ಶನಿವಾರ, ಫೆಬ್ರವರಿ 6, 2021

 ನೇಮಕಾತಿಗೆ ಅರ್ಜಿ ಆಹ್ವಾನ

ಯಾದಗಿರಿ,ಫೆ. 06 (ಕ.ವಾ):- ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಲ್ಲಿ ಡಾಟಾ ಅನಾಲಿಸ್ಟ್-01 ಹುದ್ದೆಗೆ ಹೊರಗುತ್ತಿಗೆ ಆಧಾರದ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಎನ್.ಐ.ಸಿ. ವೆಬ್‌ಸೈಟ್ hಣಣಠಿ://ಥಿಚಿಜgiಡಿ.ಟಿiಛಿ.iಟಿ ನಲ್ಲಿ ಮಾಹಿತಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಫೆಬ್ರವರಿ 25 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ  ದೂ. 08473-253347 ಸಂಪರ್ಕಿðಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಫೆಬ್ರವರಿ ತಿಂಗಳ ಸಾರ್ವಜನಿಕ ಪಡಿತರ ಬಿಡುಗಡೆ

ಯಾದಗಿರಿ,ಫೆ. 06 (ಕ.ವಾ):-ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಯಾದಗಿರಿ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಎನ್.ಎಫ್.ಎಸ್.ಎ ಯೋಜನೆಯಡಿ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ. 

ಅಂತ್ಯೋದಯ ಅನ್ನ ಯೋಜನೆಯ 29,353 ಪಡಿತರ ಚೀಟಿಗಳಿಗೆ ಮತ್ತು ಎನ್.ಎಫ್.ಎಸ್.ಎ ಅಡಿಯಲ್ಲಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ ಅಕ್ಕಿ ಹಾಗೂ 2,35,356 ಬಿಪಿಎಲ್ ಪಡಿತರ ಚೀಟಿಗಳ 8,49,922 ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಹಾಗೂ ಓ.ಎಮ್.ಎಸ್.ಎಸ್.(ಡಿ) ಅಡಿಯಲ್ಲಿ ಬಿ.ಪಿ.ಎಲ್. ಪಡಿತರ ಚೀಟಿಗಳಿಗೆ 2 ಕೆ.ಜಿ. ಗೋಧಿ ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಲಾಗಿದೆ ಜಿಲ್ಲಾಧಿಕಾರಿ  ಡಾ. ರಾಗಪ್ರಿಯಾ ಆರ್. ತಿಳಿಸಿದ್ದಾರೆ. 

ಫೆಬ್ರವರಿ ತಿಂಗಳ ಆಹಾರಧಾನ್ಯ ಪಡೆಯಲು ಇಚ್ಛೆಯನ್ನು ವ್ಯಕ್ತಪಡಿಸಿದ ಆದ್ಯತೇತರ ಪಡಿತರ ಚೀಟಿ ಹೊಂದಿದವರಿಗೆ ಏಕ ಸದಸ್ಯರಿಗೆ ಅಕ್ಕಿ 5 ಕೆಜಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿ ಯನ್ನು ಪ್ರತಿ ಕೆಜಿಗೆ ರೂ,15/- ರಂತೆ ನೀಡಿ ಆಹಾರಧಾನ್ಯವನ್ನು ಪಡೆಯಬಹುದಾಗಿದೆ.

 ಜಿಲ್ಲೆಯ ಆಯ್ದ 399 ನ್ಯಾಯಬೆಲೆ ಅಂಗಡಿಗಳಲ್ಲಿ ಬಿ.ಪಿ.ಎಲ್. ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರ ಓ.ಟಿ.ಪಿ. ಮುಖಾಂತರ ಅಥವಾ ಬೆರಳಚ್ಚನ್ನು/ಬಯೋಮೆಟ್ರಿಕ್ ಪಡೆದು ಪಡಿತರ ವಿತರಿಸಲು (Poiಟಿಣ oಜಿ Sಚಿಟe – PಔS Shoಠಿ ಒoಜuಟe) ವ್ಯವಸ್ಥೆ ಮಾಡಲಾಗಿದೆ. ಕುಟುಂಬದ ಸದಸ್ಯರಿಗೆ ಲಭ್ಯವಾಗಿರುವ ಅರ್ಹತಾ ಪ್ರಮಾಣವನ್ನು ತಿಳಿದುಕೊಂಡು ಅಕ್ಕಿಯನ್ನು ಪಡೆದುಕೊಳ್ಳಲು ಸೂಚಿಸಿದೆ.  


ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆದುಕೊಳ್ಳಲು ಯಾವುದೇ ದೂರು ಇದ್ದಲ್ಲಿ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕಿನ ತಹಸೀಲ್ದಾರು ಅಥವಾ ಸಹಾಯವಾಣಿ 1967 ಸಂಖ್ಯೆಗೆ ದೂರನ್ನು ದಾಖಲಿಸಲು ಕೋರಿದೆ. 

ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ನ್ಯಾಯಬೆಲೆ ಅಂಗಡಿಯಿAದ ಆಹಾರಧಾನ್ಯವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

¬¬¬

                ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ

ಯಾದಗಿರಿ,ಫೆ 06(ಕ.ವಾ):- ಯಾದಗಿರಿ ಮತ್ತು ಸೈದಾಪೂರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಆಗಸ್ಟ್–2020ನೇ ಸಾಲಿನಲ್ಲಿ ನಾಲ್ಕು ಸುತ್ತುಗಳಲ್ಲಿ ಐಟಿಐ ಎಲೆಕ್ಟಿçಷಿಯನ್ ಮತ್ತು ಫಿಟ್ಟರ್ ಟ್ರೇಡ್ ಗಳಲ್ಲಿ  ಆನ್‌ಲೈನ್ ಪ್ರವೇಶ ಮಾಡಿಕೊಂಡು ಖಾಲಿ ಉಳಿದಿರುವ ಸ್ಥಾನಗಳಿಗೆ 10ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಆಫ್‌ಲೈನ್ ಮೂಲಕ 50 ರೂ. ಗಳು ಪಾವತಿಸಿ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿಕೊಂಡು ಫೆಬ್ರವರಿ 5 ರಿಂದ ಫೆಬ್ರವರಿ 15 ರೊಳಗೆ ಅರ್ಜಿ ಸಲ್ಲಿಸಿಬೇಕು.

ಸರ್ಕಾರಿ ಭೋದನಾ  ಶುಲ್ಕ ರೂ.1,200 ಇದ್ದು,  ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಮತ್ತು ಸೈದಾಪೂರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ರವರ ಪ್ರಾಚಾರ್ಯರು ಮತ್ತು ಸಿಬ್ಬಂದಿ  ದೂ. ಸಂಖ್ಯೆ: 9900289127, 9900971501, 9901467185, 9620327983 ಗಳಿಗೆ ಸಂಪರ್ಕಿಬಹುದಾಗಿದೆ ಎಂದು ಯಾದಗಿರಿ ಮತ್ತು ಸೈದಾಪೂರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 ಇಂದು ವಿದ್ಯುತ್ ವ್ಯತ್ಯಯ

ಯಾದಗಿರಿ,ಫೆ 06(ಕ.ವಾ):- ಯಾದಗಿರಿ ಕೇಂದ್ರದಿAದ ಹೊರಹೋಗುವ ಎಲ್ಲಾ 11 ಕೆವಿ ಹಾಗೂ 33 ಕೆವಿ ಹತ್ತಿಕುಣಿ & ಬಳಿಚಕ್ರ ಮಾರ್ಗಗಳಲ್ಲಿ  ಫೆಬ್ರವರಿ 7 ರ ಭಾನುವಾರ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸುವಂತೆ ಜೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅರ್ಜಿ ಆಹ್ವಾನ

ಯಾದಗಿರಿ,ಫೆ 06(ಕ.ವಾ):- ಕನ್ನಡ ಪುಸಕ್ತ ಪ್ರಾಧಿಕಾರದ ವತಿಯಿಂದ  ಜನೆವರಿ 2020 ರಿಂದ ಡಿಸೆಂಬರ್2020 ಅವಧಿಯಲ್ಲಿ ಕನ್ನಡದಲ್ಲಿ ಪ್ರಕಟವಾದ ಕೃತಿಗಳಿಗೆ ಅವುಗಳ ಮುದ್ರಣ, ಮುಖಪುಟ ವಿನ್ಯಾಸ ಗುಣಮಟ್ಟವನ್ನು ಪರಿಗಣಿಸಿ ವಿವಿಧ ಬಹುಮಾನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಲೇಖಕರ ಹೆಸರು, ಪುಸಕ್ತದ ಹೆಸರು,  ಪ್ರಕಟವಾದ ವರ್ಷ, ಪ್ರಕಾಶಕರ ಹೆಸರು, ಮುದ್ರಣಾಲಯದ ಹೆಸರು, ಮುಖಪುಟ ಚಿತ್ರ ರಚನೆಯ ಕಲಾವಿದರ ಹೆಸರು, ಚಿತ್ರ ಕಲಾವಿದರ ಪೂರ್ಣ ವಿಳಾಸ  ಈ ಎಲ್ಲಾ ವಿವರಗಳೊಂದಿಗೆ ಪುಸಕ್ತದ ಎರಡು ಪ್ರತಿಗಳನ್ನು ಫೆಬ್ರವರಿ 20 ರೊಳಗೆ ಕನ್ನಡ ಪುಸಕ್ತ ಪ್ರಾಧಿಕಾರ ಕನ್ನಡ ಆಡಳಿತಾಧಿಕಾರಿಗಳ ಭವನ, ಜೆ.ಸಿ ರಸ್ತೆ ಬೆಂಗಳೂರು-560 002  ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಸಲ್ಲಿಸಲಾಗುವ ಪುಸಕ್ತಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಸಲಾಗುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣಚಿಞಚಿಠಿಡಿಚಿಜhiಞಚಿಡಿಚಿ,ಛಿom ದೂ.080-22484516 /22107704  ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...