ಶುಕ್ರವಾರ, ಫೆಬ್ರವರಿ 26, 2021

 ವಾಹನ ವಾರಸುದಾರರ ಪತ್ತೆಗೆ ಮನವಿ

ಯಾದಗಿರಿ,ಫೆ.೨೬ (ಕ.ವಾ):- ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧಡೆ ವಾರಸುದಾರರಿಲ್ಲದ ೧೩ ವಾಹನಗಳು ಪತ್ತೆಯಾಗಿವೆ.

ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ವಾಹನಗಳನ್ನು ತಂದು ನಗರ ಪೊಲೀಸ್ ಠಾಣೆಯಲ್ಲಿ ಇರಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ವಾರಸುದಾರರ ಪತ್ತೆಗಾಗಿ ಠಾಣಾ ಆವರಣದಲ್ಲಿ ವಾಹನಗಳನ್ನು  ನಿಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆರಕ್ಷಕ ಉಪನೀರಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಯಾದಗಿರಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಅವರು ಕೋರಿದ್ದಾರೆ.  


ಚೆಕ್ ವಿತರಣೆ


ಯಾದಗಿರಿ.ಫೆ.೨೬ (ಕ.ವಾ):- ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನಾ ಸ್ಕೀಮ್ ಅಡಿಯ ಫಲಾನುಭವಿಯೊಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ  ಅವರ ಪತ್ನಿಗೆ ಯೋಜನೆಯ ಹಣವನ್ನು ವಿತರಿಸಲಾಗಿದೆ.

ಕಿಸನ್ ಎಂಬ ವ್ಯಕ್ತಿ ಮರಣ ಹೊಂದಿದ್ದು, ಅವರ ಪತ್ನಿ ಚಂದ್ರಿಬಾಯಿ ಅವರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನಾ ಸ್ಕೀಮ್ ಅಡಿ ೨ ಲಕ್ಷ ರೂ.ಗಳ ಚೆಕ್‌ನ್ನು ನಗರದ ಅಲಿಪುರ ದೊಡ್ಡ ತಾಂಡಾದಲ್ಲಿ ವಿತರಿಸಲಾಗಿದೆ ಎಂದು ಅಲಿಪುರ ಎಸ್.ಬಿ.ಐ ಶಾಖೆಯ ವ್ಯವಸ್ಥಾಪಕರಾದ ವೆಂಕಟೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್.ಬಿ.ಐ, ಡಿ.ಎಸ್.ಹೆಚ್. (ಯಾದಗಿರಿ) ಮುಖ್ಯ ವ್ಯವಸ್ಥಾಪಕರು (ಎಫ್ ಐ) ಶಿವರಾಜ್ ಪಾಟೀಲ್ ಗೌಡ ಹಾಗೂ ಗ್ರಾಮ ಪಂಚಾಯತ್ ನೂತನ ಸದಸ್ಯರು ಉಪಸ್ಥಿತರಿದ್ದರು ಎಂದು ಅವರು ತಿಳಿಸಿದ್ದಾರೆ.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...