ಶುಕ್ರವಾರ, ಫೆಬ್ರವರಿ 5, 2021

 ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು ಪೂರಕ: ಡಾ. ರಾಗಪ್ರಿಯಾ

ಯಾದಗಿರಿ,ಫೆ. 05 (ಕ.ವಾ):- ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳ ಲಾಭ ಪಡೆದು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಅವರು ಕರೆ ನೀಡಿದರು.
ಅವರು ಫೆ.5 ರ ಶುಕ್ರವಾರ ನಗರದ ಬಾಲಾಜಿ ಕಲ್ಯಾಣ ಮಂಟಪದ ಹತ್ತಿರವಿರುವ ಕಲಿಕಾ ಟ್ರಸ್ಟ್ಗೆ ಭೇಟಿ ನೀಡಿ ಲಂಬಾಣಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುತ್ತಿರುವ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಮಾತನಾಡಿದರು.
ಮಹಿಳೆಯರ ಏಳಿಗೆಗೆ ಸರ್ಕಾರ ರೂಪಿಸಿರುವ ಯೋಜನೆಗಳು ಪೂರಕವಾಗಿವೆ, ವಿವಿಧ ಯೋಜನೆಗಳ ಕುರಿತು ತರಬೇತಿ ಪಡೆದು, ಆ ಮೂಲಕ ಆರ್ಥಿಕವಾಗಿ ಬಲಾಡ್ಯರಾಗಬೇಕು, ಅದಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಲಾಗುವುದು ಎಂದವರು ಹೇಳಿದರು.
ಕರಕುಶಲ ವಸ್ತುಗಳಾದ ಲಂಬಾಣಿ ಉಡುಪು, ಮಾಸ್ಕ್, ಕೈಚೀಲ, ಕೈಯಿಂದ ತಯಾರಿಸಿದ ಸರಗಳು ಸೇರಿದಂತೆ ಇನ್ನೀತರೆ ವಸ್ತುಗಳನ್ನು ಅವರು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಮ್ಯಾಗೇರಿ, ಟಾಟಾ ಟ್ರಸ್ಟ್ ಕಲಿಕೆ ಸಂಸ್ಥೆಯ ನಿರ್ದೇಶಕ ಗಿರೀಶ, ಪ್ರಮಿಳ, ಸಾಯಿಬಾಬ, ಮಯೂರ ಪೂಜಾರಿ, ಜಿಲ್ಲಾ ಮಹತ್ವಾಕಾಂಕ್ಷೆ ಸಮಾಲೋಚಕರು ಸೇರಿದಂತೆ ಇತರರು ಇದ್ದರು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಯಾದಗಿರಿ,ಫೆ. 05 (ಕ.ವಾ):- ಸಮಾಜ ಕಲ್ಯಾಣ ಇಲಾಖೆಯಿಂದ 2020-21ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕಾಗಿ ಜಿಲ್ಲೆಯ ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ವಬ್‌ಸೈಟ್hಣಣಠಿ://ssಠಿ.ಠಿosಣmಚಿಣಡಿiಛಿ.ಞಚಿಡಿಚಿಟಿಚಿಣಚಿಞಚಿ.gov.iಟಿ ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ವಿದ್ಯಾರ್ಥಿಗಳ ದಾಖಲಾತಿಗಳನ್ನು ಇ-ದೃಢೀಕರಣ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಇ-ದೃಢೀಕರಣ ಅಧಿಕಾರಿಯನ್ನಾಗಿ ನಿಯೋಜಿಸಲಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ

ಯಾದಗಿರಿ,ಫೆ. 05 (ಕ.ವಾ):- ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಕಚೇರಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಶಾಸ್ತçದಲ್ಲಿ ಸ್ನಾತಕ್ಕೊತ್ತರ ಪದವಿ ಹೊಂದಿದ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ ತಿತಿತಿ.ಥಿಚಿಜgiಡಿ.ಟಿiಛಿ.iಟಿ ನಲ್ಲಿ ಅರ್ಜಿ ಪಡೆದು, ಅಗತ್ಯ ದಾಖತಿಗಳೊಂದಿಗೆ ಖುದ್ದಾಗಿ ಜಿಲ್ಲಾ ಬಾಲಕಾರ್ಮಿಕರ ನಿರ್ಮೂಲನಾ ಯೋಜನಾ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂ.08473-253727 ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲಕಾರ್ಮಿಕರ ನಿರ್ಮೂಲನಾ ಯೋಜನಾ ಕಚೇರಿಯ ಪ್ರಕಟಣೆ ತಿಳಿಸಿದೆ.

ರಸ್ತೆ ಸುರಕ್ಷಿತ ಮಾಸಾಚರಣೆ
ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಲು ಎಸ್ಪಿ ಕರೆ
***********************************
ಯಾದಗಿರಿ,ಫೆ. 05 (ಕ.ವಾ):- ವಾಹನ ಸವಾರರು ರಸ್ತೆ ಸಂಚಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಕರೆ ನೀಡಿದರು.
ಅವರು ಫೆ.5ರ ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸಾಚರಣೆ ಅಂಗವಾಗಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಸಂಚಾರದ ನಿಯಮಗಳನ್ನು ವಾಹನ ಸವಾರರ ಅನುಕೂಲಕ್ಕಾಗಿಯೇ ರೂಪಿಸಲಾಗಿದೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರಗಳ ವಾಹನ ಸವಾರರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು, ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು, ಪ್ರತಿಯೊಬ್ಬರ ಜೀವನದಲ್ಲಿ ರಸ್ತೆ ಸಂಚಾರ ಪ್ರಮುಖ ಅಂಗವಾಗಿದೆ. ನಾವು ಪ್ರಜ್ಞಾವಂತ ನಾಗರಿಕರಾಗಿ ರಸ್ತೆ ಮೇಲೆ ಸಂಚಾರ ಮಾಡುವಾಗ ಕಾನೂನುಗಳು ಪಾಲನೆ ಮಾಡುವುದು ಬಹಳಷ್ಟು ಪ್ರಮುಖವಾಗಿದೆ ಎಂದರು.
ಒAದು ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು ಕಾನುನೂ ಉಲ್ಲಂಘನೆ, ಖಾಸಗಿ ವಾಹನ ಚಾಲಕರು ವಾಹನಗಳ ಮೇಲೆ ಯಾವುದೇ ಪ್ರಯಾಣಿಕರನ್ನು ಕೂರಿಸಿಕೊಂಡು ವಾಹನ ಸವಾರಿ ಮಾಡುವಂತಿಲ್ಲ, ವಿದ್ಯಾರ್ಥಿಗಳು ಈ ಅಂಶಗಳನ್ನು ಅಳವಡಿಸಿಕೊಂಡು, ಪೊಲೀಸ್ ಇಲಾಖೆಗೆ ಸಹಕಾರ ನೀಡಿದಾಗ ಮಾತ್ರ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಬಹುದು ಎಂದರು.
ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಸಂಚಾರಿ ಠಾಣೆ ಪಿಎಸ್‌ಐ ಪ್ರದೀಪ್ ಬಿಸೆ, ಕಾಲೇಜಿನ ಪ್ರಾಂಶುಪಾಲರಾದ ಸುಭಾಷ್ ಚಂದ್ರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲ
****************************
ಯಾದಗಿರಿ,ಫೆ. 05 (ಕ.ವಾ):-ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲವಾಗಿದ್ದು, ಆಸಕ್ತ ರೈತರು ಕಲ್ಲಂಗಡಿ ಬೆಳೆಯನ್ನು ಬೆಳೆಯಬಹುದಾಗಿದೆ.
ಕಲ್ಲಂಗಡಿ ಒಂದು ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದ್ದು, ಅಲ್ಪಾವಧಿಯಲ್ಲಿಯೇ (ನಾಟಿ ಮಾಡಿದ 75-100 ದಿನಗಳು) ಹೆಚ್ಚಿನ ಲಾಭ ಕೊಡುವ ಬೆಳೆಯಾಗಿದೆ.

