ಶುಕ್ರವಾರ, ಜುಲೈ 16, 2021

  ತಂಬಾಕು ಉತ್ಪನ್ನ ಮಾರಾಟ ದಾಳಿ: ದಂಡ ವಸೂಲಿ

ಯಾದಗಿರಿ,ಜುಲೈ16,(ಕ.ವಾ): ಜಿಲ್ಲೆಯ ಸೈದಾಪುರ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣಕೋಶ ಅಧಿಕಾರಿಗಳು ದಾಳಿ ನಡೆಸಿ ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ಎಚ್ಚರಿಕೆ ನೀಡಿ, ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿಗೆ  ಸೆಕ್ಸನ್ 4 ಮತ್ತು 6 ಎ ನಾಮಫಲಕಗಳನ್ನು ವಿತರಿಸಲಾಯಿತು.

ಜಿಲ್ಲೆಯನ್ನು ಕೋಟ್ಪಾ 2003 ರ ಕಾಯ್ದೆಯ ಉನ್ನತ ಅನುಷ್ಠಾನ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಒಂದು ವಾರಗಳ ಕಾಲ ತಂಬಾಕು ದಾಳಿಯನ್ನು ಹಮ್ಮಿಕೊಂಡಿದ್ದು, ಜುಲೈ 15ರಂದು ಸೈದಾಪೂರ, ಪಟ್ಟಣದಲ್ಲಿ ಕೋಟ್ಪಾ 2003 ರ ದಾಳಿಯನ್ನು ಕೈಗೊಂಡು ಸಾರ್ವಜನಿಕರಿಗೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ತಂಬಾಕು ಮುಕ್ತ ಯುವ ಪೀಳಿಗೆ ಕುರಿತು ಮಾಹಿತಿ ನೀಡಲಾಯಿತು.


ಕೋಟ್ಪಾ 2003 ರ ಸೆಕ್ಷನ್ 4 ಉಲ್ಲಂಘಿಸಿದವರ ವಿರುದ್ಧ 76 ಪ್ರಕರಣಗಳನ್ನು ದಾಖಲಿಸಿ ರೂ.5500/- ದಂಡ ವಸೂಲಿ ಮಾಡಲಾಯಿತು. ಹಾಗೂ ಸೆಕ್ಸನ್ 6ಎ ಅಡಿಯಲ್ಲಿ 25 ಪ್ರಕರಣಗಳನ್ನು ದಾಖಲಿಸಿ ರೂ 2450 /- ದಂಡ ವಸೂಲಿ ಮಾಡಲಾಯಿತು. ಹಾಗೂ ಸೆಕ್ಷನ್ ಬಿ ಅಡಿಯಲ್ಲಿ 22 ಪ್ರಕರಣ ದಾಖಲಿಸಿ ರೂ 2450/- ದಂಡ ವಸೂಲಿ ಮಾಡಲಾಯಿತ್ತು. ಒಟ್ಟಾರೆಯಾಗಿ 123 ಪ್ರಕರಣ ದಾಖಲಿಸಿ ರೂ 10400/- ದಂಡ ವಸೂಲಿ ಮಾಡಿಲಾಗಿದೆ ಎಂದು ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗಿಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ ತಿಳಿಸಿದ್ದಾರೆ.


ಜಿಲ್ಲಾ ಸಲಹೆಗಾರಾರದ ಮಹಾಲಕ್ಷಿö್ಮÃ ಸಜ್ಜನ್ ಸೇರಿದಂತೆ ಕಂದಾಯ ಇಲಾಖೆ, ಆರೊಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ

                                                               ವಾ.ವಿ.ಸಂ.150 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ...