ಗುರುವಾರ, ಫೆಬ್ರವರಿ 11, 2021

 ಜಿಲ್ಲಾಧಿಕಾರಿಗಳಿಂದ ವಿವಿಧ ಕಾಮಗಾರಿಗಳ ವೀಕ್ಷಣೆ

ಯಾದಗಿರಿ.ಫೆ.11 (ಕ.ವಾ):- ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಗುರುವಾರದಂದು ನಗರದ ವಿವಿಧೆಡೆ ತೆರಳಿ, ಅಭಿವೃದ್ಧಿ ಕಾಮಗಾರಿಗಳ ವೀಕ್ಷಿಸಿದರು. 

ಹಳೆ ಬಸ್ ನಿಲ್ದಾಣ ಹತ್ತಿರ ನಿರ್ಮಾಣವಾಗುತ್ತಿರುವ ಮೀನು ಮಾರುಕಟ್ಟೆ ಹಾಗೂ ವಾಲ್ಮೀಕಿ ಭವನದ ಹತ್ತಿರ ನಿರ್ಮಾಣವಾಗುತ್ತಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಮತ್ತು ಕನಕದಾಸರ ವೃತ್ತದ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ನಂತರ ಮಾತನಾಡಿದ ಅವರು ನಗರದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದ ಕಾಮಗಾರಿಗಳನ್ನಾಗಿ ನಿಗದಿತ ಸಮಯದಲ್ಲಿ ಅಚ್ಚುಕಟ್ಟಾಗಿ ಕಾಮಗಾರಿಗಳನ್ನು ಮುಗಿಸುವಂತೆ ಸಂಬAಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕನಕದಾಸರ ವೃತ್ತದ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನವನ್ನು ಆದಷ್ಟು ಬೇಗ ಮುಗಿಸಿ ಸಾರ್ವಜನಿಕರಿಗೆ ವಾಯುವಿವಾರಕ್ಕೆ ಅನುವು ಮಾಡಿಕೊಂಡಬೇಕೆAದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದೇವಿಂದ್ರಪ್ಪ ಚೌವ್ಹಾಣ, ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿಯಾದ ಕಿರಣ ಕುಮಾರ್ ಸೇರಿದಂತೆ ಇತರರು ಸ್ಥಳದಲ್ಲಿ ಇದ್ದರು.  






ಮಾವು ಬೆಳೆಗೆ ತಗಲಲಿರುವ ಸಂಭವನೀಯ ರೋಗಗಳ ತಡೆಗೆ ಸಲಹೆ 

ಯಾದಗಿರಿ,ಫೆ. 11 (ಕ.ವಾ):- ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮಾವಿಗೆ ತಗಲಲಿರುವ ಸಂಭವನೀಯ ಹೂ ತೆನೆ ಕಪ್ಪಾಗುವ ರೋಗ ಹಾಗೂ ಬೂದಿರೋಗಗಳನ್ನು ತಡೆಗಟ್ಟಲು ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಮಾವು ಬೆಳೆಗಾರರಿಗೆ ಸಲಹೆ ನೀಡಿದ್ದಾರೆ. 


ಮಾವು ಹೂ ಬಿಡುವ ಸಮಯದಲ್ಲಿ ಜಾಸ್ತಿ ಉಷ್ಣತೆ ಮತ್ತು ಆರ್ದ್ರತೆ ಇರುವ ಕಾರಣ ಈ ರೋಗಗಳು ಹರಡುವ ಸಾಧ್ಯತೆಯಿದ್ದು,  ಮಾವಿನ ಗಿಡಗಳಿಗೆ ಹೆಕ್ಸಾಕೋನಾಜೋಲ್ 2 ಮಿ.ಲೀ ಅಥವಾ ಥಯೋಫಿನೇಟ್ ಮಿಥೈಲ್ 1 ಗ್ರಾಂ, ಕಾರ್ಬನ್‌ಡೈಜಿಮ್ 1.5 ಗ್ರಾಂ ಮತ್ತು ಟ್ರೆöÊಸೆಕ್ಲೊಜೋಲ್ 0.25 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಬೂದು ರೋಗ: ಬಾಧೆಯು ಹೂ ಬಿಡುವ ಹಂತದಿAದ ಕಾಯಿ ಕಟ್ಟುವರೆಗೂ ಕಂಡುಬರುತ್ತದೆ, ಹೂಗೊಂಚಲು ಹಾಗೂ ಚಿಗುರುಗಳ ಮೇಲೆ ಬೂದಿಯಂತಹ ಬೆಳವಣಿಗೆಯಾಗಿ ಕಾಯಿಗಳು ಕೂಡ ಉದುರುವುದನ್ನು ಕಾಣಬಹುದಾಗಿದೆ.


