ಸೋಮವಾರ, ಜುಲೈ 5, 2021

 ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ: 

ಪುರುಷ/ಮಹಿಳೆರಿಗೆ ಸಮಾನ ಕೂಲಿ ದರ

ಯಾದಗಿರಿ;ಜುಲೈ-5(ಕ.ವಾ):ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾರ್ಬ್ ಕಾರ್ಡ್ ಇಲ್ಲದಿದ್ದರೆ ಕೂಡಲೇ ಪಡೆದುಕೊಳ್ಳಬೇಕಿದೆ. ಗ್ರಾಮ ಪಂಚಾಯತಿನಲ್ಲಿ, ನಮೂನೆ 6ನ್ನು ತುಂಬಿ ಕೆಲಸಕ್ಕೆ ಬೇಡಿಕೆ ಸಲ್ಲಿಸಬೇಕು. ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ದರ ರೂ.289/- ಸಲಕರಣೆ ವೆಚ್ಚ 10 ರೂ. ಒಟ್ಟಾರೆ 299/- ರೂ.ಗಳನ್ನು ವಾಸವಾಗಿರುವ ಊರಿನಲ್ಲೇ ಕೆಲಸ ನೀಡಲಾಗುವುದು. ನೊಂದಾಯಿತ ಪ್ರತಿ ಅರ್ಹ ಕುಟುಂಬದ ವಯಸ್ಕ ಆ ವರ್ಷದಲ್ಲಿ 100 ದಿನಗಳ ಅಕುಶಲ ಕೂಲಿ ಕೆಲಸವನ್ನು ಒದಗಿಸುವ ಜವಜ್ದಾರಿ ಗ್ರಾಮ ಪಂಚಾಯತಿಯದ್ದಾಗಿರುತ್ತದೆ.

ಕೂಲಿ ಕೆಲಸಕ್ಕೆ ಅರ್ಜಿ ನೀಡಿದ 15 ದಿನಗಳ ಒಳಗೆ ಗ್ರಾಮ ಪಂಚಾಯತಿಯವರು ಕೂಲಿ ಕೆಲಸ ನೀಡದಿದ್ದ ಪಕ್ಷದಲ್ಲಿ ನಿರುದ್ಯೋಗ ಭತ್ಯೆಯನ್ನುನೀಡಲಾಗುವುದು,(100 ದಿನಗಳಿಗೆ ಪಡೆಯಬಹುದಾದ ದಿನಗೂಲಿ ಹಣದ ಮೊತ್ತಕ್ಕೆ ಸಮನಾಗಿ 28900/-ರೂಪಾಯಿಗಳು) ಮತ್ತೇ ಅರ್ಜಿ ಸಲ್ಲಿಸಿದರೆ ಕೆಲಸ ಕೊಡಬೇಕು.

ವೈಯಕ್ತಿಕ ಕಾಮಗಾರಿಗಳು , ರೈತರು ತಮ್ಮ ಜಮೀನುಗಳಲ್ಲಿ ಅನುಷ್ಠಾನಿಸಿಕೊಳ್ಳುವ ಪ್ರಮುಖ ಕಾಮಗಾರಿಗಳು: ತೋಟಗಾರಿಕೆ,ರೇಷ್ಮೆ,ಜಲಾಯನಭಿಧ್ಧಿ(ಕೃಷಿ ಹೊಂಡಾ,ಕAದಕ ಬದು),ಕೃಷಿ ಅರಣ್ಯ,ಜಾನುವಾರು ಶೆಡ್ಡು ನಿರ್ಮಾಣ ಮತ್ತು ಅಜೋಲಾ ತೋಟಿ ನಿರ್ಮಾಣ ಇತ್ಯಾದಿ ಕೂಲಿ ನೀಡಲಾಗುವುದು.

 ಸಮುದಾಯ ಕಾಮಗಾರಿಗಳು:ಸಮಗ್ರ ಕೆರೆ ಅಭಿವೃದ್ಧಿ,ಕಂದಕ ಬಂದಗಳು, ನಾಲಾ ಹೂಳೆತ್ತವುದು, ರಸ್ತೆ ಬದಿ ನಡೆತೋಪು,ಬಹು ಕಮಾನ ತಡೆ ಗೋಡೆ ಇತ್ಯಾಧಿ ಕಾಮಗಾರಿಗಳು ಸೇರಿರುತ್ತವೆ.

ಮನರೇಗಾ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ ಫಲಾನುಭವಿಗಳಿಗೆ 2.50/- ಲಕ್ಷ ಸಹಾಯಧನವನ್ನು ಪಡೆಯಬಹುದಾಗಿದೆ.

ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ, ಬಂಚ್ಚಲಗುAಡಿ ಕಾಮಗಾರಿ, ಕ್ಷೇತ್ರ ಬದು ಕಾಮಗಾರಿ ಒಳಗೊಂಡಿರುತ್ತವೆ.

ಮಹಾತ್ಮಗಾAಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯನ್ನು ಫಲಾನುಭವಿ ಪಡೆಯಲು ಗ್ರಾಮ ಪಂಚಾಯತಿಗೆ ಅರ್ಜಿ ಮೂಲಕ ಸಲ್ಲಿಸಬಹುದು, ಗ್ರಾಮ ಪಂಚಾಯತಿ ಕಚೇರಿಯಲ್ಲಿರುವ ಕಾಮಗಾರಿ ಬೇಡಿಕೆ ಪೆಟ್ಟಿಗೆಯಲ್ಲಿ ಅರ್ಜಿ ಸಲ್ಲಿಸಬಹುದು,ಕೂಲಿ ಮತ್ತು ಕಾಮಗಾರಿ ಬೇಡಿಕೆಯನ್ನು ಕಾಯಕ ಮಿತ್ರ ಮೊಬೈಲ್ ಆಫ್ ಮೂಲಕ ಸಲ್ಲಿಸಬಹುದು ಉಚಿತ ಸಹಾಯವಾಣಿ ಸಂಖ್ಯೆ:1800-42588666 ಮೂಲಕ ಬೇಡಿಕೆ ಸಲ್ಲಿಸಬಹುದು ಎಂದು ಯಾದಗಿರಿ  ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...