ಹವಾಮಾನ: ಭೂಮಿಯ ಉಷ್ಣತೆ 20 ಡಿಗ್ರಿ ಸೆ. ಹೆಚ್ಚಿದ್ದು ಹವಾಗುಣ 25-32 ಡಿಗ್ರಿ ಸೆ. ಇರುವ ಎಲ್ಲಾ ಬಯಲು ಸೀಮೆ ಪ್ರದೇಶ ನೀರು ಬಸಿದುಹೊಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಈ ಬೆಳೆಗೆ ತುಂಬ ಸೂಕ್ತ ಜಾಗ. ಸವಳು ಮಣ್ಣು ಸೂಕ್ತವಲ್ಲ. ರಸಸಾರ 6.5-7.5 ಸೂಕ್ತ.ಆದರೆ ಬೆಳೆಯ ಯಾವ ಸಮಯದಲ್ಲೂ ಅಕಾಲಿಕ ಜೋರು ಮಳೆ ಈ ಬೆಳೆಗೆ ಹಾನಿಕಾರಕ.
ನಾಟಿ ವಿಧಾನ: ನೇರ ಬೀಜ ಬಿತ್ತನೆ ಮಾಡಿದರೆ 400-500 ಗ್ರಾಂ ಮತ್ತು ನರ್ಸರಿಯಲ್ಲಿ ಬೀಜ ಸಸಿ ಮಾಡಿ ನಾಟಿ ಮಾಡಿದರೆ 200 ಗ್ರಾಂ ಬೀಜ ಬೇಕು. 4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 2-3 ಅಡಿ ಬೀಜ/ಸಸಿಗಳ ನಡುವಿನ ಅಂತರ ಸೂಕ್ತ.ಎಕರೆಗೆ 4500 ಸಸಿಗಳ ಸಂಖ್ಯೆ ಉತ್ತಮ. ಬಿತ್ತುವ ಪೂರ್ವದಲ್ಲಿ ಚೆನ್ನಾಗಿ ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10-12 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ.ಮೀ.ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2-3 ಅಡಿಗೊಂದರAತೆ ನಾಟಿ ಮಾಡಬೇಕು. ತ್ರಿಕೋನಾಕೃತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ಸಸಿಗಳನ್ನು ನಾಟಿ ಮಾಡಬಹುದು.
ಪ್ರಮುಖ ತಳಿಗಳು: ಮೆಲೋಡಿ, ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಮುತ್ತು ಅಲ್ಲದೇ ವಿವಿಧ ಕಂಪನಿಗಳ ಹೈಬ್ರಿಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಸಸಿಗಳು ನಾಟಿ ಮಾಡುವಾಗ ಸೂಕ್ಷಾö್ಮಣು ಜೀವಿಗಳ ಕನ್ಸೋರ್ಷಿಯಂ 15-20 ಗ್ರಾಂ. ಹಾಕಿ ನಾಟಿ ಮಾಡಿ 15 ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ಧತಿ. ನಂತರ ಪ್ರತಿದಿನ 8-10 ದಿನಗಳವರೆಗೆ 15 ನಿಮಿಷದಿಂದ 30 ನಿಮಿಷಗಳವರೆಗೆ ನೀರೊದಗಿಸಬೇಕು (ಮಣ್ಣಿನಗುಣಧರ್ಮ ಆದರಿಸಿ).ನಂತರದ ದಿನಗಳಲ್ಲಿ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂ ಬಿಡುವ ಸಮಯ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂ ಬಿಡಲು ಆರಂಭವಾಗುತ್ತದೆ. ಮೊದಲುಗಂಡು ಹೂಗಳು ಆರಂಭವಾಗಿ ನಂತರ ಹೆಣ್ಣು ಹೂಗಳನ್ನು ಬರುತ್ತವೆ. ಗಂಡು ಹೂಗಳನ್ನು ಕಿತ್ತು ಹಾಕಿ, ಹೆಣ್ಣು ಹೂಗಳನ್ನು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂ ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಇದುಕಲ್ಲಂಗಡಿ ಬೇಸಾಯದಲ್ಲಿ ಪ್ರಮುಖ ಚಟುವಟಿಕೆ ಇದಕ್ಕಾಗಿ ತಜ್ಞರ ಸಲಹೆ ಪಡೆದು ಇಥೋಫಾನ್ ನಂತಹ ಸಸ್ಯ ಚೋಧಕಗಳನ್ನು ಬಳಸುವುದು ಉತ್ತಮ.
