ಗ್ರಾ.ಪಂ ಉಪಚುನಾವಣೆ:ಮತದಾರರ ಪಟ್ಟಿ ತಯಾರಿಸಲು ಡಿಸಿ ಡಾ. ರಾಗಪ್ರಿಯಾ ಆರ್.ಸೂಚನೆ
ಯಾದಗಿರಿ, ಫೆ. 11 (ಕ.ವಾ):- ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಸಂಬAಧ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯ ಡಾಟಾವನ್ನು ಪಡೆದುಕೊಂಡು, ಗ್ರಾಮ ಪಂಚಾಯಿತಿಯ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಯಾದ ಡಾ. ರಾಗಪ್ರಿಯಾ ಆರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಹಾಪೂರ ತಾಲ್ಲೂಕಿನ ಗೋಗಿಪೇಠ ಗ್ರಾಮ ಪಂಚಾಯಿತಿಯ 7 ಕ್ಷೇತ್ರಗಳ 19 ಸ್ಥಾನಗಳಿಗೆ ಹಾಗೂ ಮುಡಬೂಳ ಗ್ರಾಮ ಪಂಚಾಯಿತಿಯ ಕ್ಷೇತ್ರ-04 ಮುಡಬೂಳ 01 ಸ್ಥಾನಕ್ಕೆ ಹಾಗೂ ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮ ಪಂಚಾಯಿತಿಯ ಕ್ಷೇತ್ರ-6 ಧರ್ಮಾಪೂರ (ಜುಮಾಲಾಪುರ ದೊಡ್ಡ ತಾಂಡಾ) 02 ಸ್ಥಾನಗಳ ಸದಸ್ಯ ಸ್ಥಾನಗಳು ಆಯ್ಕೆಯಾಗದೇ ಖಾಲಿ ಉಳಿದಿರುವುದರಿಂದ ಉಪ ಚುನಾವಣೆ ನಡೆಯಲಿದೆ.
ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇರುವ ಮತದಾರರನ್ನು ಗುರುತಿಸಿ ಮತದಾರರ ಪಟ್ಟಿಯನ್ನು ತಯಾರಿಸಬೇಕಾಗಿರುತ್ತದೆ. ಮತದಾರರ ಪಟ್ಟಿಯನ್ನು ತಯಾರಿಸಲು ಕಂದಾಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಹಾಗೂ ಬಿ.ಎಲ್.ಒ ಗಳ ಸಹಾಯದಿಂದ ಪ್ರತಿಯೊಂದು ಕ್ಷೇತ್ರದ ಮನೆ-ಮನೆಗೆ ಭೇಟಿ ನೀಡಿ ಕ್ಷೇತ್ರವಾರು ಮತದಾರರನ್ನು ಗುರುತಿಸಿ ಗಣಕೀಕರಣ ಮಾಡಿ ಮುದ್ರಕರಿಗೆ ನೀಡುವುದು ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮತದಾನ ಕೇಂದ್ರಗಳನ್ನು ನಿಗದಿಪಡಿಸಿ, ಮತದಾರರ ಪಟ್ಟಿ ಭಾಗಗಳನ್ನು ಸಿದ್ದಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಯನ್ನು ಫೆಬ್ರವರಿ 18 ರಂದು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ,ತಾಲ್ಲೂಕು ಕಚೇರಿಗಳಲ್ಲಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಪ್ರಕಟಿಸುವುದು. ಸದರಿ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಮತದಾರರ ಹೆಸರು ಮತದಾರರು ವಾಸವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಇರದೆ ಬೇರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಆ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು. 2021 ರ ಫೆಬ್ರವರಿ 22ರೊಳಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದ್ದಾರೆ.
