ಬಾಲಗೌರವ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಯಾದಗಿರಿ.ಫೆ.12 (ಕ.ವಾ):- ಕರ್ನಾಟಕ ರಾಜ್ಯ ಬಾಲವಿಕಾಸ ಆಕಾಡೆಮಿ ವತಿಯಿಂದ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಸಾಧಕರಿಂದ “ಬಾಲಗೌರವ ಪ್ರಶಸ್ತಿ”ಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಗೀತ, ನೃತ್ಯ, ನಟನೆ, ಕ್ರೀಡೆ ಮತ್ತು ಚಿತ್ರಕಲೆ, ಕರಕುಶಲ, ಬರವಣಿಗೆ, ಸಂಶೋಧನೆ(ಹೊಸ ಆವಿಷ್ಕಾರ) ಈ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಪ್ರಶಸ್ತಿ ಪುರಷ್ಕೃತರಾಗಿರುವ ಮಕ್ಕಳು ಅಕಾಡೆಮಿ “ಬಾಲಗೌರವ ಪ್ರಶಸ್ತಿ”ಗಾಗಿ ತಮ್ಮ ಸ್ವಯಂ ದೃಢಿಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವ-ವಿವರಗಳನ್ನೊಳಗೊಂಡ ಅರ್ಜಿಯನ್ನು ಯೋಜನಾಧಿಕಾರಿಗಳು ಧಾರವಾಡದಲ್ಲಿರುವ ಕರ್ನಾಟಕ ಬಾಲ ವಿಕಾಸ ಆಕಾಡೆಮಿಗೆ ಇದೇ ಫೆಬ್ರವರಿ 20ರೊಳಗೆ ಅರ್ಜಿಗಳನ್ನು ತಲುಪಿಸಬೇಕು. ನಂತರ ಬರುವ ಅರ್ಜಿಗಳನ್ನು ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ.
ವಿಶೇಷ ಸೂಚನೆ ಅರ್ಜಿ ಸಲ್ಲಿಸುವಾಗ ‘ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ’ ಎಂದು ಲಕೋಟೆ ಮೇಲೆ ನಮೂದಿಸಬೇಕೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