ಸಸ್ಯ ಸಂರಕ್ಷಣೆ: ಆರಂಭ ಹಂತದಲ್ಲಿರಸ ಹೀರುವ ಕೀಟಗಳು ತುಂಬ ಹಾನಿಯುಂಟು ಮಾಡುತ್ತವೆ. ಇದಕ್ಕಾಗಿ ತಜ್ಞರಿಂದ ಸಲಹೆ ಪಡೆದು ಇಮಿಡಾಕ್ಲೋಪ್ರಿಡ್ ನಂತಹ ಅಂತರ್ವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಥ್ರಿಪ್ಸ್ ನುಸಿ ಈ ಬೆಳೆಗೆ ಮಾರಕವಾಗಿದ್ದು ಕುಡಿ ಸಾಯುವ ನಂಜಾಣುರೋಗ (ಬಡ್ ನೆಕ್ರೋಸಿಸ್) ಹರಡುವುದರಿಂದ ಈ ಕೀಟದ ನಿಯಂತ್ರಣ ತುಂಬ ಮುಖ್ಯ ನಂತರ ಬರುವ ಹಣ್ಣಿನ ನೊಣಕೂಡಾ ಹಾನಿಕಾರಕವಾದ್ದರಿಂದ ಅಂಟುಕಾರ್ಡುಗಳ ಬಳಕೆ ಹಾಗೂ ಮೊಹಕ ಬಲೆಗಳ ಬಳಕೆ ತುಂಬ ಸೂಕ್ತ. ಹೂವಾಡುವ ಸಮಯದಲ್ಲಿ ಕೀಟಗಳಿಂದಾಗುವ (ಜೇನು ನೋಣ) ಪರಾಗಸ್ವರ್ಸದಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದು. ಎಕರೆಗೆ ಒಂದು ಜೇನು ಪೆಟ್ಟಿಗೆ ಇಟ್ಟಾಗ ಹಾನಿಕಾರಕ ಕೀಟನಾಶಕಗಳನ್ನು ಬಳಸದೇ ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು.
ಪ್ರಮುಖ ರೋಗಗಳು: ಬೂದಿ ರೋಗ, ಬೂಜುತುಪ್ಪಟ ರೋಗ ಮತು ಅಂಗಮಾರಿ ರೋಗಗಳ ಹತೋಟಿಗೆತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಅನಾವಶ್ಯಕವಾಗಿ ರಾಸಾಯನಿಕಗಳ ಬಳಕೆ ಮಾಡಬಾರದು.
ಪೋಷಕಾಂಶಗಳ ನಿರ್ವಹಣೆ: ಹನಿ ನೀರಾವರಿ ಮುಖಾಂತರತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿಕೊಡಬೇಕು. ಈ ಬೆಳೆಗೆ ಸೂಕ್ಷö್ಮ ಲಘು ಪೋಷಕಾಂಶಗಳಾದ ಸತು, ಬೋರಾನ್ ಮತ್ತು ಕ್ಯಾಲ್ಸಿಯಂಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಶರಣ, ವಿಷಯ ತಜ್ಞರು ತೋಟಗಾರಿಕೆ ಇಲಾಖೆ, ಹಾರ್ಟಿಕ್ಲಿನಿಕ್ ಯಾದಗಿರಿ ದೂ: ಸಂಖ್ಯೆ: 7899133206 .ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ ಅಧಿಕಾರಿಗಳು ಸಂಪರ್ಕಿಸುವAತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

********************************

*********************************
ಯಾದಗಿರಿ,ಫೆ. 05 (ಕ.ವಾ):- ಸಮಾಜ ಕಲ್ಯಾಣ ಇಲಾಖೆಯಿಂದ 2020-21ನೇ ಸಾಲಿಗೆ ವಿದ್ಯಾರ್ಥಿ ವೇತನಕ್ಕಾಗಿ ಜಿಲ್ಲೆಯ ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಮತ್ತು ಹೊರ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ವಬ್‌ಸೈಟ್hಣಣಠಿ://ssಠಿ.ಠಿosಣmಚಿಣಡಿiಛಿ.ಞಚಿಡಿಚಿಟಿಚಿಣಚಿಞಚಿ.gov.iಟಿ ನಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ವಿದ್ಯಾರ್ಥಿಗಳ ದಾಖಲಾತಿಗಳನ್ನು ಇ-ದೃಢೀಕರಣ ಮಾಡಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಇ-ದೃಢೀಕರಣ ಅಧಿಕಾರಿಯನ್ನಾಗಿ ನಿಯೋಜಿಸಲಾಗಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಆಹ್ವಾನ