ನಗರ ಪ್ರದೇಶದ ಮತದಾರರ ಹೆಸರುಗಳನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ಗ್ರಾಮ ಪಂಚಾಯಿತಿಗೆ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿಗದಿತ ಸಮಯದೊಳಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ಫೆಬ್ರವರಿ 23 ರಿಂದ 25 ರೊಳಗೆ ಇತ್ಯರ್ಥಪಡಿಸಿ ಅಗತ್ಯವಿದ್ದಲ್ಲಿ ಸೂಕ್ತ ಬದಲಾವಣೆ ಮಾಡಿ ಮುದ್ರಣಕ್ಕೆ ನೀಡುವುದು. ಒಂದು ಪ್ರತಿ ಪೈನಲ್ ಚೆಕ್ ಲಿಸ್ಟ್ ಪಡೆದು ಪರಿಶೀಲಿಸಿ ಸರಿಯಾಗಿ ಇರುವುದರ ಬಗ್ಗೆ ಖಚಿತ ಪಡಿಸಿಕೊಂಡು ಅಂತಿಮ ಮುದ್ರಣಕ್ಕೆ ಆದೇಶ ನೀಡುವುದು ಎಂದು ಅವರು ಸೂಚಿಸಿದ್ದಾರೆ.
ಅಂತಿಮ ಮತದಾರರ ಪಟ್ಟಿಯು ಮಾರ್ಚ್ 1 ರಂದು ಆಯಾ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಕಚೇರಿ ಮತ್ತು ತಾಲ್ಲೂಕ ತಹಸೀಲ್ದಾರರ ಕಚೇರಿಯಲ್ಲಿ ಪ್ರಕಟಿಸುವುದು. ಮತದಾರರ ಪಟ್ಟಿ ಪ್ರಕಟಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ಪರಿಶೀಲನೆ:- ಸಂಬAಧ ಪಟ್ಟ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಶೇಕಡ 100 ರಷ್ಟು ಪರಿಶೀಲಿಸುವುದು. ತಹಸೀಲ್ದಾರರು, ಕನಿಷ್ಠ ಶೇಕಡ 25 ರಷ್ಟು ಹಾಗೂ ಸಹಾಯಕ ಆಯುಕ್ತರು ಕನಿಷ್ಠ ಶೇಕಡ 15 ರಷ್ಟು ಮತದಾರರ ಪಟ್ಟಿಗಳನ್ನು ಯಾದೃಚ್ಛಿಕವಾಗಿ ರ‍್ಯಾಂಡಮ್) ಚೆಕ್ ಮಾಡುವುದು. ಮತದಾರರ ಪಟ್ಟಿಗಳಲ್ಲಿ ಯಾವುದೇ ತಪ್ಪುಗಳಾಗದಂತೆ, ಎಚ್ಚರ ವಹಿಸಿ ಮತದಾರರ ಪಟ್ಟಿಗಳನ್ನು ತಯಾರಿಸಲು ಕ್ರಮವಹಿಸಿಸುವುದು, ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷಗಳಿಂದಾಗಿ ಚುನಾವಣೆಗೆ ಅಡಚಣೆ ಉಂಟಾದಲ್ಲಿ ಸಂಬAಧ ಪಟ್ಟ ಎಲ್ಲಾ ಅಧಿಕಾರಿ/ ಸಿಬ್ಬಂದಿಯ ವಿರುದ್ದ ಶಿಸ್ತು ಕ್ರಮವಹಿಸಲಾಗುವುದು.
ಪ್ರಯುಕ್ತ ಗ್ರಾಮ ಪಂಚಾಯಿತಿ ಉಪ ಚುನಾವಣೆ ಸಂಬAಧ ಮೇಲ್ಕಂಡ ಕಾರ್ಯಕ್ರಮ ವೇಳಾಪಟ್ಟಿಯಂತೆ, ನಿಗದಿತ ಅವಧಿಯಲ್ಲಿ ಯಾವುದೇ ತಪ್ಪುಗಳಾಗದಂತೆ ಎಚ್ಚರ ವಹಿಸಿ ಮತದಾರರ ಪಟ್ಟಿಗಳನ್ನು ತಯಾರಿಸುವಂತೆ ಹಾಗೂ ಮತದಾರರ ಪಟ್ಟಿಯ ತಯಾರಿಕೆಯ ಪ್ರಗತಿ ವರದಿಯನ್ನು ಕಾಲಕಾಲಕ್ಕೆ ತಪ್ಪದೇ ನೀಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