ವಲಯಗಳಲ್ಲಿ ಸಹ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದವರು ತಿಳಿಸಿದರು. 

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ಮಹತ್ವಾಕ್ಷಾಂಕ್ಷಿ ಜಿಲ್ಲೆ ಕಾರ್ಯಕ್ರಮದ ಸಂಯೋಜಕರು ಸುದ್ದಿಗೋಷ್ಠಿಯಲ್ಲಿದ್ದರು.





ಫೆ.18 ರಿಂದ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಯಾದಗಿರಿ.ಫೆ.17 (ಕ.ವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯಾದಗಿರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರಕಾರಿ ನೌಕರರ ಸಂಘದ ಸಂಯುಕ್ತಾಶ್ರದಲ್ಲಿ ನಡೆಯಲಿರುವ 2020-21ನೇ ಸಾಲಿನ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕçತಿಕ ಸ್ಪರ್ಧೆಗಳು ಇದೇ ಫೆ.18 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಸ್ಥಳೀಯ ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮಾಲಿ ಪಾಟೀಲ ಕ್ರೀಡಾಜ್ಯೋತಿ ಸ್ವೀಕರಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಸನಗೌಡ ಪಾಟೀಲ್ ಯಡಿಯಾಪೂರ, ಸುರಪುರ ಶಾಸಕ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ (ರಾಜುಗೌಡ), ಸಂಸದರಾದ ರಾಜಾ ಅಮರೇಶ್ವರ ನಾಯಕ್, ಉಮೇಶ್ ಜಾಧವ, ರಾಜ್ಯಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ, ಶಹಾಪೂರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಬಿ.ಜಿ.ಪಾಟೀಲ, ಡಾ.ಚಂದ್ರಶೇಖರ ಪಾಟೀಲ, ಕೃಷ್ಣಾ ಕಾಡಾದ ಅಧ್ಯಕ್ಷರಾದ ಶರಣಪ್ಪ ತಳವಾರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ರೋಟ್ನಡಗಿ ಹಾಗೂ ಇತರೆ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  


ಸಸಿ, ಕಸಿ ಗಿಡಗಳ ಪೂರೈಕೆಗೆ ಅರ್ಜಿ ಆಹ್ವಾನ

ಯಾದಗಿರಿ.ಫೆ.17 (ಕ.ವಾ):- ಯಾದಗಿರಿ ಜಿಲ್ಲಾದ್ಯಾಂತ 121 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಆಯ್ದ ಫಲಾನುಭವಿಗಳ ಮನೆಗಳ ಮುಂದೆ ಒಟ್ಟು ಅಂದಾಜು ರೂ.2.94 ಲಕ್ಷಗಳ ಮೊತ್ತಕ್ಕೆ ಪೌಷ್ಟಿಕ ತೋಟ ನಿರ್ಮಿಸಿಲು ಉದ್ದೇಶಿಸಿರುವ ಕಾರಣ  ಖಾಸಗಿ ನರ್ಸರಿಗಳಿಂದ ಉತ್ತಮ ಗುಣಮಟ್ಟದ ವಿವಿಧ ಸಸಿ/ ಕಸಿ ಗಿಡಗಳ  ಪೂರೈಕೆಗೆ ಅರ್ಜಿ ಆಹ್ವಾನಿಸಲಾಗಿದೆ. 

ಆಸಕ್ತಿಯುಳ್ಳ ಖಾಸಗಿ ನರ್ಸರಿ ಮಾಲಿಕರು ಅಥವಾ ಸಂಸ್ಥೆಯವರು ನಿಗದಿತ ಅರ್ಜಿ ನಮೂನೆ ಮತ್ತು ಷರತ್ತನ್ನೊಳಗೊಂಡ ನಿಬಂಧನೆಗಳು ಹಾಗೂ ದರಪಟ್ಟಿಯ ನಮೂನೆಯನ್ನು (ಅನುಬಂಧ -1, 2 ಮತ್ತು 3) ಜಿಲ್ಲಾ ಪಂಚಾಯತ ಕಾರ್ಯಾಲಯದಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಫೆ.18ರ ಮಧ್ಯಾಹ್ನ 2:00 ಗಂಟೆಯೊಳಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿನಲ್ಲಿ ಸಲ್ಲಿಸುವಂತೆ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.   

 

  

   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...