***********************
ಯಾದಗಿರಿ,ಫೆ. 05 (ಕ.ವಾ):- ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಕಚೇರಿಯಲ್ಲಿ ಖಾಲಿ ಇರುವ ಯೋಜನಾ ನಿರ್ದೇಶಕರ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಶಾಸ್ತçದಲ್ಲಿ ಸ್ನಾತಕ್ಕೊತ್ತರ ಪದವಿ ಹೊಂದಿದ ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್ ತಿತಿತಿ.ಥಿಚಿಜgiಡಿ.ಟಿiಛಿ.iಟಿ ನಲ್ಲಿ ಅರ್ಜಿ ಪಡೆದು, ಅಗತ್ಯ ದಾಖತಿಗಳೊಂದಿಗೆ ಖುದ್ದಾಗಿ ಜಿಲ್ಲಾ ಬಾಲಕಾರ್ಮಿಕರ ನಿರ್ಮೂಲನಾ ಯೋಜನಾ ಕಚೇರಿಗೆ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಯು ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ದೂ.08473-253727 ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲಕಾರ್ಮಿಕರ ನಿರ್ಮೂಲನಾ ಯೋಜನಾ ಕಚೇರಿಯ ಪ್ರಕಟಣೆ ತಿಳಿಸಿದೆ.

ರಸ್ತೆ ಸುರಕ್ಷಿತ ಮಾಸಾಚರಣೆ
ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಲು ಎಸ್ಪಿ ಕರೆ
***********************************
ಯಾದಗಿರಿ,ಫೆ. 05 (ಕ.ವಾ):- ವಾಹನ ಸವಾರರು ರಸ್ತೆ ಸಂಚಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಕರೆ ನೀಡಿದರು.
ಅವರು ಫೆ.5ರ ಶುಕ್ರವಾರ ರಾಷ್ಟ್ರೀಯ ರಸ್ತೆ ಸುರಕ್ಷಿತ ಮಾಸಾಚರಣೆ ಅಂಗವಾಗಿ ಯಾದಗಿರಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಸ್ತೆ ಸಂಚಾರದ ನಿಯಮಗಳನ್ನು ವಾಹನ ಸವಾರರ ಅನುಕೂಲಕ್ಕಾಗಿಯೇ ರೂಪಿಸಲಾಗಿದೆ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಾಲ್ಕು ಚಕ್ರಗಳ ವಾಹನ ಸವಾರರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು, ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು, ಪ್ರತಿಯೊಬ್ಬರ ಜೀವನದಲ್ಲಿ ರಸ್ತೆ ಸಂಚಾರ ಪ್ರಮುಖ ಅಂಗವಾಗಿದೆ. ನಾವು ಪ್ರಜ್ಞಾವಂತ ನಾಗರಿಕರಾಗಿ ರಸ್ತೆ ಮೇಲೆ ಸಂಚಾರ ಮಾಡುವಾಗ ಕಾನೂನುಗಳು ಪಾಲನೆ ಮಾಡುವುದು ಬಹಳಷ್ಟು ಪ್ರಮುಖವಾಗಿದೆ ಎಂದರು.
ಒAದು ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು ಕಾನುನೂ ಉಲ್ಲಂಘನೆ, ಖಾಸಗಿ ವಾಹನ ಚಾಲಕರು ವಾಹನಗಳ ಮೇಲೆ ಯಾವುದೇ ಪ್ರಯಾಣಿಕರನ್ನು ಕೂರಿಸಿಕೊಂಡು ವಾಹನ ಸವಾರಿ ಮಾಡುವಂತಿಲ್ಲ, ವಿದ್ಯಾರ್ಥಿಗಳು ಈ ಅಂಶಗಳನ್ನು ಅಳವಡಿಸಿಕೊಂಡು, ಪೊಲೀಸ್ ಇಲಾಖೆಗೆ ಸಹಕಾರ ನೀಡಿದಾಗ ಮಾತ್ರ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಬಹುದು ಎಂದರು.
ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಸಂಚಾರಿ ಠಾಣೆ ಪಿಎಸ್‌ಐ ಪ್ರದೀಪ್ ಬಿಸೆ, ಕಾಲೇಜಿನ ಪ್ರಾಂಶುಪಾಲರಾದ ಸುಭಾಷ್ ಚಂದ್ರ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲ
****************************
ಯಾದಗಿರಿ,ಫೆ. 05 (ಕ.ವಾ):-ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯಲು ಈಗ ಸೂಕ್ತ ಕಾಲವಾಗಿದ್ದು, ಆಸಕ್ತ ರೈತರು ಕಲ್ಲಂಗಡಿ ಬೆಳೆಯನ್ನು ಬೆಳೆಯಬಹುದಾಗಿದೆ.
ಕಲ್ಲಂಗಡಿ ಒಂದು ಕುಂಬಳ ಜಾತಿಗೆ ಸೇರಿದ ತರಕಾರಿ ಬೆಳೆಯಾಗಿದ್ದು, ಅಲ್ಪಾವಧಿಯಲ್ಲಿಯೇ (ನಾಟಿ ಮಾಡಿದ 75-100 ದಿನಗಳು) ಹೆಚ್ಚಿನ ಲಾಭ ಕೊಡುವ ಬೆಳೆಯಾಗಿದೆ.

ಹವಾಮಾನ: ಭೂಮಿಯ ಉಷ್ಣತೆ 20 ಡಿಗ್ರಿ ಸೆ. ಹೆಚ್ಚಿದ್ದು ಹವಾಗುಣ 25-32 ಡಿಗ್ರಿ ಸೆ. ಇರುವ ಎಲ್ಲಾ ಬಯಲು ಸೀಮೆ ಪ್ರದೇಶ ನೀರು ಬಸಿದುಹೊಗುವ ಸಾಧಾರಣ ಎರೆ ಮಣ್ಣು, ಮರಳು ಮಿಶ್ರಿತ ಕೆಂಪು ಮಣ್ಣು ಹಾಗೂ ನದಿ ತೀರದ ಪ್ರದೇಶ ಈ ಬೆಳೆಗೆ ತುಂಬ ಸೂಕ್ತ ಜಾಗ. ಸವಳು ಮಣ್ಣು ಸೂಕ್ತವಲ್ಲ. ರಸಸಾರ 6.5-7.5 ಸೂಕ್ತ.ಆದರೆ ಬೆಳೆಯ ಯಾವ ಸಮಯದಲ್ಲೂ ಅಕಾಲಿಕ ಜೋರು ಮಳೆ ಈ ಬೆಳೆಗೆ ಹಾನಿಕಾರಕ.
ನಾಟಿ ವಿಧಾನ: ನೇರ ಬೀಜ ಬಿತ್ತನೆ ಮಾಡಿದರೆ 400-500 ಗ್ರಾಂ ಮತ್ತು ನರ್ಸರಿಯಲ್ಲಿ ಬೀಜ ಸಸಿ ಮಾಡಿ ನಾಟಿ ಮಾಡಿದರೆ 200 ಗ್ರಾಂ ಬೀಜ ಬೇಕು. 4 ರಿಂದ 6 ಅಡಿ ಸಾಲಿನಿಂದ ಸಾಲಿಗೆ ಹಾಗೂ 2-3 ಅಡಿ ಬೀಜ/ಸಸಿಗಳ ನಡುವಿನ ಅಂತರ ಸೂಕ್ತ.ಎಕರೆಗೆ 4500 ಸಸಿಗಳ ಸಂಖ್ಯೆ ಉತ್ತಮ. ಬಿತ್ತುವ ಪೂರ್ವದಲ್ಲಿ ಚೆನ್ನಾಗಿ ಭೂಮಿ ಉಳುಮೆ ಮಾಡಿ 5 ಟನ್ ಕಾಂಪೋಸ್ಟ್ ಗೊಬ್ಬರ ಅಥವಾ 10-12 ಟನ್ ಕೊಟ್ಟಿಗೆ ಗೊಬ್ಬರ ಬೆರೆಸಿ ಮೂರು ವಾರಗಳ ನಂತರ 30 ರಿಂದ 40 ಸೆಂ.ಮೀ.ಎತ್ತರದ ಮಡಿಗಳನ್ನು 4 ರಿಂದ 6 ಅಡಿ ಅಂತರದಲ್ಲಿ ನಿರ್ಮಿಸಿ ಅವುಗಳ ಮೇಲೆ ಹನಿಕೆ (ಲ್ಯಾಟರಲ್) ಗಳನ್ನು ಎಳೆದು ಪ್ಲಾಸ್ಟಿಕ್ ಹೊದಿಕೆ ಹಾಕಿ, 2-3 ಅಡಿಗೊಂದರAತೆ ನಾಟಿ ಮಾಡಬೇಕು. ತ್ರಿಕೋನಾಕೃತಿಯಲ್ಲಿ ನಾಟಿ ಮಾಡಿದರೆ ಹೆಚ್ಚಿನ ಸಸಿಗಳನ್ನು ನಾಟಿ ಮಾಡಬಹುದು.