ನಿರ್ವಹಣೆ: ಹೂ ಬಿಡುವ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೇ 3 ಗ್ರಾಂ ಗಂಧಕ 80 ಡಬ್ಲೂö್ಯ ಪಿ ಅಥವಾ 1 ಗ್ರಾಂ ಟ್ರೆöÊಡೊಮಾರ್ಫ 25 ಡಬ್ಲೂö್ಯ.ಪಿ. ಅಥವಾ 1 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂö್ಯ.ಪಿ.ಹೆಕ್ಸಾಕೋನಾಜೋಲ್ 2 ಮಿ.ಲೀ ನೀರಿನಲ್ಲಿ ಕರಗಿಸಿ ಸಿಂಪಡಣೆಯನ್ನು ಪುನರಾವರ್ತಿಸಬೇಕು.


ಜಿಗಿಹುಳು; ಬಾಧೆಯು ಹೂ ಬಿಡುವ ಹಂತದಲ್ಲಿ ಹೆಚ್ಚಾಗಿ ಕಂಡುಬರುವುದು. ಜಿಗಿ ಹುಳು ಬೆಣೆ ಆಕಾರ ಕಂಡುಬರುವುದು. ಫ್ರೌಢ ಮತ್ತು ಅಪ್ಸರೆಗಳು ಹೂ ಗೊಂಚಲಿನಿAದ ರಸ ಹೀರುವುದರಿಂದ ಹೂಗಳು ಉದುರುತ್ತವೆ. ಜಿಗಿ ಹುಳುಗಳು ಅಂಟು ಪದಾರ್ಥವನ್ನು ಶ್ರವಿಸುವುದರಿಂದ ಹೂಗೊಂಚಲಿನಲ್ಲಿ ಕಪ್ಪು ಬೂಷ್ಟ್ ಬೆಳವಣಿಗೆಯಾಗುತ್ತದೆ.


ನಿರ್ವಹಣೆ: 2ಗ್ರಾಂ ನೀರಲ್ಲಿ ಕರಗುವ ಗಂಧಕ ಅಥವಾ 0.25 ಮೀ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್‌ನ್ನು ಮುಂಜಾಗ್ರತಾ ಕ್ರಮವಾಗಿ ಸಿಂಪಡಣೆ ಮಾಡಬೇಕು ಅಥವಾ ಅಜಾದಿರೇಕ್ಟಿನ್ 3000 ಪಿ.ಪಿ.ಎಮ್.2 ಮೀ.ಲೀ.ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹೂ ಬಿಡುವ ಸಂದರ್ಭದಲ್ಲಿ ಸಿಂಪಡಿಸಬಹುದು.


ಹೂ ಉದುರುವುದನ್ನು ತಡೆಗಟ್ಟಲು ಪ್ಲಾನೋಫಿಕ್ಸ್ (ಎನ್.ಎನ್.ಎ) 0.3 ಮೀ.ಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು. 


    ಈ ಹಂತದಲ್ಲಿ ಔಷಧಿಗಳ ಸಿಂಪರಣೆಯಿAದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪಿಸುತ್ತದೆ. ಇಲ್ಲದಿದ್ದರೆ ಕಾಯಿಯ ಸಂಖ್ಯೆ  ಕಡಿಮೆ ಆಗುತ್ತವೆ ಮತ್ತು ಇಳುವರಿಗೆ ತೀವ್ರ ಧಕ್ಕೆಯಾಗುತ್ತದೆ.


ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆ ಹಾರ್ಟಿಕ್ಲಿನಿಕ್ ದೂ: ಸಂಖ್ಯೆ: 78991 33206. ಅಥವಾ ಹೋಬಳಿ ಮಟ್ಟದ ಅಧಿಕಾರಿಗಳಿಗೆ  ಸಂಪರ್ಕಿಸಿ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  

 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...