“ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”
ಯಾದಗಿರಿ,ಜುಲೈ03(ಕ.ವಾ):- ಕೊರೋನಾ ಸಾಂಕ್ರಾಮಿಕ ರೋಗದಿಂದ ಬಹುತೇಕ ಕ್ಷೇತ್ರಗಳಲ್ಲಿ ಅದರಲ್ಲೂ ಹೆಚ್ಚಾಗಿ ಶಿಕ್ಷಣ, ಹೋಟೆಲ್, ಪ್ರವಾಸೋದ್ಯಮದಲ್ಲಿ ಉದ್ಯೋಗ ನಷ್ಟವಾಗಿವೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಶಿಕ್ಷಕರು, ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್ ಉದ್ಯೋಗಿಗಳು ಸೇರಿದಂತೆ ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡ ಆಸಕ್ತರಿಗೆ ಉದ್ಯೋಗದ ಕೌಶಲ್ಯಗಳನ್ನು ನವೀನ ಕಾರ್ಯಕ್ರಮದ ಮೂಲಕ “ಕೌಶಲ್ಯ ಕಲಿಕೆ ಹಾಗೂ ಉಚಿತ ತರಬೇತಿ”ಯನ್ನು ನೀಡಲಿದೆ.
ಜಿಲ್ಲೆಯ ಆಸಕ್ತರು ತಮ್ಮ ವಿವರಗಳನ್ನು hಣಣಠಿs://ಛಿoviಜhoಠಿes.ಞಚಿushಚಿಟಞಚಿಡಿ.ಛಿom ಇಲ್ಲಿ ಭರ್ತಿ ಮಾಡಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9880072695 ವಿಠೋಬ ಮೊ,ಸಂ: 9986657432 ಸಂರ್ಪಕಿಸಬಹುದಾಗಿದೆ. ಹಾಗೂ ನೋಂದಣಿಗಾಗಿ ಸಹಾಯಕ ನಿರ್ದೇಶಕರು, ಕೌಶಲ್ಯಭಿವೃದ್ಧಿ ಅಧಿಕಾರಿ, ಬಸಪ್ಪ ತಳವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