ಪ್ರಮುಖ ತಳಿಗಳು: ಮೆಲೋಡಿ, ಶುಗರ್ ಬೇಬಿ, ಅರ್ಕಾ ಮಾಣಿಕ, ಅರ್ಕಾ ಮುತ್ತು ಅಲ್ಲದೇ ವಿವಿಧ ಕಂಪನಿಗಳ ಹೈಬ್ರಿಡ್ ತಳಿಗಳು ಮಾರುಕಟ್ಟೆಯಲ್ಲಿ ಲಭ್ಯ. ಸಸಿಗಳು ನಾಟಿ ಮಾಡುವಾಗ ಸೂಕ್ಷಾö್ಮಣು ಜೀವಿಗಳ ಕನ್ಸೋರ್ಷಿಯಂ 15-20 ಗ್ರಾಂ. ಹಾಕಿ ನಾಟಿ ಮಾಡಿ 15 ನಿಮಿಷಗಳ ಕಾಲ ಡ್ರಿಪ್ ಮೂಲಕ ನೀರು ಕೊಡುವುದು ಉತ್ತಮ ಪದ್ಧತಿ. ನಂತರ ಪ್ರತಿದಿನ 8-10 ದಿನಗಳವರೆಗೆ 15 ನಿಮಿಷದಿಂದ 30 ನಿಮಿಷಗಳವರೆಗೆ ನೀರೊದಗಿಸಬೇಕು (ಮಣ್ಣಿನಗುಣಧರ್ಮ ಆದರಿಸಿ).ನಂತರದ ದಿನಗಳಲ್ಲಿ ನೀರು ಕೊಡುವ ಪ್ರಮಾಣ ಹೆಚ್ಚಿಸಬೇಕು. ಹೂ ಬಿಡುವ ಸಮಯ ಮತ್ತು ಕಾಯಿ ಕಚ್ಚುವ ಸಮಯದಲ್ಲಿ ನೀರಿನ ಅಭಾವ ಇರದಂತೆ ನೋಡಿಕೊಳ್ಳಬೇಕು. ತಳಿಗಳನ್ನಾಧರಿಸಿ ನಾಟಿ ಮಾಡಿದ 3 ರಿಂದ 5 ವಾರಗಳ ನಂತರ ಹೂ ಬಿಡಲು ಆರಂಭವಾಗುತ್ತದೆ. ಮೊದಲುಗಂಡು ಹೂಗಳು ಆರಂಭವಾಗಿ ನಂತರ ಹೆಣ್ಣು ಹೂಗಳನ್ನು ಬರುತ್ತವೆ. ಗಂಡು ಹೂಗಳನ್ನು ಕಿತ್ತು ಹಾಕಿ, ಹೆಣ್ಣು ಹೂಗಳನ್ನು ಬೆಳೆಯಲು ಬಿಡಬೇಕು. ಪ್ರತಿ ಬಳ್ಳಿಗೆ ಎರಡೇ ಹೆಣ್ಣು ಹೂ ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಇದುಕಲ್ಲಂಗಡಿ ಬೇಸಾಯದಲ್ಲಿ ಪ್ರಮುಖ ಚಟುವಟಿಕೆ ಇದಕ್ಕಾಗಿ ತಜ್ಞರ ಸಲಹೆ ಪಡೆದು ಇಥೋಫಾನ್ ನಂತಹ ಸಸ್ಯ ಚೋಧಕಗಳನ್ನು ಬಳಸುವುದು ಉತ್ತಮ.
ಸಸ್ಯ ಸಂರಕ್ಷಣೆ: ಆರಂಭ ಹಂತದಲ್ಲಿರಸ ಹೀರುವ ಕೀಟಗಳು ತುಂಬ ಹಾನಿಯುಂಟು ಮಾಡುತ್ತವೆ. ಇದಕ್ಕಾಗಿ ತಜ್ಞರಿಂದ ಸಲಹೆ ಪಡೆದು ಇಮಿಡಾಕ್ಲೋಪ್ರಿಡ್ ನಂತಹ ಅಂತರ್ವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸಬೇಕು. ಥ್ರಿಪ್ಸ್ ನುಸಿ ಈ ಬೆಳೆಗೆ ಮಾರಕವಾಗಿದ್ದು ಕುಡಿ ಸಾಯುವ ನಂಜಾಣುರೋಗ (ಬಡ್ ನೆಕ್ರೋಸಿಸ್) ಹರಡುವುದರಿಂದ ಈ ಕೀಟದ ನಿಯಂತ್ರಣ ತುಂಬ ಮುಖ್ಯ ನಂತರ ಬರುವ ಹಣ್ಣಿನ ನೊಣಕೂಡಾ ಹಾನಿಕಾರಕವಾದ್ದರಿಂದ ಅಂಟುಕಾರ್ಡುಗಳ ಬಳಕೆ ಹಾಗೂ ಮೊಹಕ ಬಲೆಗಳ ಬಳಕೆ ತುಂಬ ಸೂಕ್ತ. ಹೂವಾಡುವ ಸಮಯದಲ್ಲಿ ಕೀಟಗಳಿಂದಾಗುವ (ಜೇನು ನೋಣ) ಪರಾಗಸ್ವರ್ಸದಿಂದಾಗಿ ಹೆಚ್ಚಿನ ಇಳುವರಿ ಪಡೆಯಬಹುದು. ಎಕರೆಗೆ ಒಂದು ಜೇನು ಪೆಟ್ಟಿಗೆ ಇಟ್ಟಾಗ ಹಾನಿಕಾರಕ ಕೀಟನಾಶಕಗಳನ್ನು ಬಳಸದೇ ಸಸ್ಯಜನ್ಯ ಕೀಟನಾಶಕಗಳನ್ನು ಬಳಸಬೇಕು.
ಪ್ರಮುಖ ರೋಗಗಳು: ಬೂದಿ ರೋಗ, ಬೂಜುತುಪ್ಪಟ ರೋಗ ಮತು ಅಂಗಮಾರಿ ರೋಗಗಳ ಹತೋಟಿಗೆತಜ್ಞರ ಸಲಹೆ ಪಡೆದು ಸೂಕ್ತ ಶಿಲೀಂಧ್ರನಾಶಕಗಳನ್ನು ಬಳಸಬೇಕು. ಅನಾವಶ್ಯಕವಾಗಿ ರಾಸಾಯನಿಕಗಳ ಬಳಕೆ ಮಾಡಬಾರದು.
ಪೋಷಕಾಂಶಗಳ ನಿರ್ವಹಣೆ: ಹನಿ ನೀರಾವರಿ ಮುಖಾಂತರತಜ್ಞರ ಸಲಹೆ ಪಡೆದು ನೀರಿನಲ್ಲಿ ಕರಗುವ ಗೊಬ್ಬರಗಳನ್ನು ನಿಯಮಿತವಾಗಿಕೊಡಬೇಕು. ಈ ಬೆಳೆಗೆ ಸೂಕ್ಷö್ಮ ಲಘು ಪೋಷಕಾಂಶಗಳಾದ ಸತು, ಬೋರಾನ್ ಮತ್ತು ಕ್ಯಾಲ್ಸಿಯಂಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಶರಣ, ವಿಷಯ ತಜ್ಞರು ತೋಟಗಾರಿಕೆ ಇಲಾಖೆ, ಹಾರ್ಟಿಕ್ಲಿನಿಕ್ ಯಾದಗಿರಿ ದೂ: ಸಂಖ್ಯೆ: 7899133206 .ಅಥವಾ ಹತ್ತಿರದ ತೋಟಗಾರಿಕೆ ಇಲಾಖೆಯ ಆರ್.ಎಸ್.ಕೆ ಅಧಿಕಾರಿಗಳು ಸಂಪರ್ಕಿಸುವAತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...