ಶನಿವಾರ, ಜುಲೈ 3, 2021

 ಯಾದಗಿರಿ ನಗರಸಭೆ ಸ್ಥಿರಾಸ್ತಿಗಳ ತೆರಿಗೆ ಪಾವತಿಸಲು ಸೂಚನೆ

ಯಾದಗಿರಿ,ಜುಲೈ03(ಕ.ವಾ):- ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿ ಮಾಲೀಕರು ಹಾಗೂ ಅನುಭೋಗದಾರರಿಗೆ 2021-22ನೇ ಸಾಲಿನ ಆರ್ಥಿಕ ವರ್ಷದ ಆಸ್ತಿ ತೆರಿಗೆ ಪಾವತಿಗೆ ನೀಡಲಾಗುತ್ತಿರುವ ಶೇಕಡ 5ರ ರಿಯಾಯತಿಯ ಕಾಲಾವಧಿಯನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದ್ದು, ಆಗಸ್ಟ್ 1ರ ನಂತರ ಪಾವತಿಸಲಾಗುವ ಆಸ್ತಿ ತೆರಿಗೆಯ ಮೇಲೆ ಪ್ರತಿ ತಿಂಗಳಿಗೆ ಶೇಕಡ 2ರಂತೆ ದಂಡ ವಿಧಿಸಲಾಗುವುದದು ಎಂದು ನಗರಸಭೆ ಪೌರಾಯುಕ್ತ ಬಿ.ಟಿ.ನಾಯಕ ಅವರು ತಿಳಿಸಿದ್ದಾರೆ.


 ನಗರಸಭೆಗೆ ಬಾಕಿ ಇರುವ ಅಥವಾ ಚಾಲ್ತಿ ಸಾಲಿಗೆ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ, ನೀರಿನ ಬಳಕೆದಾರರ ಶುಲ್ಕ, ಉದ್ದಿಮೆ ಪರವಾನಿಗೆ, ಮಳಿಗೆ ಬಾಡಿಗೆ, ಜಾಹೀರಾತು ಶುಲ್ಕ ಹಾಗೂ ಇತರ ಶುಲ್ಕಗಳನ್ನು ನಿಗಧಿತ ಅವಧಿಯ ಒಳಗಾಗಿ ಪಾವತಿಸಿ ಯಾದಗಿರಿ ನಗರದ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

                                                             ವಾ.ವಿ.ಸ.45 ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ ಅವರ ಜಿಲ್ಲಾ ಪ್ರವಾಸ ಯಾದಗ...